Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ‘ಸುರಕ್ಷಿತ ವಾತಾವರಣ ಇರೋ ಕಡೆ ತರಗತಿ ಪ್ರಾರಂಭಿಸಿದರೆ ತಪ್ಪೇನು ಇಲ್ಲʼ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ‘ಸುರಕ್ಷಿತ ವಾತಾವರಣ ಇರೋ ಕಡೆ ತರಗತಿ ಪ್ರಾರಂಭಿಸಿದರೆ ತಪ್ಪೇನು ಇಲ್ಲʼ

Bengaluru City

‘ಸುರಕ್ಷಿತ ವಾತಾವರಣ ಇರೋ ಕಡೆ ತರಗತಿ ಪ್ರಾರಂಭಿಸಿದರೆ ತಪ್ಪೇನು ಇಲ್ಲʼ

Public TV
Last updated: July 28, 2020 6:25 pm
Public TV
Share
3 Min Read
Govt School 2
SHARE

– ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಂವಾದ
– ಕೇವಲ ಪಠ್ಯಕ್ಕೆ ಸೀಮಿತಗೊಳಿಸದೇ ಇತರೆ ಚಟುವಟಿಕೆಗಳಲ್ಲಿ ತೊಡಗಿಸಬೇಕು

ಬೆಂಗಳೂರು: ಸುರಕ್ಷಿತ ವಾತಾವರಣವೆಂದು ಕಂಡುಬಂದ ಕಡೆಗಳಲ್ಲಿ ಶಾಲಾ ತರಗತಿಗಳನ್ನೇ ಪ್ರಾರಂಭಿಸಿದರೆ ತಪ್ಪೇನು ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೊರೊನಾ ಸಾಮಾಜಿಕ ಸಂದರ್ಭದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣ ಮತ್ತು ಶಾಲಾ ಚಟುವಟಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮಂಗಳವಾರ ಶೈಕ್ಷಣಿಕ ವಲಯದಲ್ಲಿ ತೊಡಗಿಸಿಕೊಂಡಿರುವ 36ಕ್ಕೂ ಹೆಚ್ಚು ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಚಿವ ಸುರೇಶ್‌ ಕುಮಾರ್‌ ಸಂವಾದ ನಡೆಸಿದರು.  ಇದನ್ನೂ ಓದಿ: ಕೊರೊನಾ ಕಾಲದಲ್ಲಿ ಶಾಲೆ ತೆರೆಯಲು ಅವಸರವಿಲ್ಲ: ಸುರೇಶ್ ಕುಮಾರ್

suresh kumar 5

ಅಜೀಂ ಪ್ರೇಮ್‍ಜಿ ಪ್ರತಿಷ್ಠಾನ, ಗ್ರಾಮ್ಸ್, ಅಕ್ಷರ ಫೌಂಡೇಷನ್, ಯೂನಿಸೆಫ್, ಶಿಕ್ಷಣ, ಸಿಇಇ (ವಾಷ್ ಪ್ರೋಗ್ರಾಂ), ಪೋರ್ತ್ ಫೌಂಡೇಷನ್, ಪ್ರಥಮ್, ಪ್ರಜಾಯತ್ನ, ಅಗಸ್ತ್ಯ ಫೌಂಡೇಷನ್, ಲೆಂಡ್ ಎ ಹ್ಯಾಂಡ್ ಇಂಡಿಯಾ, ವೈಟ್‍ಫೀಲ್ಡ್ ರೆಡಿ ಸಮೃದ್ಧಿ ಟ್ರಸ್ಟ್, ಇಂಡಿಯನ್ ಲಿಟ್ರೆಸಿ ಪ್ರಾಜೆಕ್ಟ್, ಬಿಜಿವಿಎಸ್, ಎಸ್‍ಟಿಐಆರ್, ಏಕ್ ಸ್ಟೆಪ್-ದೀಕ್ಷಾ, ರೂಂ ಟು ರೀಡ್ ಇಂಡಿಯಾ ಟ್ರಸ್ಟ್, ಗ್ರಾಮ್, ಐ.ಎಲ್.ಪಿ. ಸೇರಿದಂತೆ ಹಲವಾರು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಂವಾದದಲ್ಲಿ ಭಾಗವಹಿಸಿದ ಎಲ್ಲ ಸಂಸ್ಥೆಗಳ ಹಿತದೃಷ್ಟಿಯೂ ನಮ್ಮ ಮಕ್ಕಳೇ ಪ್ರಮುಖವಾಗಿದ್ದರಿಂದ ಅವರನ್ನು ಈ ಪರಿಸ್ಥಿತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಎಲ್ಲ ರೀತಿಯ ಸಾಧ್ಯತೆಗಳನ್ನು ಕ್ರೋಢೀಕರಿಸಿಕೊಂಡು ಅವಕಾಶವಾಗುವ ಯಾವುದೇ ಸೌಲಭ್ಯದ ಮೂಲಕವಾಗಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಸರ್ಕಾರ ಮುಂದಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

suresh kumar 2 1 e1595938530624

ಸಂವಾದದಲ್ಲಿ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಹಿರಿಯ ಶಿಕ್ಷಣ ತಜ್ಞರಾದ ಎಂ.ಕೆ. ಶ್ರೀಧರ್, ಡಾ. ಗುರುರಾಜ ಖರ್ಜಗಿ, ಡಾ. ವಿ.ಪಿ. ನಿರಂಜನಾರಾಧ್ಯ, ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ.ಜಗದೀಶ್, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾಧಿಕಾರಿ ದೀಪಾ ಚೋಳನ್ ಭಾಗವಹಿಸಿದ್ದರು.

ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯಗಳು:
1. ಯೂ-ಟ್ಯೂಬ್, ವಾಟ್ಸಪ್ ಸೇರಿದಂತೆ ಯಾವುದರ ಮೂಲಕವೇ ಆದರೂ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳು ಹೆಚ್ಚು ದಿನ ಐಡಲ್ ಆಗಿ ಇರುವಂತಾಗಬಾರದು. ನೇರ ಪ್ರಸಾರ, ರೆಕಾರ್ಡೆಡ್ ಪಾಠದ ಮಾದರಿಯ ತರಗತಿಗಳೂ ಆಗಬಹುದು.

school 1

2. ಶಾಲೆಗಳ ಗ್ರಂಥಾಲಯಕ್ಕೆ ದಿನಬಿಟ್ಟು ದಿನ ಮಕ್ಕಳು ಬಂದು ಪಾಠ ಪಡೆದು ಅದನ್ನು ಓದಿ ಮತ್ತೊಂದು ದಿನ ಬಂದು ಅದನ್ನು ಒಪ್ಪಿಸುವುದು.

3. ಈ ಹಂತದಲ್ಲಿ ಸಿಲೆಬಸ್ ಮುಖ್ಯವಲ್ಲ, ಕಲಿಕೆಯ ಅಂತರವನ್ನು ನಿವಾರಿಸುವುದು ಮುಖ್ಯವಾಗಬೇಕು. ಅದಕ್ಕಾಗಿ ಪಠ್ಯೇತರ ಚಟುವಟಿಕೆಗಳೇ ಆದರೂ ಸರಿ. ಅವುಗಳನ್ನೇ ಕಲಿಸುವ ಪ್ರಯತ್ನ ನಡೆಯಬೇಕು.

school

4. ಪ್ರಸ್ತುತ ಶೈಕ್ಷಣಿಕ ವರ್ಷ ಮತ್ತು ಮುಂದಿನ ಶೈಕ್ಷಣಿಕ ವರ್ಷದ ಪಠ್ಯದ ಕುರಿತು ಒಂದು ಹೈಬ್ರಿಡ್ ಪ್ಲಾನ್ ಮಾಡಿ ಮಕ್ಕಳನ್ನು ತಲುಪುವುದೊಳಿತು.

5. ಸಮುದಾಯ ಆಧಾರಿತ ಕೇಂದ್ರಗಳು, ನೆರೆಹೊರೆ ಮಕ್ಕಳ ಗುಂಪು, ಗ್ರಾಮದಲ್ಲಿರುವ ಶಿಕ್ಷಕರು, ಶಿಕ್ಷಕ ಪದವೀಧರರು, ಶಿಕ್ಷಕ ತರಬೇತಿ ಪಡೆದವರು, ಸ್ವಯಂ ಸೇವಕರನ್ನು ಈ ಹಂತದಲ್ಲಿ ಬಳಸಿಕೊಳ್ಳಬೇಕು.

6. ಇಂತಹ ಪ್ರಯತ್ನ ಜಾರಿಯಾದಲ್ಲಿ ಆಯಾ ಗ್ರಾಮ ಪಂಚಾಯ್ತಿ ಸದಸ್ಯರು, ಅಧಿಕಾರಿಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಹೆಜ್ಜೆ ಇಡಬೇಕು.

