ಬೆಂಗಳೂರು: ಲಾಕ್‍ಡೌನ್‍ನಿಂದ ಮನೆಯಿಂದ ಹೊರಗೆ ಬರದೆ ಕಾಲ ಕಳೆಯುತ್ತಿರುವ ಜನರಿಗೆ ಬೇಸರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದಾಸರಹಳ್ಳಿಯಲ್ಲಿ ಕನ್ನಡ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ಆರ್ ಸತೀಶ್ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ದಾಸರಹಳ್ಳಿಯ ಮನೆ ಮನೆಗೆ ಹಾಗೂ ಆಟೋ ಚಾಲಕರು, ಅಂಗಡಿ ಮಾಲೀಕರು ಬೀದಿ ಬದಿ ವ್ಯಾಪಾರಿಗಳಿಗೂ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಪ್ರೊಫೆಸರ್ ಹಾಗೂ ಸಾಹಿತಿಗಳಾದ ಪ್ರಸನ್ನಕುಮಾರ್ ಬರೆದಿರುವಂತಹ ಮಾಸದ ನೆನಪು, ಪ್ರೇಮ ಜ್ಯೋತಿ, ನೆನಪುಗಳ ಮಾತು ಮಧುರ ಮಾತಿನಲ್ಲಿಹೇಳಲಾರೆನು, ಬಾಳೊಂದು ಹೂಬನ ಹಾಗೂ ವಿವೇಕಾನಂದರ ಪುಸ್ತಕಗಳು ಸೇರಿದಂತೆ ನಾನಾ ವಿಚಾರದ ವಿವಿಧ ಪುಸ್ತಕಗಳನ್ನ ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಎಸ್.ಮುನಿರಾಜು ಉದ್ಘಾಟಿಸಿ ಮಾತನಾಡಿ, ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬಳಸಿಕೊಂಡು ಕನ್ನಡದ ಅಭಿಮಾನವನ್ನು ಹೆಚ್ಚು ಮಾಡಬೇಕು. ಕನ್ನಡ ಪುಸ್ತಕಗಳನ್ನು ನೀವೆಲ್ಲರೂ ಓದಿ ಇತರರಿಗೂ ಪುಸ್ತಕವನ್ನು ನೀಡಿ ಎಂದರು.
ಇದೇ ವೇಳೆ ಸಾಹಿತಿಗಳಾದ ದ್ವಾರಾನುಕುಂಟೆ ಪಾತಣ್ಣ, ವೈ.ವಿ.ಹೆಚ್.ಜಯದೇವ್, ಪ್ರಸನ್ನ ಕುಮಾರ್, ನಾಗರಾಜ್ ಜಿ. ನಾಗಸಂದ್ರ, ಪಾಲಿಕೆ ಸದಸ್ಯ ಎನ್. ಲೋಕೇಶ್. ಟಿ.ಎಸ್.ಗಂಗರಾಜು, ಸಂದೀಪ್ ಸಿಂಗ್, ಬಿ.ಟಿ.ಶ್ರೀನಿವಾಸ್.ಪಿ.ಹೆಚ್.ರಾಜು ಇದ್ದರು.