ಹೆಬ್ಬಾಳ್ಕರ್ ನನ್ನ ಕಾಲಿಗೆ ಬಿದ್ದಿದ್ದು ನಿಜ: ರಮೇಶ್ ಜಾರಕಿಹೊಳಿ

Public TV
1 Min Read
Ramesh Jarkiholi Laxmi Hebbalkar

ಬೆಳಗಾವಿ: ಬುಡಾ ಮೆಂಬರ್ ಮಾಡುವಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನನ್ನ ಕಾಲಿಗೆ ಬಿದ್ದಿದ್ದು ನಿಜ. ಲಿಂಗಾಯತ ಸಮಾಜದ ಮಹಿಳೆ ಬೆಳೆಯಲಿ ಅಂತಾ ನಾನೇ ಸಹಾಯ ಮಾಡಿದ್ದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವ್ಯಕ್ತಿತ್ವ ಏನು ಎಂಬುವುದು ಬೆಳಗಾವಿಯ ಮೂಲೆ ಮೂಲೆಗೂ ಗೊತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲು ಹೋಗಲ್ಲ. ಮುಂದಿನ ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರ ಕೊಡಲಿದ್ದೇವೆ. ಕುಕ್ಕರ್ ವಿಷಯದಲ್ಲಿ ನನ್ನಿಂದ ಸಹಾಯ ಪಡೆದಿಲ್ಲ ಅಂದ್ರೆ ಅವರ ಮನೆ ದೇವರು ಹಟ್ಟಿ ವೀರಭದ್ರೇಶ್ವರ ಮೇಲೆ ಆಣೆ ಮಾಡಲಿ. ನಾನು ನಮ್ಮ ಮನೆ ದೇವರಾದ ಕೋಲ್ಹಾಪುರ ಮಹಾಲಕ್ಷ್ಮಿ ಮೇಲೆ ಆಣೆ ಮಾಡುತ್ತೇನೆ ಎಂದು ಸವಾಲು ಹಾಕಿದರು.

Laxmi Hebbalkar 2

ಆ ಹೆಣ್ಣು ಮಗಳಿಗೆ ರಾಜಕಾರಣ ಗೊತ್ತಿಲ್ಲ. ನಮ್ಮ ಸಹಾಯದಿಂದಲೇ ಆರಸಿ ಬಂದಿದ್ದು, ನನ್ನ ಕಾಲಿಗೆ ಬಿದ್ದಿದ್ದರಿಂದ ಬೂಡಾ ಮೆಂಬರ್ ಮಾಡಿದ್ದೀವಿ. ಬಿಜೆಪಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಲು ನಿನ್ನೆ ಮಾತನಾಡಿದ್ದೇನೆ ವಿನಃ ಯಾರಿಗೂ ಬಗ್ಗೆ ವೈಯಕ್ತಿಕವಾಗಿ ಹೇಳಿಲ್ಲ ಎಂದು ಆಣೆ- ಪ್ರಮಾಣ ಮಾಡುವುದಕ್ಕೆ ಸಚಿವರು ಆಹ್ವಾನ ನೀಡಿದರು.

laxmi ramesh

ರಮೇಶ್ ಜಾರಕಿಹೊಳಿ ಹೇಳಿದ್ದೇನು?: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಿಗೆ ಹಣದ ಗ..ಂಡ್ ಬಹಳ ಇದೆ. ನಾವು ಹಣದ ಗ…ಂಡ್‍ನ್ನು ನಾವು ತೋರಿಸಲು ಸಿದ್ಧರಿದ್ದೇವೆ. ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟ ಕುಕ್ಕರ್ ಸ್ಟಾರ್ಟ್ ಇದೆಯೋ ಬಂದ್ ಇದೆಯೋ? ಎಂದು ವ್ಯಂಗ್ಯವಾಡಿದ್ದರು.

vlcsnap 2018 04 19 11h32m09s233 e1574576051419

ಹೆಬ್ಬಾಳ್ಕರ್ ತಿರುಗೇಟು: ಸರ್ಕಾರದ ಸಚಿವ ಸ್ಥಾನದಲ್ಲಿದ್ದುಕೊಂಡು ಈ ರೀತಿ ಮಾತನಾಡುವುದು ಸರಿಯಲ್ಲ. ಕುಕ್ಕರ್ ವಿಚಾರ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಮಾತನಾಡಿದರೇ ನ್ಯಾಯಾಂಗ ನಿಂದನೆ ಆಗುತ್ತೆ. ಆದರೆ ಕ್ಷೇತ್ರದಲ್ಲಿ ಹರ್ಷ ಶುಗರ್ ಕಾರ್ಖಾನೆ ಇದೆ ಎಂಬ ಕಾರಣಕ್ಕೆ ಕಾರ್ಯಕ್ರಮ ಮಾಡಿ ಕುಕ್ಕರ್ ನೀಡಿದ್ದೆವು. ಸಚಿವರ ಬಳಿ ಈ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಕ್ಯಾಬಿನೆಟ್ ಸಚಿವರು ಸೋಕ್ಕಿನಿಂದ ನನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ಕಾನೂನಿನ ಹೋರಾಟ ನಡೆಸಲು ವಕೀಲರ ಬಳಿ ಮಾತುಕತೆ ನಡೆಸುತ್ತಿದ್ದೇನೆ ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *