ಮೈಸೂರು ಮೃಗಾಲಯದಲ್ಲಿ ದುರಂತ – ಎತ್ತಿ ಕೆಳಕ್ಕೆ ಹಾಕಿ ತುಳಿದು ಮಾವುತನನ್ನೇ ಕೊಂದ ಆನೆ

Public TV
1 Min Read
Mysuru zoo Elephant caretaker 4

ಮೈಸೂರು: ವಿಶ್ವವಿಖ್ಯಾತ ಚಾಮರಾಜೇಂದ್ರ ಮೃಗಾಲಯದಲ್ಲಿ ದುರಂತ ಸಂಭವಿಸಿದ್ದು, ಆನೆಯೊಂದು ತನ್ನ ಮಾವುತನನ್ನೇ ತುಳಿದು ಸಾಯಿಸಿರುವ ಘಟನೆ ಶುಕ್ರವಾರ ನಡೆದಿದೆ.

Mysuru zoo Elephant caretaker 2

ಹರೀಶ್ (38) ಮೃತಪಟ್ಟ ಮಾವುತ. ಅಭಿ ಹೆಸರಿನ ಆನೆಗೆ ಮಧ್ಯಾಹ್ನ ಹರೀಶ್‌ ಅವರು ಹುಲ್ಲು ಹಾಕಿದ್ದಾರೆ. ಮೈದಡವಿ ಹುಲ್ಲು ಹಾಕುವ ಸಂದರ್ಭದಲ್ಲಿ ಹರೀಶ್‌ ಅವರನ್ನು ಸೊಂಡಿಲಿನಿಂದ ಎತ್ತಿ ಕೆಳಕ್ಕೆ ಹಾಕಿ ತುಳಿದಿದೆ.

Mysuru zoo Elephant caretaker 1

ಈ ವಿಚಾರ ತಿಳಿದ ಕೂಡಲೇ ಅಲ್ಲಿದ್ದ ಸಿಬ್ಬಂದಿ ಹರೀಶ್‌ ಅವರನ್ನು ಆನೆಯಿಂದ ಬಿಡಿಸಿಕೊಂಡು ಕೂಡಲೇ ಗೋಪಾಲಗೌಡ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹರೀಶ್‌ ಮೃತಪಟ್ಟಿದ್ದಾರೆ.

Mysuru zoo Elephant caretaker 3

ಹರೀಶ್​ ಮೈಸೂರಿನ ಲಲಿತಾದ್ರಿಪುರ ಗ್ರಾಮದ ನಿವಾಸಿಯಾಗಿದ್ದು, ಗುತ್ತಿಗೆ ನೌಕರನಾಗಿ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಐದು ದಿನಗಳಿಂದ ರಜೆ ಮೇಲೆ ತೆರಳಿದ್ದ ಹರೀಶ್ ಶುಕ್ರವಾರ ಕೆಲಸಕ್ಕೆ ಹಾಜರಾಗಿದ್ದರು. ಘಟನೆ ಸಂಬಂಧ ನಜರ್‌ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *