ಕ್ವಾರಂಟೈನ್ ಕೇಂದ್ರಗಳಲ್ಲಿ ನರಕ ದರ್ಶನ- ಸ್ನಾನಕ್ಕೆ ನೀರಿಲ್ಲ, ಊಟ ಸ್ಚಚ್ಛತೆನೇ ಇಲ್ಲ!

Public TV
1 Min Read
QURANTINE 7

ಯಾದಗಿರಿ/ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ಮಧ್ಯೆ ಮತ್ತೊಂದು ಅವಾಂತರ ಸೃಷ್ಟಿಯಾಗುತ್ತಿದೆ. ಹೇಳೋಕೆ ಅವರಿಗೆಲ್ಲಾ ಉತ್ತಮ ವ್ಯವಸ್ಥೆ ಇದೆ ಅಂತಾರೆ. ಆದರೆ ಅವರು ಪ್ರತಿ ಕ್ಷಣಕ್ಕೂ ನರಕಯಾತನೆ ಆನುಭವಿಸುತ್ತಿದ್ದಾರೆ.

ಹೌದು. ಯಾದಗಿರಿ ಜಿಲ್ಲೆಯ ಕ್ವಾರಂಟೈನ್ ಕೇಂದ್ರಗಳಲ್ಲಿ ಸ್ನಾನ ಮಾಡೋಕೆ ನೀರಿಲ್ಲ. ರಾತ್ರಿ ಸೊಳ್ಳೆ ಕಡಿತದಿಂದ ನಿದ್ದೆ ಇಲ್ಲ. ಊಟಕ್ಕೆ ಹಳಸಿದ ಬೇಳೆ ಸಾರು ನೀಡುತ್ತಾರೆ. ರೂಮ್‍ನಲ್ಲಿ ಸ್ವಚ್ಛತೆ ಇಲ್ಲ. ಈ ಬಗ್ಗೆ ಕೇಳಿದರೆ ಅಧಿಕಾರಿಗಳು ಉಡಾಫೆಯ ಉತ್ತರ ನೀಡುತ್ತಾರೆ. ಕ್ವಾರೆಂಟೈನ್ ಕೇಂದ್ರ ಕೊರೊನಾ ತಡೆಗಟ್ಟಲು ಇದೆಯಾ ಅಥವಾ ಸಾಂಕ್ರಾಮಿಕ ರೋಗ ಹರಡಲು ಇದೆಯಾ ಅನ್ನೋ ಅನುಮಾನ ಆತಂಕಕ್ಕೆ ಕಾರಣವಾಗಿದೆ.

QURANTINE 5

ಯಾದಗಿರಿಯಲ್ಲಿ ಸದ್ಯ ಕೊರೊನಾ ಪಾಸಿಟಿವ್ ಸಂಖ್ಯೆ ಸಾವಿರ ಗಡಿ ದಾಟಿದೆ. ಮಹಾರಾಷ್ಟ್ರದಿಂದ ಇಲ್ಲಿಯವರೆಗೆ 20 ಸಾವಿರ ಜನ ಜಿಲ್ಲೆಗೆ ಬಂದಿದ್ದಾರೆ. ಆದರೆ ಅಂತರ್ ರಾಜ್ಯದ ಪ್ರಯಾಣ ಮಾಡಿದವರಿಗೆ ಸಾಂಸ್ಥಿಕ ಕ್ವಾರಂಟೈನ್ ಮುಂದುವರಿದಿದೆ. ಕ್ವಾರಂಟೈನ್ ಕೇಂದ್ರಗಳ ಪರಿಸ್ಥಿತಿ ನೋಡಿದ್ರೆ ಇಲ್ಲಿರೋದಕ್ಕಿಂತ ಸಾಯೋದೇ ಲೇಸು ಅನ್ನೋ ಪರಿಸ್ಥಿತಿ ಜನರದ್ದಾಗಿದೆ.

ಇವರಿಗೆ ಇರಲು ಸರಿಯಾದ ವ್ಯವಸ್ಥೆ ಮಾಡುವಲ್ಲಿ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ. ನಿತ್ಯ ಕರ್ಮಗಳಿಗೆ ಮತ್ತು ಸ್ನಾನಕ್ಕೆ ಶೌಚಾಲಯದಲ್ಲಿ ನೀರಿಲ್ಲದೇ, ಸಮಯಕ್ಕೆ ಸರಿಯಾಗಿ ಊಟವಿಲ್ಲದೆ ಜನರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ.

QURANTINE

ಹುಬ್ಬಳ್ಳಿಯಲ್ಲೂ ಕ್ವಾರಂಟೈನ್ ಅವ್ಯವಸ್ಥೆ:
ಇತ್ತ ಹುಬ್ಬಳ್ಳಿಯಲ್ಲೂ ಕ್ವಾರಂಟೈನ್ ಕೇಂದ್ರಗಳಲ್ಲಿ ಅದೇ ಪರಿಸ್ಥಿತಿ. ಹುಬ್ಬಳ್ಳಿಯ ಹೆಗ್ಗೆರಿಯಲ್ಲಿರುವ ಆಯುರ್ವೇದಿಕ್ ಕಾಲೇಜಿನ ಸೆಂಟರ್‍ನಲ್ಲಿರುವ 23 ರೋಗಿಗಳಿಗೆ ಇಲ್ಲಿವರೆಗೆ ಔಷಧಿಯನ್ನ ನೀಡಿಲ್ಲ. ವೈದ್ಯರಿಗೆ ಕೇಳಿದರೆ ನಿಮಗೆ ಕೊರೊನಾ ದೃಢ ಪಟ್ಟನಂತರವೇ ಕಿಮ್ಸ್‍ಗೆ ಕಳಿಸಿದ ನಂತರ ಟ್ರೀಟ್ಮೆಂಟ್ ಕೊಡ್ತಾರೆಂಬ ಸಬೂಬು ನೀಡ್ತಾರಂತೆ. ಇಲ್ಲಿರುವ ರೋಗಿಗಳಿಗೆ ಮಧ್ನಾಹ್ನ ಅರೇ ಬೆಂದ ಅನ್ನ ನೀಡ್ತಿದ್ದಾರೆ. ಇನ್ನು ರೋಗಿಗಳಿಗೆ ಬಿಸಿ ನೀರನ್ನಾದ್ರೂ ಕುಡಿಯಲಿಕ್ಕೆ ಕೊಡ್ತಾರೆ ಅಂದ್ರೆ ಅದೂ ಇಲ್ಲ. ಇಲ್ಲಿರುವ ಜನರು ಕೂಡ ನರಕಯಾತನೆ ಅನುಭವಿಸುತ್ತಿದ್ದಾರೆ.

QURANTINE 1

ಒಟ್ಟಾರೆಯಾಗಿ ಆರೋಗ್ಯ ಇಲಾಖೆ ಕ್ವಾರಂಟೈನ್ ಕೇಂದ್ರಗಳಲ್ಲಿ ಎಲ್ಲಾ ಸೌಲಭ್ಯವನ್ನು ಕೊಡುತ್ತಿದ್ದೇವೆ ಎಂದು ಹೇಳುತ್ತೆ, ಆದರೆ ಕೋವಿಡ್ ಕೇರ್ ಸೆಂಟರ್‍ನಲ್ಲಿ ಜನರಿಗೆ ನರಕ ದರ್ಶನವಾಗುತ್ತಿರುವುದು ಮಾತ್ರ ನಿಜಕ್ಕೂ ಶೋಚನೀಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *