-ಎರಡು ದಿನದಿಂದ ಕಾಣೆಯಾಗಿದ್ದ ಚಾಲಕನ ಶವ ಪತ್ತೆ
ಜೈಪುರ: ನನ್ನಿಂದ ಕುಟುಂಬದ ಸದಸ್ಯರಿಗೆ ಕೊರೊನಾ ಸೋಂಕು ತಗುಲೋದು ಬೇಡ ಎಂದು ಅಂಬುಲೆನ್ಸ್ ಚಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನ ಜೋಧಪುರಲ್ಲಿ ನಡೆದಿದೆ.
ದಿನೇಶ್ ಗೌಡ ಆತ್ಮಹತ್ಯೆ ಶರಣಾದ ಅಂಬುಲೆನ್ಸ್ ಚಾಲಕ. ದಿನೇಶ್ ಶವ ಬುಧವಾರ ಕಲ್ಯಾಣದ ಕೆರೆಯಲ್ಲಿ ಪತ್ತೆಯಾಗಿದೆ. ಶವ ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರಿ ಶವವನ್ನು ಹೊರ ತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಕಡವಡ ನಿವಾಸಿಯಾಗಿದ್ದ ದಿನೇಶ್ ಗೌಡ ಕೋವಿಡ್-19 ಆಸ್ಪತ್ರೆಯ ಅಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು.
ಕೆಲವು ದಿನಗಳ ಹಿಂದೆ ಕೋವಿಡ್ ಪರೀಕ್ಷೆಗೆಗೊಳಗಾಗಿದ್ದ ದಿನೇಶ್, ತನಗೆ ಸೋಂಕು ತಗುಲಿರುವ ಸಾಧ್ಯತೆಗಳಿವೆ ಎಂದು ಭಯಗೊಂಡಿದ್ದನು. ಮನೆಗೆ ತೆರಳಿದ್ರೆ ಕುಟುಂಬಸ್ಥರಿಗೂ ಸೋಂಕು ತಗಲುತ್ತೆ ಎಂದು ಆತಂಕಗೊಂಡಿದ್ದನು. ಎರಡು ದಿನಗಳಿಂದ ಕಾಣೆಯಾಗಿದ್ದ ದಿನೇಶ್ ಶವ ನಗರದ ಕೆರೆಯಲ್ಲಿ ಪತ್ತೆಯಾಗಿದೆ. ದಿನೇಶ್ ಸಾವಿನ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಕೋವಿಡ್ ವರದಿಗಾಗಿ ಕಾಯುತ್ತಿದ್ದಾರೆ.