ಹೈದರಾಬಾದ್: ಪಬ್‍ಜಿ ಆಟಕ್ಕೆ ದಾಸನಾದ 16 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಇತ್ತೀಚೆಗೆ ಯುವ ಪೀಳಿಗೆ ಮೊಬೈಲ್‍ಗೆ ಜಾಸ್ತಿ ಆಂಟಿಕೊಂಡು ಇರುತ್ತಾರೆ. ಅದರಲ್ಲಿ ಬರುವ ಆನ್‍ಲೈನ್ ಗೇಮ್‍ಗೆ ದಾಸರಾಗಿರುತ್ತಾರೆ. ಅಂತಯೇ ಪಬ್‍ಜಿ ಗೇಮ್‍ಗೆ ದಾಸನಾಗಿದ್ದ ಆಂಧ್ರಪ್ರದೇಶದ 16 ವರ್ಷದ ಬಾಲಕ ಊಟ ನೀರು ಸೇವಿಸದೇ ದಿನದ ಬಹುತೇಕ ಕಾಲ ಮೊಬೈಲ್ ಹಿಡಿದುಕೊಂಡೇ ಕಾಲಕಳೆದಿದ್ದಾನೆ. ಪರಿಣಾಮ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಮನೆಯಲ್ಲೇ ಇದ್ದ ಬಾಲಕ ಹೆಚ್ಚಿನ ಸಮಯವನ್ನು ಮೊಬೈಲ್‍ನಲ್ಲಿ ಆನ್‍ಲೈನ್ ಆಟಗಳನ್ನು ಆಡುತ್ತಾ ಕಾಲಕಳೆಯುತ್ತಿದ್ದ. ಜೊತೆಗೆ ಪಬ್‍ಜಿ ಆಟಕ್ಕೆ ದಾಸನಾಗಿದ್ದ. ಇದರಿಂದ ಯಾವಾಗಲೂ ಒಬ್ಬನೇ ಇರುತ್ತಿದ್ದ. ಜೊತೆಗೆ ಆತ ಊಟವನ್ನು ಮಾಡಿರಲಿಲ್ಲ. ನೀರನ್ನು ಕುಡಿಯದೇ ಪಬ್‍ಜಿ ಆಟವನ್ನು ಆಡಿದ್ದಾನೆ. ಪರಿಣಾಮ ಆತ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಆ ನಂತರ ಆತನನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ.
ಕಳೆದ ಜನವರಿಯಲ್ಲೂ ಕೂಡ ಇದೇ ರೀತಿಯ ಘಟನೆ ಪುಣೆಯಲ್ಲಿ ನಡೆದಿತ್ತು. ಪಬ್‍ಜಿ ಆಡುತ್ತಿದ್ದ 25 ವರ್ಷದ ಹರ್ಷಲ್ ಮೆಮನೆಗೆ ಬ್ರೈನ್ ಸ್ಟ್ರೋಕ್ ಬಂದಿತ್ತು. ಆತನ ಬಲಗೈ ಮತ್ತು ಕಾಲು ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ಬಿಟ್ಟಿದ್ದವು. ನಂತರ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.