School College 1

7. ಕೋವಿಡ್ ಒಂದು ಅವಕಾಶವೆಂದು ಪರಿಗಣಿಸಿ ಆ ಸಮಯದಲ್ಲಿ ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೇ ಇತರೆ ಚಟುವಟಿಕೆಗಳಲ್ಲಿ ತೊಡಗಿಸಲು ಮುಂದಾಗಬೇಕು.

8. ತಂತ್ರಜ್ಞಾನಾಧಾರಿತ ಶಿಕ್ಷಣ ನೀಡುವಾಗ ಅದು ಮಕ್ಕಳಿಗೆ ಸಮರ್ಪಕಾಗಿ ತಲುಪುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಮಾನಿಟರ್ ಮಾಡುವ ವ್ಯವಸ್ಥೆ ಸಹ ಮುಖ್ಯವಾಗುತ್ತದೆ.

School Children

9. ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳು ಆರಂಭಿಸುವ ಸಾಧ್ಯತೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳ ಆಧಾರದಲ್ಲಿ ವಿಕೇಂದ್ರೀಕರಣಗೊಳಿಸಿ ಮಕ್ಕಳ ಹಿತದೃಷ್ಟಿಯಿಂದ ಪರ್ಯಾಯ ಕಲಿಕಾ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು.

10. ತಜ್ಞರ ಅಭಿಪ್ರಾಯಗಳೇನೇ ಇರಲಿ, ಒಟ್ಟಾರೆ ನಾಡಿನ ಮಕ್ಕಳ ಹಿತದೃಷ್ಟಿಯಿಂದ ಕಲಿಕಾ ಚಟುವಟಿಕೆಗಳನ್ನು ಆರಂಭಿಸುವುದು ಒಳ್ಳೆಯದು. ಮಕ್ಕಳು ಶೈಕ್ಷಣಿಕ ಚಟವಟಿಕೆಯಿಂದ ಹೆಚ್ಚು ದಿನಗಳು ವಿಮುಖವಾಗುವುದು ಅಷ್ಟು ಉಚಿತವಲ್ಲವಾದ್ದಾರಿಂದ ಯಾವುದಾದರೂ ರೀತಿಯಿಂದ ಅವರಿಗೆ ತರಗತಿಗಳು ತಲುಪುವಂತಾಗಬೇಕು. ಕೊರೊನಾ ಪರಿಸ್ಥಿತಿ ತಿಳಿಗೊಳ್ಳುವುದು ತಡವಾಗಬಹುದಾದರೂ ಶಾಲೆಗಳು ಇಲ್ಲವೇ ಕಲಿಕೆ ಒಮ್ಮೆ ಶುರುವಾದರೆ ಸಮಸ್ಯೆಗಳು ಒಂದು ಹಂತಕ್ಕೆ ಪರಿಹಾರ ದೊರೆಯಬಹುದು.

Govt School 1

11. ಪ್ರಯತ್ನಗಳತ್ತಲೇ ನಾವು ಚಿಂತಿಸುತ್ತಾ ಕೂರುವ ಬದಲು ಅವುಗಳನ್ನು ಜಾರಿಗೆ ತಂದು ಮಕ್ಕಳನ್ನು ತಲುಪುವುದಕ್ಕೆ ಮೊದಲ ಆದ್ಯತೆ ನೀಡಬೇಕಾದ ಅಗತ್ಯ ಹೆಚ್ಚಾಗಿದೆ.

12. ಆಯಾ ಪರಿಸ್ಥಿತಿಯಲ್ಲಿ ಲಭ್ಯವಿರುವ ಯಾವುದೇ ಅವಕಾಶ ಇಲ್ಲವೇ ಸೌಲಭ್ಯವನ್ನೂ ಈ ಸಂದರ್ಭದಲ್ಲಿ ಬಳಸಿಕೊಳ್ಳುವುದು ಒಳ್ಳೆಯದು. ಪ್ರಸ್ತುತ ಸಂದರ್ಭದಲ್ಲಿಯೂ ಗ್ರಾಮಗಳಲ್ಲಿ ಮಕ್ಕಳು ತಮ್ಮ ಶಾಲೆ ಬಳಿಯೇ ಬಂದು ದಿನಂಪ್ರತಿ ಆಟವಾಡುತ್ತಿದ್ದಾರೆ. ಮಕ್ಕಳಿಗೆ ಶಾಲಾ ತರಗತಿಗಳೇ ಅಚ್ಚುಮೆಚ್ಚು. ಸುರಕ್ಷಿತ ವಾತಾವರಣವೆಂದು ಕಂಡುಬಂದ ಕಡೆಗಳಲ್ಲಿ ಶಾಲಾ ತರಗತಿಗಳನ್ನೇ ಪ್ರಾರಂಭಿಸಿದರೆ ತಪ್ಪೇನು ಇಲ್ಲ.

