Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಎಂದೂ ನೀವಿಲ್ಲವೆಂದುಕೊಂಡಿಲ್ಲ, ಅನುದಿನವೂ ನಮ್ಮೊಳಗಿನ ಶಕ್ತಿಯಾಗಿ ಮುನ್ನಡೆಸುತ್ತಿರುವಿರಿ – ಅನಿರುದ್ಧ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಎಂದೂ ನೀವಿಲ್ಲವೆಂದುಕೊಂಡಿಲ್ಲ, ಅನುದಿನವೂ ನಮ್ಮೊಳಗಿನ ಶಕ್ತಿಯಾಗಿ ಮುನ್ನಡೆಸುತ್ತಿರುವಿರಿ – ಅನಿರುದ್ಧ್

Bengaluru City

ಎಂದೂ ನೀವಿಲ್ಲವೆಂದುಕೊಂಡಿಲ್ಲ, ಅನುದಿನವೂ ನಮ್ಮೊಳಗಿನ ಶಕ್ತಿಯಾಗಿ ಮುನ್ನಡೆಸುತ್ತಿರುವಿರಿ – ಅನಿರುದ್ಧ್

Public TV
Last updated: September 18, 2020 12:03 pm
Public TV
Share
2 Min Read
anirudh vishnu
SHARE

– ‘ಯಜಮಾನ’ನನ್ನು ನೆನಪಿಸಿಕೊಂಡ ಸ್ಯಾಂಡಲ್‍ವುಡ್ ತಾರೆಯರು

ಬೆಂಗಳೂರು: ಇಂದು ಕನ್ನಡ ನಾಡು ಕಂಡ ಅದ್ಭುತ ನಟ ಸಾಹಸ ಸಿಂಹ್ ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟ ಅನಿರುದ್ಧ್ ಸೇರಿದಂತೆ ಸಿನಿ ರಂಗದ ಕಲಾವಿದರು ವಿಷ್ಣುವರ್ಧನ್ ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗ ಕಂಡ ಮೇರು ಪ್ರತಿಭೆ ನಮ್ಮನ್ನು ಆಗಲಿ 9 ವರ್ಷಗಳಾಗಿವೆ. ಅವರ ನೆನಪಿಗಾಗಿ ರಾಜ್ಯ ಸರ್ಕಾರ ಮೈಸೂರಿನಲ್ಲಿ ಅವರ ಪುಣ್ಯಸ್ಮಾರಕವನ್ನು ನಿರ್ಮಾಣ ಮಾಡುತ್ತಿದೆ. ಇಂದು ಅವರ ಹುಟ್ಟುಹಬ್ಬದಂದು ಸಾವಿರಾರು ಅಭಿಮಾನಿಗಳು ಅವರನ್ನು ನೆನೆದಿದ್ದಾರೆ.

https://www.facebook.com/Anirudhofficialpage/posts/394677755265796

ವಿಷ್ಣು ಅವರ ಹುಟ್ಟುಹ್ಬದ ಪ್ರಯುಕ್ತ ಫೇಸ್‍ಬುಕ್ ಪೋಸ್ಟ್ ಹಾಕಿರುವ ಅನಿರುದ್ಧ್, ಮಗನಾಗಿ, ಅವರ ಗುಣಗಳಿಗೆ ಅಭಿಮಾನಿಯಾಗಿ ಕೋಟಿ ನೆನಪುಗಳು. ಅವರ ಸರಳತನ, ನಿಷ್ಕಲ್ಮಶ ಮನಸ್ಸು, ಮುಗ್ಧತೆ, ಔದಾರ್ಯ, ಸಜ್ಜನಿಕೆ, ಬಹುಶಃ ಒಬ್ಬ ವ್ಯಕ್ತಿ ಮತ್ತೊಬ್ಬರ ಜೀವನಕ್ಕೆ ಸ್ಫೂರ್ತಿಯಾಗಿ ಸಾಧಿಸಲು ಪ್ರಮುಖ ಕಾರಣಕರ್ತರಾಗುವವರೆಂದರೆ ನನಗೆ ಅದು ನೀವೇ. ಎಂದೂ ನೀವಿಲ್ಲವೆಂದುಕೊಂಡಿಲ್ಲ. ಅನುದಿನವೂ ನಮ್ಮೊಳಗಿನ ಶಕ್ತಿಯಾಗಿ ಮುನ್ನಡೆಸುತ್ತಿರುವಿರಿ. ಜನ್ಮದಿನವಿಂದು ಚಿಕ್ಕವನು ನಾನು ನಾನೇನನು ಹೇಳಲಿ. ಎಲ್ಲರಿಗೂ ನಿಮ್ಮ ಆಶೀರ್ವಾದವಿರಲಿ. ಎಂದಿನಂತೆ ಕೈ ಹಿಡಿದು ಮುನ್ನಡೆಸಿ ಎಂದಿದ್ದಾರೆ.

Kichcha Sudeep Vishnuvardhan

ನಿನ್ನೆ ವಿಷ್ಣು ಅವರ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದ ನಟ ಸುದೀಪ್ ಅವರು, ಅವರನ್ನು ಭೇಟಿ ಮಾಡಲು ಸಮಯದ ಆಶೀರ್ವಾದವಿತ್ತು. ಅವರೊಂದಿಗೆ ಕೆಲಸ ಮಾಡಲು ಸಿನಿಮಾದ ಆಶೀರ್ವಾದವಿತ್ತು. ಎಲ್ಲಕ್ಕಿಂತ ದೊಡ್ಡ ಆಶೀರ್ವಾದ ಅವರು ನನ್ನನ್ನು ನನ್ನ ಹೆಸರಿಂದ ಗುರುತಿಸುತ್ತಿದ್ದರು. ನಾನು ಅವರ ಹುಟ್ಟು ಹಬ್ಬಕ್ಕೆ ಕಾಮನ್ ಡಿಪಿಯನ್ನು ಬಿಡುಗಡೆ ಮಾಡುತ್ತಿರುವುದು ನನಗೆ ಸಿಕ್ಕ ಭಾಗ್ಯ. ಎಂದಿಗೂ ಅವರ ಅಭಿಮಾನಿ ಎಂದು ಟ್ವೀಟ್ ಮಾಡಿದ್ದರು.

Remembering Vishnu Sir on his 70th birthday ✨ pic.twitter.com/2901GMdOrK

— Puneeth Rajkumar (@PuneethRajkumar) September 18, 2020

ಇಂದು ವಿಷ್ಣುವರ್ಧನ್ ಅವರ ಜೊತೆ ಇರುವ ತನ್ನ ಬಾಲ್ಯದ ಫೋಟೋ ಹಂಚಿಕೊಂಡಿರುವ ಪುನೀತ್ ಅವರು, ಅವರ 70ನೇ ಹುಟ್ಟುಹಬ್ಬದಂದು ವಿಷ್ಣು ಸರ್ ಅವರನ್ನು ನೆನೆಯುತ್ತಾ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಡಾಲಿ ಧನಂಜಯ್ ಅವರು ಟ್ವೀಟ್ ಮಾಡಿ, ನಮ್ಮಲ್ಲಿ ಎಂದಿಗೂ ನೀವು ಶಾಶ್ವತ, ಅವರ ಹುಟ್ಟುಹಬ್ಬದಂದು ವಿಷ್ಣುದಾದನನ್ನು ನೆನೆಯುತ್ತಾ ಎಂದು ಬರೆದುಕೊಂಡಿದ್ದಾರೆ.

You will always remain one of the greatest artists our film industry has witnessed. May your charisma continue to live young in our hearts Vishnuvardhan sir ✨
ಅಭಿನಯ ಭಾರ್ಗವ, ಸಾಹಸಸಿಂಹ, ಪ್ರೀತಿಯ ವಿಷ್ಣು ದಾದ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ✨ pic.twitter.com/AtjwkKo2Du

— Rakshit Shetty (@rakshitshetty) September 18, 2020

ಇವರ ಜೊತೆಗೆ ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ, ನೀವು ನಮ್ಮ ಚಿತ್ರರಂಗದಲ್ಲಿ ಓರ್ವ ಶ್ರೇಷ್ಠ ನಟನಾಗಿ ಉಳಿದುಕೊಂಡಿದ್ದೀರಿ. ನಮ್ಮ ಮನಸ್ಸಿನಲ್ಲಿ ನೀವು ಯಾವಾಗಲೂ ಉಳಿಯುತ್ತೀರಾ ವಿಷ್ಣುವರ್ಧನ್ ಸರ್. ಅಭಿನಯ ಭಾರ್ಗವ, ಸಾಹಸಸಿಂಹ, ಪ್ರೀತಿಯ ವಿಷ್ಣುದಾದ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಹಿರಿಯ ನಟಿ ಮಾಳವಿಕಾ ಅವಿನಾಶ್, ನಟ ವಸಿಷ್ಠ ಸಿಂಹ, ನಟಿ ಮಾನ್ವಿತಾ ಸೇರಿದಂತೆ ಹಲವು ಅಭಿಮಾನಿಗಳು ವಿಷ್ಣುವರ್ಧನ್ ಅವರನ್ನು ನೆನಪಿಸಿಕೊಂಡಿದ್ದಾರೆ.

ನಮ್ಮಲ್ಲಿ ಎಂದಿಗೂ ನೀವು ಶಾಶ್ವತ🙏
Remembering #VishnuDada on his birthday. pic.twitter.com/7qzEgXdAY8

— Dhananjaya (@Dhananjayaka) September 18, 2020

TAGGED:AnirudhbengalurubirthdayPublic TVtweetVishnuvardhanಅನಿರುದ್ಧ್ಟ್ವೀಟ್ಪಬ್ಲಿಕ್ ಟಿವಿಬೆಂಗಳೂರುವಿಷ್ಣುವರ್ಧನ್ಹುಟ್ಟುಹಬ್ಬ
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Mahendra Reddy Krithika Reddy
Bengaluru City

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ – ಆರೋಪಿ ಮಹೇಂದ್ರ ಕಳಿಸಿದ್ದ ಮೆಸೇಜ್ ರಿಟ್ರೀವ್, 10.3 ಲಕ್ಷ ಡಿಜಿಟಲ್‌ ಫೈಲ್ ಪತ್ತೆ

Public TV
By Public TV
13 minutes ago
Strait of Hormuz
Latest

ಹಾರ್ಮುಜ್‌ ದಾಟುವ ಯಾವುದೇ ಹಡಗಿಗೆ ಸುಂಕ ವಿಧಿಸಲ್ಲ: ಇರಾನ್‌ ಬೇಡಿಕೆಗೆ ಒಮಾನ್‌ ವಿರೋಧ

Public TV
By Public TV
21 minutes ago
fan takes selfie with broken phone sanju samson later gifts the phone
Cricket

ಒಡೆದ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಗೆ ಹೊಸ ಫೋನ್‌ ಗಿಫ್ಟ್‌ ಕೊಟ್ಟ ಸಂಜು ಸ್ಯಾಮ್ಸನ್!

Public TV
By Public TV
28 minutes ago
Oil Refinery In Iran
Latest

ಕದನ ವಿರಾಮದ ನಡುವೆಯೂ ಇರಾನ್‌ನ ತೈಲ ಸಂಸ್ಕರಣಾಗಾರದ ಮೇಲೆ ದಾಳಿ

Public TV
By Public TV
1 hour ago
CT Ravi 2
Bengaluru City

2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಸಿ.ಟಿ.ರವಿ ಭವಿಷ್ಯ

Public TV
By Public TV
1 hour ago
Hardik Pandya
Cricket

ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಪಾಂಡ್ಯ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?