ಪತ್ನಿ ವಿರುದ್ಧ ಲವ್ ಜಿಹಾದ್ ಕೇಸ್ ದಾಖಲಿಸಿದ ಪತಿ

Public TV
2 Min Read
Delhi Lovejihad

– ತವರಿಗೆ ಬಂದ ಪತಿಯನ್ನ ಮತಾಂತರಗೊಳಿಸಿದ್ರು

ನವದೆಹಲಿ: ಮದುವೆಯಾದ ಎರಡು ವರ್ಷದ ಬಳಿಕ ಪತ್ನಿ ವಿರುದ್ಧ ಪತಿ ಲವ್ ಜಿಹಾದ್ ಕೇಸ್ ದಾಖಲಿಸಿರುವ ಘಟನೆ ದೆಹಲಿಯ ಪ್ರೇಮ ನಗರದಲ್ಲಿ ನಡೆದಿದೆ.

ಮೋಹಿತ್ ಪತ್ನಿ ರೇಷ್ಮಾ (ಹೆಸರು ಬದಲಾಯಿಸಲಾಗಿದೆ) ವಿರುದ್ಧ ದೆಹಲಿಯ ಪ್ರೇಮನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತವರಿನಲ್ಲಿದ್ದ ಪತ್ನಿಯನ್ನ ಕರೆಯಲು ಹೋದಾಗ ಆಕೆಯ ಕುಟುಂಬಸ್ಥರು ನನ್ನನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ ಪತಿ ದೂರಿನಲ್ಲಿ ದಾಖಲಿಸಿದ್ದಾರೆ.

Love Jihad

ಎಫ್‍ಬಿ ಫೋಟೋಗೆ ಮೋಹಿತನಾಗಿದ್ದ: ಮೋಹಿತ್ ಎರಡು ವರ್ಷಗಳ ಹಿಂದೆ ಪತ್ನಿಯ ಫೋಟೋವನ್ನು ಫೇಸ್‍ಬುಕ್ ನಲ್ಲಿ ನೋಡಿದ್ದನು. ಮದುವೆಗೂ ಮುನ್ನ ಫೇಸ್‍ಬುಕ್ ನಲ್ಲಿ ಸೋನಿಯಾ ಎಂದು ಪರಿಚಯ ಮಾಡಿಕೊಂಡಿದ್ದಳು. ನಾನು ಸಹ ಆಕೆಯ ಸೌಂದರ್ಯಕ್ಕೆ ಮಾರು ಹೋಗಿದ್ದೆ. ಇಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದಾಗ ತಾನು ಮುಸ್ಲಿಂ ಸಮುದಾಯಕ್ಕೆ ಸೇರಿದವಳು, ತನ್ನ ನಿಜ ಹೆಸರು ರೇಷ್ಮಾ ಎಂದು ಹೇಳಿದ್ದಳು. ಇದನ್ನೂ ಓದಿ: ಯುವತಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್- ಮತಾಂತರಕ್ಕೆ ಒಪ್ಪದ್ದಕ್ಕೆ ಕೊಲೆ, ಲವ್ ಜಿಹಾದ್ ಎಂದ ಪೋಷಕರು

marriage fb 020419062152 1

ಇಬ್ಬರೂ ಪರಸ್ಪರ ಪ್ರೀತಿಸಿದ್ದರಿಂದ 2018ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದರು. ಮದುವೆಗೂ ಮುನ್ನವೇ ರೇಷ್ಮಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಳು. ದಂಪತಿಯ ಪ್ರೀತಿಯ ಸಂಕೇತವಾಗಿ ಒಂದು ವರ್ಷದ ಮಗು ಸಹ ಇದೆ. ಇದನ್ನೂ ಓದಿ: ಮದ್ವೆ ಆಗೋದು ಹೇಳಿ ಸೆಕ್ಸ್- ಗರ್ಭಿಣಿಯಾಗ್ತಿದ್ದಂತೆ ಬಯಲಾಯ್ತು ಪ್ರೇಮಿಯ ಕರಾಳ ಮುಖ

fb friend Request 2

ಕೆಲ ದಿನಗಳ ಹಿಂದೆ ಪತ್ನಿ ದಿಢೀರ್ ಅಂತ ಗೋಂಡಾದಲ್ಲಿರುವ ತವರು ಮನೆ ಸೇರಿದ್ದಳು. ಆಕೆಯನ್ನು ಕರೆಯಲು ಅಮ್ಮನ ಜೊತೆ ಗೋಂಡಾಗೆ ತೆರಳಿದಾಗ ನನ್ನನ್ನು ಬಲವಂತವಾಗಿ ಮತಾಂತರಗೊಳಿಸಿ, ನನ್ನಿಂದ 80 ಸಾವಿರ ರೂ. ಸಹ ಪಡೆದುಕೊಂಡಿದ್ದಾರೆ. ಮೋಹಿತ್ ಆಗಿದ್ದ ನನನ್ನನ್ನು ಅಬುಜರ್ ಅನ್ಸಾರಿ ಮಾಡಿದರು. ಗೋಂಡಾದಿಂದ ಹಿಂದಿರುಗಿದ ಬಳಿಕ ಮೋಹಿತ್ ದೆಹಲಿಯ ಪ್ರೇಮನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮೂವರು ಹೆಂಡ್ತೀರು, ನಾಲ್ವರು ಮಕ್ಕಳು – ಅಪ್ರಾಪ್ತೆಯ ರೇಪ್, ಪ್ರಕಟವಾಯ್ತು ಲವ್ ಜಿಹಾದ್ ಕೇಸ್

Marriage muslim 1

2019ರಲ್ಲಿ ರೇಷ್ಮಾ, ಪತಿ ಮೋಹಿತ್ ಮತ್ತು ಆತನ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಮತ್ತು ಕಿರುಕುಳದ ಪ್ರಕರಣ ದಾಖಲಿದ್ದರು. ಈ ಸಂಬಂಧ ಎಫ್‍ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಇದೀಗ ಮೋಹಿತ್ ಪತ್ನಿ ವಿರುದ್ಧ ಲವ್ ಜಿಹಾದ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ ಒಂದು ತಂಡ ಗೋಂಡಾಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ. ಇದನ್ನೂ ಓದಿ: ಲವ್ ಜಿಹಾದ್ ಪ್ರಕರಣ ಸಾಬೀತು – ಪ್ರೀತಿಗಾಗಿ ಅಬುಧಾಬಿಗೆ ಹಾರಿದ ಕ್ರಿಶ್ಚಿಯನ್ ಯುವತಿ

Share This Article
Leave a Comment

Leave a Reply

Your email address will not be published. Required fields are marked *