13. ಆಯಾ ಪ್ರದೇಶದಲ್ಲಿ ಆಯಾ ನೆಲೆಯಲ್ಲಿ ಸಾಧ್ಯವಾಗಬಹುದಾದ ಆವಕಾಶಗಳನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಬೇಕು.

TAGGED:Covid 19educationkannada newskarnatakaschoolsuresh kumarಕರ್ನಾಟಕಕೊರೊನಾ ವೈರಸ್ಕೋವಿಡ್ 19ಬೆಂಗಳೂರುಶಿಕ್ಷಣಸುರೇಶ್ ಕುಮಾರ್
Share This Article
Facebook Whatsapp Whatsapp Telegram

Cinema news

Dhurandhar 2
ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ‘ಧುರಂಧರ್‌ 2’ – ಮೂರೇ ದಿನದಲ್ಲಿ ವಿಶ್ವಾದ್ಯಂತ 500 ಕೋಟಿ ಕಲೆಕ್ಷನ್‌
Bollywood Cinema Latest Top Stories
Puneeth Rajakumar
800 ಕೆ.ಜಿ ಕಂಚಿನ ಅಪ್ಪು ಪುತ್ಥಳಿ ಅನಾವರಣ
Bengaluru City Cinema Districts Karnataka Latest Sandalwood Top Stories
Moogathi Malli
ಮೂಗುತಿ ಮಲ್ಲಿ: ಚೂಟಿ ಹುಡುಗಿ, ಘಾಟಿ ಬೆಡಗಿ!
Cinema Latest Sandalwood Top Stories
Dhurandhar 2 ranveer singh
ರಿಲೀಸ್‌ ದಿನವೇ ಎಲ್ಲಾ ಬಾಕ್ಸಾಫೀಸ್‌ ರೆಕಾರ್ಡ್‌ ಉಡೀಸ್‌ ಮಾಡಿದ ಧುರಂಧರ್‌ 2‌ – ಗಳಿಸಿದ್ದೆಷ್ಟು?
Bollywood Cinema Latest Main Post

You Might Also Like

Mandya SP
Districts

ಫ್ಲೆಕ್ಸ್‌ ವಿಚಾರದಲ್ಲಿ ಕೊನೆಗೂ ಎಚ್ಚೆತ್ತ ಮಂಡ್ಯ ಎಸ್ಪಿ

Public TV
By Public TV
22 seconds ago
pm modi 2
Latest

8,931 ದಿನಗಳ ಆಡಳಿತ; ಸಿಎಂ, ಪಿಎಂ ಆಗಿ ಮೋದಿ ಐತಿಹಾಸಿಕ ದಾಖಲೆ

Public TV
By Public TV
1 minute ago
Lashkar Terrorist Bilal Arif Sarafi
Latest

ಕುಟುಂಬಸ್ಥರಿಂದಲೇ ಪಾಕ್‌ನ ಲಷ್ಕರ್‌ ಭಯೋತ್ಪಾದಕ ಬಿಲಾಲ್ ಆರಿಫ್‌ಗೆ ಚಾಕುವಿನಿಂದ ಇರಿದು, ಗುಂಡಿಕ್ಕಿ ಹತ್ಯೆ

Public TV
By Public TV
41 minutes ago
Mojtaba Khamenei
Latest

ನಿಮ್ಮ ಸುಪ್ರೀಂ ಲೀಡರ್ ಬದುಕಿದ್ದಾರಾ? – ಇರಾನ್‌ಗೆ ಅಮೆರಿಕ ಪ್ರಶ್ನೆ

Public TV
By Public TV
2 hours ago
Samartha Shamanur
Belgaum

ದಾವಣಗೆರೆ ದಕ್ಷಿಣ ಉಪಚುನಾವಣೆ; ಶಾಮನೂರು ಮೊಮ್ಮಗನಿಗೆ ಟಿಕೆಟ್‌ ಘೋಷಿಸಿದ ಕಾಂಗ್ರೆಸ್‌

Public TV
By Public TV
3 hours ago
hyderabad doctor dies by suicide after family objects to adopting a cat
Crime

ಬೆಕ್ಕು ಸಾಕ್ಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ ವೈದ್ಯೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?