– ಹೆದ್ದಾರಿಯಲ್ಲಿ ತಡೆದು ಐದು ಬಾರಿ ಶೂಟ್
ಪಾಟ್ನಾ: ವ್ಯಾಪಾರಿಗೆ ಗುಂಡಿಕ್ಕಿದ್ದ ಅಪರಿಚಿತರು ಚಿನ್ನ, ಮೊಬೈಲ್ ಬಿಟ್ಟು ಸಿಮ್ ತೆಗೆದುಕೊಂಡು ಪರಾರಿಯಾಗಿರೋ ಘಟನೆ ಪಾಟ್ನಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಸಂಜಯ್ ಕುಮಾರ್ ಕೊಲೆಯಾದ ವ್ಯಾಪಾರಿ. ಸಂಜಯ್ ಹಾಜಿಪುರಕ್ಕೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ-19ರಲ್ಲಿ ಕೆಲವರು ತಡೆದಿದ್ದಾರೆ. ನಂತರ ಐದು ಬಾರಿ ಸಂಜಯ್ ಮೇಲೆ ಗುಂಡು ಹಾರಿಸಿದ್ದಾರೆ. ಸಂಜಯ್ ಸಾವನ್ನಪ್ಪಿದ್ದ ಅವರ ಬಳಿಯಲ್ಲಿದ್ದ ನಗದು, ಚಿನ್ನದ ಚೈನ್ ಮತ್ತು ಮೊಬೈಲ್ ಸಹ ತೆಗೆದುಕೊಂಡಿಲ್ಲ. ಬದಲಾಗಿ ಸಂಜಯ್ ಬಳಸುತ್ತಿದ್ದ ಸಿಮ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಮೃತ ಸಂಜಯ್ ಕುಮಾರ್ ಮೂಲತಃ ಆಲಂಗಂಜ್ ಕ್ಷೇತ್ರದ ನುರಾನಿಬಾಗ್ ಗ್ರಾಮದ ನಿವಾಸಿ. ಪಾಟ್ನಾದಲ್ಲಿ ಔಷಧಿಗಳ ವ್ಯಾಪಾರಿಯಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಂಜಯ್ ಕುಟುಂಬ ಮತ್ತು ಆಪ್ತರು ಆಗಮಿಸಿದ್ದಾರೆ. ಇದನ್ನೂ ಓದಿ: ವಿಧವೆ ಅತ್ತೆಯನ್ನ ರೇಪ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಅಳಿಯ
ಸಂಜಯ್ ಹಾಜಿಪುರಕ್ಕೆ ತೆರಳುತ್ತಿರುವ ವಿಷಯ ತಿಳಿದವರೇ ಈ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ದಾಳಿಕೋರರು ಕೇವಲ ಸಿಮ್ ಮಾತ್ರ ತೆಗೆದುಕೊಂಡು ಹೋಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೊಲದಲ್ಲೇ ಪ್ರೇಮಿಯೊಂದಿಗೆ ತಾಯಿ ಸಲ್ಲಾಪ – ಮರುದಿನ 6ರ ಬಾಲಕನ ಶವ ಪತ್ತೆ