ದೈಹಿಕವಾಗಿ ಬಳಸಿಕೊಂಡು ಪ್ರಿಯಕರ ಮೋಸ – ಸೆಲ್ಫಿ ವಿಡಿಯೋದಲ್ಲೇ ನಟಿ ಆತ್ಮಹತ್ಯೆ

Public TV
1 Min Read
SUICIDE copy

ಬೆಂಗಳೂರು: ಪ್ರಿಯಕರನಿಂದ ಮೋಸ ಹೋದ ಸ್ಯಾಂಡಲ್‍ವುಡ್‍ನ ಕಿರುತೆರೆ ನಟಿಯೊಬ್ಬರು ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್‍ನಲ್ಲಿ ನಡೆದಿದೆ.

ಚಂದನಾ (29) ಆತ್ಮಹತ್ಯೆ ಮಾಡಿಕೊಂಡ ಯುವತಿ. ಇದೇ ಮೇ 28 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವಕನ ಮೋಸಕ್ಕೆ ಬಲಿಯಾದ ನಟಿ ಸೆಲ್ಫಿ ವಿಡಿಯೋದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

SUICIDE 1 copy

ಮೃತ ಚಂದನಾ ಮತ್ತು ಪ್ರಿಯಕರ ದಿನೇಶ್ ಸುಮಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಎರಡು ಮನೆಯಲ್ಲೂ ಇವರ ಮದುವೆಗೆ ಒಪ್ಪಿಗೆ ನೀಡಲಾಗಿತ್ತು. ದಿನೇಶ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ 5 ಲಕ್ಷ ಹಣವನ್ನು ಪಡೆದುಕೊಂಡಿದ್ದನು. ಅಷ್ಟೇ ಅಲ್ಲದೇ ಆರೋಪಿ ಚಂದನಾರನ್ನು ನಂಬಿಸಿ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದನು. ಅಲ್ಲದೇ ಆರೋಪಿ ದಿನೇಶ್ ಚಂದನಾರಿಗೆ ಗರ್ಭಪಾತ ಕೂಡ ಮಾಡಿಸಿದ್ದನು ಎಂದು ತಿಳಿದು ಬಂದಿದೆ.

ಕೊನೆಗೆ ಲಕ್ಷ, ಲಕ್ಷ ಹಣ ಪಡೆದು ಮದುವೆಯಾಗಲು ನಿರಾಕರಿಸಿದ್ದಾನೆ. ಅಲ್ಲದೇ ಆರೋಪಿ ಚಂದನಾರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದನು. ಇದರಿಂದ ನೊಂದು ಚಂದನಾ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

WhatsApp Image 2020 06 01 at 3 copy

ಈ ಕುರಿತು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ನಟಿ ಆತ್ಮಹತ್ಯೆ ಮಾಡಿಕೊಂಡ ನಂತರ ಪ್ರಿಯಕರ ತನ್ನ ಕುಟುಂಬದವರ ಜೊತೆ ಪರಾರಿಯಾಗಿದ್ದಾನೆ. ಈಗ ಚಂದನಾ ಪೋಷಕರು ದಿನೇಶ್ ಮತ್ತು ಆತನ ಕುಟುಂಬದವರ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿ ದಿನೇಶ್‍ಗಾಗಿ ಹುಡುಕಾಟ ಆರಂಭಿಸಿದ್ದಾರೆ.

WhatsApp Image 2020 06 01 at 3.30.16 PM 1

Share This Article
Leave a Comment

Leave a Reply

Your email address will not be published. Required fields are marked *