ಮುಂಬೈನಿಂದ ಯಾದಗಿರಿಗೆ ಬಂದ ಮಹಿಳೆಗೆ ಕೊರೊನಾ- 13ಕ್ಕೇರಿದ ಸೋಂಕಿತರ ಸಂಖ್ಯೆ

Public TV
1 Min Read
CORONA VIRUS 4

ಯಾದಗಿರಿ: ಮುಂಬೈನಿಂದ ಯಾದಗಿರಿಗೆ ಬಂದವರ ಪೈಕಿ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಈ ಮೂಲಕ ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ.

ಜಿಲ್ಲೆಯ ಎಂಪಾಡ್ ಗ್ರಾಮದ 55 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್ ಇಂದು ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಅದರಲ್ಲೂ ಕ್ವಾರೆಂಟೈನ್ ಕೇಂದ್ರಗಳಲ್ಲಿ ಇರುವವರಿಗೆ ಆತಂಕ ಹೆಚ್ಚಾಗಿದೆ.

coronavirus 3

ಪಾಸಿಟಿವ್ ಬಂದ ವರ್ಷದ ಮಹಿಳೆ ಮೇ 14 ರಂದು ಖಾಸಗಿ ಕಾರಿನ ಮೂಲಕ ಮುಂಬೈನಿಂದ ಯಾದಗಿರಿಗೆ ಬಂದಿದ್ದಾಳೆ. ಮಹಿಳೆಗೆ ಜ್ವರ ತಪಾಸಣೆ ಮಾಡಿ ನಂತರ ಆಕೆಯನ್ನು ಎಂಪಾಡ್ ನ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಯಾದಗಿರಿಯಲ್ಲಿ ಇದೂವರೆಗೆ ಪತ್ತೆಯಾಗಿರುವ 13 ಸೋಂಕಿತರ ಪೈಕಿ, 11 ಸೋಂಕಿತರು ಮುಂಬೈನಿಂದ ಬಂದವರಾಗಿದ್ದು, ಇನ್ನಿಬ್ಬರು ಗುಜರಾತ್ ನಿಂದ ಬಂದಿರುವ ತಬ್ಲಿಘಿಗಳಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *