ಲವ್ ಜಿಹಾದ್ ಪ್ರಕರಣ ಸಾಬೀತು – ಪ್ರೀತಿಗಾಗಿ ಅಬುಧಾಬಿಗೆ ಹಾರಿದ ಕ್ರಿಶ್ಚಿಯನ್ ಯುವತಿ

Public TV
2 Min Read
love jihad

– ಎನ್‍ಸಿಎಂ ಉಪಾಧ್ಯಕ್ಷರಿಂದ ಅಮಿತ್ ಶಾಗೆ ಪತ್ರ
– ಎರಡು ಲವ್ ಜಿಹಾದ್ ಕೇಸ್ ಉಲ್ಲೇಖಿಸಿದ ಜಾರ್ಜ್ ಕುರಿಯನ್

ತಿರುವನಂತಪುರಂ: ಕೇರಳದಲ್ಲಿ ಬೆಳಕಿಗೆ ಬರುತ್ತಿರುವ ‘ಲವ್ ಜಿಹಾದ್’ ಪ್ರಕರಣಗಳ ಕುರಿತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ(ಎನ್‍ಸಿಎಂ) ಉಪಾಧ್ಯಕ್ಷ ಜಾರ್ಜ್ ಕುರಿಯನ್ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ ಜಾರ್ಜ್ ಕುರಿಯನ್ ಅವರು ಎರಡು ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಮೊದಲ ಪ್ರಕರಣ ಕೋಯಿಕ್ಕೋಡ್ ಕ್ರಿಶ್ಚಿಯನ್ ಯುವತಿಯದ್ದಾಗಿದ್ದು, ಆರೋಪಿಗಳು ಅತ್ಯಾಚಾರಗೈದು ಆಕೆಯ ಬೆತ್ತಲೆ ಚಿತ್ರಗಳನ್ನು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿದ್ದಾರೆ. ಅಲ್ಲದೆ, ಯುವತಿಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಆಕೆ ಓದುತ್ತಿದ್ದ ಕ್ರಿಶ್ಚಿಯನ್ ಕಾಲೇಜಿನ ಹಾಸ್ಟೆಲ್ ಹೊರಗಿನಿಂದ ಕಿಡ್ನ್ಯಾಪ್ ಮಾಡಲು ಸಹ ಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.

ಎರಡನೇ ಪ್ರಕರಣ ದೆಹಲಿಯ ಹುಡುಗಿಯೊಬ್ಬಳ ಕುರಿತಾಗಿದ್ದು, ಆಕೆಯನ್ನು ಅಪಹರಿಸಿ ಪಶ್ಚಿಮ ಏಷ್ಯಾದ ದೇಶಕ್ಕೆ ಕರೆದೊಯ್ಯಲಾಗಿದೆ ಎಂದು ಅವರ ಪೋಷಕರು ಆರೋಪಿಸಿದ್ದಾರೆ. ನಮ್ಮ ಮಗಳಿಗೆ ದಾರಿ ತಪ್ಪಿಸಿ, ಮೋಸ ಮಾಡಿ, ಬ್ರೇನ್ ವಾಶ್ ಮಾಡಿ ಅಪಹರಿಸುವ ಮೂಲಕ ದಾರಿ ತಪ್ಪಿಸಿರಬಹುದು. ಇಸ್ಲಾಮಿಕ್ ಸ್ಟೇಟ್ಸ್‍ನಂತಹ ಗುಂಪುಗಳ ಮೂಲಕ ಅಪಹರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

19 ವರ್ಷದ ಕ್ರಿಶ್ಚಿಯನ್ ಯುವತಿ ನಾನು ಪ್ರೀತಿಸಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಗೆ ಬಂದಿದ್ದೇನೆ ಎಂದು ಬಹಿರಂಗವಾಗಿ ತಿಳಿಸಿದ್ದಾಳೆ. ಅಲ್ಲದೆ, ಈ ತಿಂಗಳ ಆರಂಭದಲ್ಲಿ ಅಬುಧಾಬಿಗೆ ಹಾರಿದ ಯುವತಿ, ನನ್ನನ್ನು ಯಾರೂ ಅಪಹರಿಸಿಲ್ಲ ಅಥವಾ ಯಾವುದೇ ಭಯೋತ್ಪಾದಕ ಗುಂಪಿನಲ್ಲಿ ನಾನು ಸೇರಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.

ಈ ಆರೋಪ ಸತ್ಯವಲ್ಲ, ನಾನು ಸ್ವಇಚ್ಛೆಯಿಂದ ಅಬುಧಾಬಿಗೆ ಬಂದಿದ್ದೇನೆ. ಯಾರೂ ನನ್ನನ್ನು ಒತ್ತಾಯಿಸಿಲ್ಲ. ನಾನು ಭಾರತದ ವಯಸ್ಕ ಪ್ರಜೆ ಹಾಗೂ ನಾನು ನನ್ನ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಹೇಳಿದ್ದಾಳೆ. ಹುಡುಗಿಯನ್ನು ಸಿಯಾನಿ ಎಂದು ಗುರುತಿಸಲಾಗಿದೆ. ಈಗ ಅವಳ ಹೆಸರನ್ನು ಆಯಿಷಾ ಎಂದು ಬದಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

Love Jihad

ಸಿಯಾನಿ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ಸೆಪ್ಟೆಂಬರ್ 18ರ ವರೆಗೆ ತರಗತಿಗೆ ಹಾಜರಾಗಿದ್ದಳು ಎಂದು ವರದಿಯಾಗಿದೆ. ಭಾರತೀಯನನ್ನು ಅದೇ ದಿನ ಮದುವೆಯಾಗಲು ಯುವತಿ ಅಬುಧಾಬಿಗೆ ಹಾರಿದ್ದಾಳೆ, ಇವರಿಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದರು ಎಂದು ಹೇಳಲಾಗಿದೆ.

ಈ ಕುರಿತು ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ ಸಿಯಾನಿ ನನ್ನ ಇಚ್ಚೆಯಂತೆ ಇಸ್ಲಾಂಗೆ ಮತಾಂತರಗೊಂಡಿದ್ದೇನೆ. ಸೆಪ್ಟೆಂಬರ್ 24ರಂದು ಅಬುಧಾಬಿ ನ್ಯಾಯಾಲಯದಲ್ಲಿ ಧರ್ಮವನ್ನು ಸ್ವೀಕರಿಸಿದ್ದೇನೆ. ನನ್ನನ್ನು ಅಪಹರಿಸಿದ್ದಾರೆ ಅಥವಾ ಭಯೋತ್ಪಾದಕರ ಗುಂಪಿನ ಒಂದು ಭಾಗ ಎಂದು ಹೇಳುತ್ತಿರುವುದು ನಕಲಿ ಸುದ್ದಿ ಎಂದು ತಿಳಿಸಿದ್ದಾಳೆ.

couple

ಸುದ್ದಿ ತಿಳಿದ ನಂತರ ಅವಳ ಸಹೋದರ ಸೇರಿದಂತೆ ತಂದೆ, ತಾಯಿ ಅಬುಧಾಬಿಗೆ ತೆರಳಿದ್ದು, ಮರಳಿ ಬರುವಂತೆ ಸಿಯಾನಿಯನ್ನು ಕೇಳಿಕೊಂಡಿದ್ದಾರೆ. ಈ ವೇಳೆ ಆಕೆ ನಾನು ಬರುವುದಿಲ್ಲ, ನಾನು ಮದುವೆಯಾಗಿರುವುದು ಯುಎಇನಲ್ಲಿ ವಾಸಿಸಲು ಎಂದು ತಿಳಿಸಿದ್ದಾಳೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *