ಕಿಚ್ಚನ ಜೊತೆ ಸ್ಟೆಪ್ ಹಾಕುವ ಬಾಲಿವುಡ್ ಬೆಡಗಿ ಯಾರು?

Public TV
2 Min Read
phantom 1

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಹವಾ ಜೋರಾಗಿದ್ದು, ಹೆಚ್ಚಿನ ಅಪ್‍ಡೇಟ್ ಸಹ ಸಿಗುತ್ತಿದೆ. ಇದೀಗ ಮತ್ತೊಂದು ಸುದ್ದಿ ವೈರಲ್ ಆಗಿದೆ. ಫ್ಯಾಂಟಮ್ ಸಿನಿಮಾದಲ್ಲಿ ಕಿಚ್ಚನ ಜೊತೆ ಬಾಲಿವುಡ್ ಬೆಡಗಿಯರು ಸ್ಟೆಪ್ ಹಾಕಲಿದ್ದಾರಂತೆ.

PHANTOM 1

ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಸಿನಿಮಾ ಭಾರೀ ಸದ್ದು ಮಾಡುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಸದ್ಯ ಹೈದರಾಬಾದ್‍ನಲ್ಲಿ ಚಿತ್ರತಂಡ ಮೊಕ್ಕಾಂ ಹೂಡಿದೆ. ಅಲ್ಲದೆ ಇದಾದ ಬಳಿಕ ಕೊನೇಯ ಹಂತದ ಚಿತ್ರೀಕರಣವನ್ನು ಕೇರಳದಲ್ಲಿ ಮಾಡಲು ನಿರ್ಧರಿಸಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಸಿನಿಮಾ ಅಂಗಳದಿಂದ ಹೊರ ಬಿದ್ದಿದೆ.

P4PHANTOM080210

ಇತ್ತೀಚೆಗೆ ತಾವು ವರ್ಕೌಟ್ ಮಾಡಿ ದಂಡಿಸಿರುವ ದೇಹದ ಹಿಂಬದಿಯ ಫೋಟೋವನ್ನು ಹಂಚಿಕೊಂಡಿದ್ದ ಕಿಚ್ಚ, ಒಳ್ಳೆಯ ಆಹಾರ, ಡಿಸೆಂಟ್ ಲೈಫ್‍ಸ್ಟೈಲ್, ಅಲ್ಪ ಪ್ರಮಾಣದ ಶಿಸ್ತು ಇವುಗಳ ಜೊತೆಗೆ ತುಂಬಾ ದಿನಗಳ ನಂತರ ಮತ್ತೆ ಒಳ್ಳೆಯ ವರ್ಕೌಟ್ ಮಾಡಿದ್ದೇನೆ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಫಿಟ್ನೆಸ್ ಮಂತ್ರವನ್ನು ರೀವಿಲ್ ಮಾಡಿದ್ದರು. ಅಲ್ಲದೆ ಕಳೆದ ಒಂದು ತಿಂಗಳಿನಿಂದ ಫ್ಯಾಂಟಮ್ ಸಿನಿಮಾ ಚಿತ್ರೀಕರಣದಲ್ಲಿ ನಿರತವಾಗಿದ್ದು, ಕೊನೆಯ ಹಂತಕ್ಕೆ ತಲುಪ್ಪಿದ್ದೇವೆ. ಡಿಸೆಂಬರ್ 4ರಿಂದ ಆರಂಭವಾಗಲಿರುವ ಲಾಸ್ಟ್ ಶೆಡ್ಯೂಲ್‍ಗೆ ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡು ಸುದ್ದಿಯಾಗಿದ್ದರು.

nora fatehi 2

ಇದೀಗ ವಿಶೇಷ ಡ್ಯಾನ್ಸ್ ಕುರಿತು ಚಿತ್ರ ತಂಡ ಯೋಚಿಸಿದ್ದು, ಅದರಲ್ಲೂ ಬಾಲಿವುಡ್ ಬೆಡಗಿಯರನ್ನು ಕರೆ ತರಲು ಚಿಂತನೆ ನಡೆಸಿದ್ದಾರೆ. ಚಿತ್ರ ತಂಡ ಈಗಾಗಲೇ ಇಬ್ಬರನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಬಾಲಿವುಡ್ ಸೆನ್ಸೇಷನ್ ನಟಿ ಕತ್ರಿನಾ ಕೈಫ್ ಹಾಗೂ ನೃತ್ಯಗಾರ್ತಿ ನೋರಾ ಫತೇಹಿ ಅವರನ್ನು ಕಿಚ್ಚಿನ ಜೊತೆ ಹೆಜ್ಜೆ ಹಾಕಲು ಅಪ್ರೋಚ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಪ್ಯಾನ್ ಇಂಡಿಯಾ ರೀತಿ ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ.

nora fatehi

ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತಗೊಂಡಿತ್ತು, ಬಳಿಕ ಸರ್ಕಾರ ಅನುಮತಿ ನೀಡಿದ ಮೇಲೆ ಹೈದರಾಬಾದ್‍ನಲ್ಲಿ ಶೂಟಿಂಗ್ ಆರಂಭವಾಗಿತ್ತು. ಇದೀಗ ಕೊನೆಯ ಹಂತದ ಚಿತ್ರೀಕರಣವಷ್ಟೇ ಬಾಕಿ ಇದೆ. ಕೇರಳದಲ್ಲಿ ಚಿತ್ರೀಕಣಕ್ಕೆ ತಂಡ ಸಜ್ಜಾಗುತ್ತಿದೆ. ಈ ಮಧ್ಯೆಯೇ ಈ ಸಪ್ರ್ರೈಸಿಂಗ್ ಸುದ್ದಿ ಹೊರ ಬಿದ್ದಿದೆ.

733455 katrina suraiyya to

ಚಿತ್ರವನ್ನು ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದು, ಜಾಕ್ ಮಂಜು ನಿರ್ಮಿಸುತ್ತಿದ್ದಾರೆ. ಅಜ್ನೀಶ್ ಲೋಕ್‍ನಾಥ್ ಸಂಗೀತ ಚಿತ್ರಕ್ಕಿದೆ. ಶೂಟಿಂಗ್ ವೇಳೆ ಬಿಡುಗಡೆಯಾದ ಪೋಸ್ಟರ್‍ಗಳು ಕುತೂಹಲವನ್ನು ಹೆಚ್ಚಿಸಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿವೆ.

Share This Article
Leave a Comment

Leave a Reply

Your email address will not be published. Required fields are marked *