ಮಾರುವೇಷದಲ್ಲಿ ದಸರಾ ವೀಕ್ಷಿಸಿದ ಸ್ಯಾಂಡಲ್‍ವುಡ್ ಖ್ಯಾತ ನಟ

Public TV
3 Min Read
ninasam satish

ಮೈಸೂರು: ಸ್ಟಾರ್ ನಟ ಎಂದರೆ ಸಾಮಾನ್ಯ ದಿನಗಳಲ್ಲೇ ಜನ ಮುಗಿ ಬೀಳುತ್ತಾರೆ. ಇನ್ನೂ ದಸರಾ ಸಂದರ್ಭದಲ್ಲಿ ಕೇಳ್ತೀರಾ ಇರುವೆ ತರ ಮುತ್ತಿಕೊಳ್ಳುತ್ತಾರೆ. ಇದರಿಂದಾಗಿಯೇ ಹಲವು ನಟ, ನಟಿಯರು ಮಾರುವೇಷದಲ್ಲಿ ಸುತ್ತಾಡುತ್ತಾರೆ. ಅದೇ ರೀತಿ ದಸರಾ ನೋಡಲು ನಟ ನೀನಾಸಂ ಸತೀಶ್ ಮಾರುವೇಷದಲ್ಲಿ ಮೈಸೂರು ಸುತ್ತಿದ್ದಾರೆ.

mysuru dasara ninasam satish 1

ಹೌದು ಮೈಸೂರು ದಸರಾ ನೋಡುವ ಆಸೆ ಯಾರಿಗಿರಲ್ಲ ಹೇಳಿ, ಅದರೆ ಜನಪ್ರಿಯ ನಟರು ಜನಸಾಮಾನ್ಯರಂತೆ ಜಾಲಿಯಾಗಿ ನಿಂತು ದಸರಾ ವೀಕ್ಷಿಸಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ಅಭಿಮಾನಿಗಳು ಅವರನ್ನು ನೋಡಲು ಮುಗಿ ಬೀಳುತ್ತಾರೆ. ಇದಕ್ಕಾಗಿ ನಟ ನಿನಾಸಂ ಸತೀಶ್ ಭರ್ಜರಿ ಪ್ಲಾನ್ ಮಾಡಿ ಫುಲ್ ಪ್ಯಾಕಪ್ ಆಗಿ ದಸರಾ ವೀಕ್ಷಿಸಿದ್ದಾರೆ. ಅಲ್ಲದೆ ತಮ್ಮ ಸ್ನೇಹಿತರೊಂದಿಗೆ ಸಖತ್ ಎಂಜಾಯ್ ಮಾಡಿದ್ದಾರೆ.

mysuru dasara ninasam satish 3

ದಸರಾ ಸಂದರ್ಭದಲ್ಲಿ ತಾವು ಮೈಸೂರಿನಲ್ಲಿ ಕಳೆದ ದಿನಗಳ ಕುರಿತು ನಿನಾಸಂ ಸತೀಶ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಪೆಟ್ರೊಮ್ಯಾಕ್ಸ್ ಸಿನಿಮಾದ ಶೂಟಿಂಗ್‍ಗಾಗಿ ನಿನಾಸಂ ಸತೀಶ್ ಮೈಸೂರಿನಲ್ಲಿಯೇ ಬೀಡು ಬಿಟ್ಟಿದ್ದು, ಇದೇ ವೇಳೆ ದಸರಾ ಸಹ ಆಗಮಿಸಿದೆ. ಹೀಗಾಗಿ ದಸರಾ ಸಮಯವನ್ನೂ ಎಂಜಾಯ್ ಮಾಡುತ್ತಿದ್ದಾರೆ. ಹಗಲೆಲ್ಲ ಸಿನಿಮಾ ಶೂಟಿಂಗ್ ನಡೆಸಿದರೆ, ರಾತ್ರಿ ವೇಳೆ ತಮ್ಮ ಸ್ನೇಹಿತರೊಂದಿಗೆ ದಸರಾ ವೀಕ್ಷಿಸಿದ್ದಾರೆ. ಅರಮನೆ ಸೇರಿದಂತೆ ಮೈಸೂರಿನ ವಿವಿಧ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿ, ಆನಂದಿಸಿದ್ದಾರೆ.

mysuru dasara ninasam satish 8

ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಮೊದಲು ವಿಡಿಯೋ ಪೋಸ್ಟ್ ಮಾಡಿ, ವಿಜಯದಶಮಿಯ ಶುಭಾಶಯಗಳು ಎಂದು ಬರೆದು ಮೈಸೂರಿನ ಲೈಟಿಂಗ್ ಸೊಬಗನ್ನು ತೋರಿಸಿದ್ದಾರೆ. ಅಲ್ಲದೆ ಸ್ನೇಹಿತರೊಂದಿಗೆ ನಡೆದು ಬಹುತೇಕ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿರುವುದನ್ನು ಸೆರೆ ಹಿಡಿದಿದ್ದಾರೆ. ಇಷ್ಟೆಲ್ಲ ಸುತ್ತಾಡಿದರೂ ಯಾರಿಗೂ ಸುಳಿವು ಸಿಕ್ಕಿಲ್ಲ. ಅಲ್ಲದೆ ಅವರ ಅಭಿಮಾನಿಗಳು ಕಮೆಂಟ್ ಮಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದು, ನಮ್ಮ ಮೈಸೂರಿಗೆ ಬಂದಿದ್ದಿರಾ? ಗೊತ್ತೇ ಆಗಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

 

View this post on Instagram

 

#mysurudasara2020

A post shared by My Name Is S…. (@sathish_ninasam_official) on

ಮತ್ತೊಂದು ಪೋಸ್ಟ್ ನಲ್ಲಿ ಮೈಸೂರಿನ ಪ್ರಸಿದ್ಧ ಜಯಚಾಮರಾಜೇಂದ್ರ ವೃತ್ತದ ಬಳಿ ನಿಂತಿರುವ ಫೋಟೋ ಹಾಕಿ ಸಾಲುಗಳನ್ನು ಬರೆದಿರುವ ಅವರು, ಇಂದು ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ದಿನ. ನನ್ನ ಮೂರು ಚಿತ್ರಗಳ ಚಿತ್ರೀಕರಣ ಒಂದೇ ದಿನದಲ್ಲಿ ನಡೆಯುತ್ತಿದೆ. ‘ಮ್ಯಾಟ್ನಿ’ ಮತ್ತು ‘ದಸರಾ’ ನಾನಿಲ್ಲದ ದೃಶ್ಯಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದರೆ ಮೈಸೂರಿನಲ್ಲಿ ‘ಪೆಟ್ರೊಮ್ಯಾಕ್ಸ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಸೌಭಾಗ್ಯ ದೊರಕಲು ಇಷ್ಟು ವರ್ಷದ ನಿಮ್ಮ ಪ್ರೀತಿ ಕಾರಣ. ದಸರಾ ಹಬ್ಬದ ಶುಭಾಶಯಗಳು. ಲವ್ ಯೂ ಆಲ್… ಎಂದು ಬರೆದುಕೊಂಡಿದ್ದಾರೆ.

 

View this post on Instagram

 

ಇಂದು ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ದಿನ. ನನ್ನ ಮೂರು ಚಿತ್ರಗಳ, ಚಿತ್ರೀಕರಣ ಒಂದೇ ದಿನದಲ್ಲಿ ನಡೆಯುತ್ತಿದೆ. “ಮ್ಯಾಟ್ನಿ” ಮತ್ತು “ದಸರಾ” ನಾನಿಲ್ಲದ ದೃಶ್ಯಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದರೇ, ಮೈಸೂರಿನಲ್ಲಿ “ಪೆಟ್ರೊಮ್ಯಾಕ್ಸ್” ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಸೌಭಾಗ್ಯ ದೊರಕಲು ಇಷ್ಟು ವರ್ಷದ ನಿಮ್ಮ ಪ್ರೀತಿ ಕಾರಣ. ದಸರಾ ಹಬ್ಬದ ಶುಭಾಶಯಗಳು. ಲವ್ ಯೂ ಆಲ್… #sathishninasam @sharmielamandre #petromax @arvind_sastry

A post shared by My Name Is S…. (@sathish_ninasam_official) on

ಸದ್ಯ ನಿನಾಸಂ ಸತೀಶ್ ಕೈಯ್ಯಲ್ಲಿ ಒಟ್ಟು 7 ಸಿನಿಮಾಗಳಿದ್ದು, ಇದರಲ್ಲಿ ಮೂರು ಸಿನಿಮಾಗಳ ಚಿತ್ರೀಕರಣ ಪ್ರಗತಿಯಲ್ಲಿದೆ. ಮ್ಯಾಟ್ನಿ, ದಸರಾ ಹಾಗೂ ಪೆಟ್ರೊಮ್ಯಾಕ್ಸ್ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ತಮಿಳಿನ ಪಗೈವನುಕು ಅರುಳ್ವೈ ಸೇರಿ ಕನ್ನಡದ ಮೈ ನೇಮ್ ಇಸ್ ಸಿದ್ದೇಗೌಡ, ಪರಿಮಳ ಲಾಡ್ಜ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಸತೀಶ್ ಸಖತ್ ಬ್ಯುಸಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *