-ಕಿವುಡ, ಮಾತು ಬಾರದ ಬಾಲಕಿ
ರಾಂಚಿ: ಮಾತು ಬಾರದ ಮತ್ತು ಕಿವಿ ಕೇಳದ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿರುವ ಘಟನೆ ಜಾರ್ಖಂಡ್ ರಾಜ್ಯದ ಗೊಡ್ಡಾ ಜಿಲ್ಲೆಯ ಮಹಾಗಾಮಾದಲ್ಲಿ ನಡೆದಿದೆ.
ಬಾಲಕಿ ಶನಿವಾರ ರಾತ್ರಿಯಿಂದ ಕಾಣೆಯಾಗಿದ್ದಳು. ಕುಟುಂಬಸ್ಥರು ಗ್ರಾಮದಲ್ಲಿ ಬಾಲಕಿಗಾಗಿ ಹುಡುಕಾಡಿದ್ದಾರೆ. ಭಾನುವಾರ ಬೆಳಗ್ಗೆ ಗ್ರಾಮದ ಶಾಲೆಯ ಕೊಠಡಿಯಲ್ಲಿ ಬಾಲಕಿ ಶವ ಇರೋದನ್ನು ಗಮನಿಸಿದ ಕೆಲವರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯ ತಲೆಗೆ ಭಾಗದಲ್ಲಿ ಗಾಯವಾಗಿತ್ತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೆಹ್ರಾಮ್ ಠಾಣೆಯ ಪೊಲೀಸರು ಭೇಟಿ ನೀಡಿದ್ದರು. ಬಾಲಕಿಯ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಕಳಿಸಲು ಪೊಲೀಸರು ಮುಂದಾದಾಗ ಕುಟುಂಬಸ್ಥರು ತಡೆದಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಬೇಕೆಂದು ಆಗ್ರಹಿಸಿದ್ದಾರೆ. ತದನಂತರ ಗ್ರಾಮದ ಮುಖಂಡರು ಸಮ್ಮುಖದಲ್ಲಿ ಪೊಲೀಸರು ಬಾಲಕಿಯ ದೇಹವನ್ನ ಆಸ್ಪತ್ರೆಗೆ ರವಾನಿಸಿದ್ದಾರೆ.
Jharkhand: Congress MLA from Mahagama, Dipika Pandey Singh has written to CM Hemat Soren informing him about alleged rape & murder of a 13-year-old differently-abled girl in Godda Dist. The body was found in the room of a school in Khirondhi village in Mehrma police station area.
— ANI (@ANI) August 24, 2020
ಮಹಾಗಾಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಘಟನೆಯ ಕುರಿತು ಪತ್ರ ಬರೆದು ಸಿಎಂ ಹೇಮಂತ್ ಸೋರೆನ್ ಅವರಿಗೆ ಮಾಹಿತಿ ನೀಡಿದ್ದಾರೆ.