Connect with us

Crime

ಹೊಲದಲ್ಲೇ ಪ್ರೇಮಿಯೊಂದಿಗೆ ತಾಯಿ ಸಲ್ಲಾಪ – ಮರುದಿನ 6ರ ಬಾಲಕನ ಶವ ಪತ್ತೆ

Published

on

– ಅಮ್ಮನ ಅನೈತಿಕ ಸಂಬಂಧವನ್ನ ತಂದೆಗೆ ಹೇಳಿದ್ದೆ ತಪ್ಪಾಯ್ತು

ಗಾಂಧಿನಗರ: ಹೆತ್ತ ತಾಯಿಯೇ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಆರು ವರ್ಷದ ಮಗನನ್ನು ಕೊಲೆ ಮಾಡಿರುವ ಘಟನೆ ಗುಜರಾತ್‍ನ ಬನಾಸ್ ಕಾಂತಾ ಜಿಲ್ಲೆಯಲ್ಲಿ ನಡೆದಿದೆ.

ಜಗದೀಶ್ ಠಾಕೋರ್ ಮೃತ ಬಾಲಕ. ಈತನ ತಾಯಿ ರಾಜುಲ್ ಮತ್ತು ತನ್ನ ಪ್ರಿಯಕರ ಸಂಜಯ್ ಠಾಕೋರ್ ಸೇರಿಕೊಂಡು ಕೊಲೆ ಮಾಡಿದ್ದಾಳೆ. ಈಗಾಗಲೇ ಪೊಲೀಸರು ಇವರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ಕೋವಿಡ್ ಟೆಸ್ಟ್‌ಗೆ ಒಳಪಡಿಸಿದ್ದಾರೆ.

ಏನಿದು ಪ್ರಕರಣ?
ಆರೋಪಿ ರಾಜುಲ್ ಮತ್ತು ಸಂಜಯ್ ಠಾಕೋರ್ ಹೊಲದಲ್ಲಿ ಅನೈತಿಕ ಸಂಬಂಧ ಹೊಂದಿದ್ದರು. ಇದನ್ನು ಆರು ವರ್ಷದ ಬಾಲಕ ನೋಡಿದ್ದಾನೆ. ಆಗ ತಮ್ಮ ಅಕ್ರಮ ಸಂಬಂಧದ ಬಗ್ಗೆ ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದಾರೆ. ಆದರೂ ಬಾಲಕ ಎಲ್ಲವನ್ನೂ ತಂದೆಗೆ ತಿಳಿಸಿದ್ದಾನೆ. ಮರುದಿನ ಬಾಲಕನನ್ನು ಅಪಹರಿಸಿ, ಕೊಲೆ ಮಾಡಲಾಗಿದೆ. ರಕ್ತದ ಮಡುವಿನಲ್ಲಿ ಬಾಲಕ ಜಗದೀಶ್ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಗದೀಶ್ ತನ್ನ ತಾಯಿಯನ್ನು ಹೊಲದಲ್ಲಿ ಸಂಜಯ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಗ ನೋಡಿದ್ದಾನೆ. ಆಗ ಸಂಜಯ್ ಇದನ್ನು ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದನು. ನನ್ನ ಹೆಂಡತಿ ಸಂಜಯ್ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಮೊದಲೆ ಅನುಮಾನಿಸಿದ್ದೆ ಎಂದು ಬಾಲಕನ ತಂದೆ ಲಲಿತ್ ಠಾಕೋರ್ ಹೇಳಿದ್ದಾರೆ.

ಬಾಲಕ ಜಗದೀಶ್ ನಾಪತ್ತೆಯಾದ ತಕ್ಷಣ ತಂದೆ ಲಲಿತ್ ಆತನನ್ನು ಹುಡುಕಾಡಿದ್ದಾರೆ. ಆಗ ಬಾಲ್ಸಾಸನ್ ರಸ್ತೆ ಬಳಿಯ ಹೊಲವೊಂದರಲ್ಲಿ ರಕ್ತದ ಮಡುವಿನಲ್ಲಿ ಜಗದೀಶ್ ಮೃತದೇಹ ಪತ್ತೆಯಾಗಿದೆ. ಕೂಡಲೇ ಲಲಿತ್ ಸಂತಾಲ್ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

ಆತನ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಂಜಯ್ ಮತ್ತು ರಾಜುಲ್ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಕೋವಿಡ್-19 ವರದಿಗಳು ಬಂದ ನಂತರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *