ಟ್ರಂಪ್‌ಗೆ ಸೋಲು, ಬೈಡನ್‌ಗೆ ಅಧ್ಯಕ್ಷ ಪಟ್ಟ – ಅಧಿಕೃತ ಘೋಷಣೆಯೊಂದೇ ಬಾಕಿ

Public TV
1 Min Read
donald trump joe biden us election

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ ಜಯ ಗಳಿಸಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿ ಬೈಡನ್‌ ಜಯಗಳಿಸುವ ಮೂಲಕ ಒಟ್ಟು 284 ಮತಗಳನ್ನು ಗೆದ್ದಿದ್ದು, ಟ್ರಂಪ್‌ 214 ಮತಗಳನ್ನು ಮಾತ್ರ ಗೆದ್ದುಕೊಂಡಿದ್ದಾರೆ. ಅಮೆರಿಕದ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.

ಬೈಡನ್‌ 50.6% ಅಂದರೆ 7,48,47,834 ಮತ ಗಳಿಸಿದರೆ ಡೊನಾಲ್ಡ್‌ ಟ್ರಂಪ್‌ 47.7% ಅಂದರೆ 7,05,91,531 ಮತಗಳನ್ನು ಗಳಿಸಿದ್ದಾರೆ. ಅಮೆರಿಕದಲ್ಲಿ ಇನ್ನೂ ಮತ ಎಣಿಕೆ ಪೂರ್ಣಗೊಂಡಿಲ್ಲ.

ಫಲಿತಾಂಶ ತಡವಾಗುತ್ತಿರುವ ಕಾರಣ ಅಮೆರಿಕಾದಲ್ಲಿ ಹಿಂಸಾಚಾರ ಭುಗಿಲೇಳುತ್ತಿದೆ. ಫ್ಲೋರಿಡಾದಲ್ಲಿ ಟ್ರಂಪ್ ಬೆಂಬಲಿಗರು ನಡೆಸುತ್ತಿದ್ದ ಕಾರ್ಯಕ್ರಮದಲ್ಲಿ ಕಾರಲ್ಲಿ ಬಂದ ಅಗಂತಕನೊಬ್ಬ ಮನಸೋಇಚ್ಚೆ ಗುಂಡು ಹಾರಿಸಿದ್ದು, ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡೇ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

us results

ಈ ಮಧ್ಯೆ, ಟ್ರಂಪ್ ವಿರುದ್ಧ 40 ಲಕ್ಷ ಮತಗಳಿಂದ ಗೆಲ್ತೇನೆ ಎಂದು ಜೋ ಬೈಡನ್ ಹೇಳಿಕೊಂಡಿದ್ದಾರೆ. ಆದರೆ ಅಕ್ರಮ ಮಾರ್ಗದಲ್ಲಿ ಅಧ್ಯಕ್ಷ ಸ್ಥಾನ ಅಲಂಕರಿಸೋದು ತರವಲ್ಲ ಎಂದು ಟ್ರಂಪ್ ತಿರುಗೇಟು ನೀಡಿದ್ದಾರೆ. ಬೈಡನ್ ಬೆಂಬಲಿಗರು ಮಾತ್ರ, ಟ್ರಂಪ್ ವೈಟ್ ಹೌಸನ್ನು ಖಾಲಿ ಮಾಡ್ಬೇಕು ಅಂತಾ ಆಗ್ರಹಿಸ್ತಿದ್ದಾರೆ.

ಟ್ರಂಪ್ ಕೋರ್ಟ್‍ಗೆ ಹೋದರೂ ಡಿಸೆಂಬರ್ 8ರೊಳಗೆ ಫಲಿತಾಂಶ ಪ್ರಕಟವಾಗಲೇಬೇಕಿದೆ. ಜನವರಿ 20ರಂದು ಹೊಸ ಅಧ್ಯಕ್ಷರು ಪ್ರಮಾಣವಚನ ಸ್ವೀಕರಿಸಲೇಕು. ಈ ಡೆಡ್‍ಲೈನನ್ನು ಯಾವ ಕೋರ್ಟ್ ಕೂಡ ತಡೆಯಲು ಆಗುವುದಿಲ್ಲ ಎಂದು ಪರಿಣಿತರು ಅಭಿಪ್ರಾಯ ಪಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *