ಡೈನಾಮಿಕ್ ಪ್ರಿನ್ಸ್ ‘ಅಬ್ಬರ’ಕ್ಕೆ ಹ್ಯಾಟ್ರಿಕ್ ಹೀರೋ ಸಾಥ್ – ಟೈಟಲ್ ಲಾಂಚ್ ಮಾಡಿದ ಶಿವಣ್ಣ

Public TV
1 Min Read
ABBARA First Look Motion Poster shivaraj kumar 1

ಬೆಂಗಳೂರು: ಚಂದನವನದ ಹ್ಯಾಂಡ್‌ಸಮ್‌ ನಟ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಇನ್ಮುಂದೆ ತಮ್ಮ ‘ಅಬ್ಬರ’ ತೋರಿಸಲು ಸಜ್ಜಾಗಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಸದಾ ಬ್ಯುಸಿಯಾಗಿರುವ ಪ್ರಜ್ವಲ್ ದೇವರಾಜ್ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಕೆ. ರಾಮ್ ನಾರಾಯಣ್ ನಿರ್ದೇಶನದ ಅಬ್ಬರ ಸಿನಿಮಾದಲ್ಲಿ ಡೈನಾಮಿಕ್ ಪ್ರಿನ್ಸ್ ನಟಿಸುತ್ತಿದ್ದು, ಮೂರು ಶೇಡ್‌ನಲ್ಲಿ ತಮ್ಮ ಅಭಿಮಾನಿ ಬಳಗಕ್ಕೆ ಕಿಕ್ ಕೊಡಲಿದ್ದಾರೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಅಬ್ಬರ’ ಟೈಟಲ್ ಹಾಗೂ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ABBARA First Look Motion Poster Prajwal Devraj

ರಾಜಾ ಮಾರ್ತಾಂಡ ಸಿನಿಮಾ ನಿರ್ದೇಶಕ ಕೆ.ರಾಮ್ ನಾರಾಯಣ್ ‘ಅಬ್ಬರ’ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಬಸವರಾಜ್ ಮಂಚಯ್ಯ ಹಿತ್ಲಾಪುರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರವಿ ಬಸ್ರೂರು ಪವರ್‌ಫುಲ್‌ ಮ್ಯೂಸಿಕ್, ಜೆ.ಕೆ.ಗಣೇಶ್ ಸಿನಿಮಾಟೋಗ್ರಫಿ, ವಿಕಟ ಕವಿ ಯೋಗರಾಜ್ ಭಟ್ ಸಾಹಿತ್ಯ ಕೃಷಿ ಅಬ್ಬರ ಸಿನಿಮಾಗಿದೆ. ಹೀಗೆ ಪವರ್ ಫುಲ್ ಟಿಂ ಕಟ್ಟಿಕೊಂಡಿರುವ ರಾಮ್‌ ನಾರಾಯಣ್‌ ‘ಅಬ್ಬರ’ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಪ್ರಜ್ವಲ್ ಅಭಿಮಾನಿ ಬಳಗದಲ್ಲಿ ಹುಟ್ಟುಹಾಕಿದ್ದಾರೆ.

ಸಾಹಸ ದೃಶ್ಯಗಳಲ್ಲಿ ಕಿಕ್ ನೀಡಲು ಡಿಫರೆಂಟ್ ಡ್ಯಾನಿ, ಪಳನಿರಾಜ್, ಮಾಸ್ ಮಾದ ಈ ಮೂವರ ಸಾಹಸ ನಿರ್ದೇಶನ ಅಬ್ಬರ ಚಿತ್ರಕ್ಕಿದೆ. ಸಿ ಅಂಡ್ ಎಂ ಮೂವೀಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಲಾಕ್‌ಡೌನ್‌ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಅರ್ಧದಷ್ಟು ಚಿತ್ರೀಕರಣ ಕಂಪ್ಲೀಟ್ ಮಾಡಿರಬೇಕಿತ್ತು. ಅನ್‌ಲಾಕ್‌ ಬಳಿಕ ಚಿತ್ರೀಕರಣಕ್ಕೆ ಸಜ್ಜಾಗಿರೋ ‘ಅಬ್ಬರ’ ಸಿನಿಮಾ ತಂಡ ಸದ್ಯದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡಲಿದೆ.

Share This Article
Leave a Comment

Leave a Reply

Your email address will not be published. Required fields are marked *