ಸುಶಾಂತ್ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರ್ತಾನೆ: ರಾಖಿ ಸಾವಂತ್

Public TV
1 Min Read
Sushant Rakhi

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತೆ ಮರುಜನ್ಮ ಪಡೆಯಲಿದ್ದಾರೆ ಎಂದು ಡ್ರಾಮಾ ಕ್ವೀನ್ ರಾಖಿ ಸಾವಂತ್ ಹೇಳಿದ್ದಾರೆ.

ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಂಡಿರುವ ರಾಖಿ ಸಾವಂತ್, ರಾತ್ರಿ ಮಲಗಿದಾಗ ಅಶರೀರ ವಾಣಿಯೊಂದು ಕೇಳಿಸಿತು. ಭಯಗೊಂಡು ಯಾರು ಅಂತ ಕೇಳಿದಾಗ ಸುಶಾಂತ್ ಎಂಬ ಹೆಸರು ಬಂತು. ನಾನು ಮತ್ತೆ ನಿನ್ನ ಮಗನಾಗಿ ಹುಟ್ಟಿ ಬರಲಿದ್ದೇನೆ. ಈ ವಿಷಯವನ್ನು ನ್ನ ಅಭಿಮಾನಿಗಳಿಗೆ ತಿಳಿಸಿ ಎಂದು ಹೇಳಿದ. ಬಾಲಿವುಡ್ ಎಲ್ಲವನ್ನು ನನಗೆ ಕೊಟ್ಟು, ಹಿಂಪಡೆಯಿತು. ಪಾರ್ಟಿಗಳಿಂದ ನನ್ನನ್ನು ಬಾಯ್ಕಟ್ ಮಾಡಲಾಯಿತು. ನಾನು ಯಾರನ್ನೂ ಸುಮ್ಮನೆ ಬಿಡಲ್ಲ ಎಂದು ಸಂದೇಶವನ್ನು ಸುಶಾಂತ್ ಕನಸಿನಲ್ಲಿ ಹೇಳಿದ ಎಂದು ರಾಖಿ ಹೇಳಿಕೊಂಡಿದ್ದಾರೆ.

https://www.instagram.com/p/CBsKsE-j__y/

ನನ್ನ ಸಾವಿನಿಂದ ಅರ್ಧಕ್ಕೆ ನಿಂತಿರೋ ಸಿನಿಮಾಗಳನ್ನು ಪೂರ್ಣಗೊಳಿಸುವಂತೆ ಹೇಳಿ. ಆ ಸಿನಿಮಾಗಳಲ್ಲಿ ರಾಖಿ ಮತ್ತು ಸನ್ನಿ ಲಿಯೋನ್ ಐಟಂ ಹಾಡು ಇರಬೇಕು. ನನ್ನನ್ನ ಬೆಂಬಲಿಸಿದ ಕಂಗನಾ ರಣಾವತ್, ರಾಖಿ ಸಾವಂತ್ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು. ದೇಹವಿಲ್ಲದೇ ಏನಾಯ್ತು, ನನ್ನ ಆತ್ಮ ಇನ್ನು ಜೀವಂತವಾಗಿದ್ದು, ಯಾರನ್ನೂ ಬಿಡಲ್ಲ ಎಂದು ಹೇಳುತ್ತಿದ್ದಾಗ ಎಚ್ಚರವಾಯಿತು. ಸಮಯ ಬೆಳಗಿನ ಜಾವ 4 ಗಂಟೆ ಆಗಿತ್ತು. ಬೆಳಗಿನ ಜಾವ ಬಿದ್ದು ಕನಸು ನನಸಾಗುತ್ತೆ ಎಂಬ ಮಾತಿದೆ ಎಂದು ರಾಖಿ ರೀಲ್ ಬಿಟ್ಟಿದ್ದಾರೆ.

https://www.instagram.com/p/CBiVJyqDo33/

ಜೂನ್ 14ರಂದು ಸುಶಾಂತ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಬಾಲಿವುಡ್‍ನಲ್ಲಿಯ ಸ್ವಜನಪಕ್ಷಪಾತದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಸುಶಾಂತ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *