ಸಂಚಾರಿ ಮಾಂಸ ಮಾರಾಟ ಮಳಿಗೆಗೆ ಸುರೇಶ್ ಇಟ್ನಾಳ್ ಚಾಲನೆ

Public TV
1 Min Read
Hubli Travel Meat

– ಚಿಕನ್ 220, ಮಟನ್ 700 ದರ ನಿಗದಿ

ಹುಬ್ಬಳ್ಳಿ: ಲಾಕ್‍ಡೌನ್ ಹಾಗೂ ರಂಜಾನ್ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗಲಿ ಎಂದು ಮಿಟ್ ಆನ್ ಮಿಲ್ಸ್ (ಮಾಂಸ ಮತ್ತು ಮಾಂಸದಿಂದ ತಯಾರಿಸಿದ ಖಾದ್ಯ ಪದಾರ್ಥಗಳ) ಸಂಚಾರಿ ಮಾರಾಟ ಮಳಿಗೆಗೆ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್ ಪಾಲಿಕೆ ಆವರಣದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದು, ಈ ವೇಳೆಯಲ್ಲಿ ಜನರು ಮನೆಯಿಂದ ಹೊರಬರದಂತೆ ಆದೇಶ ಹೊರಡಿಸಲಾಗಿದೆ. ಅಲ್ಲದೆ ಇದು ರಂಜಾನ್ ತಿಂಗಳ ಹಿನ್ನೆಲೆಯಲ್ಲಿ ಜನರ ಮಾಂಸಕ್ಕೆ ಬೇಡಿಕೆ ಹೆಚ್ಚಿದೆ. ಪರಿಣಾಮ ಅವರ ಪ್ರದೇಶದಲ್ಲಿಯೇ ಮಾಂಸ ಪದಾರ್ಥಗಳನ್ನು ಮುಟ್ಟಿಸುವ ಉದ್ದೇಶದಿಂದ ಮಾಂಸ ಮತ್ತು ಮಾಂಸದಿಂದ ತಯಾರಿಸಿದ ಖಾದ್ಯ ಪದಾರ್ಥಗಳ ಸಂಚಾರಿ ಮಾರಾಟ ಮಳಿಗೆಯನ್ನು ಪ್ರಾರಂಭಿಸಲಾಗಿದೆ ಎಂದರು.

Hubli Travel Meat 3

ಮಿಟ್ ಆನ್ ವಿಲ್ಸ್ ಮೊದಲ ಹಂತದಲ್ಲಿ ಹುಬ್ಬಳ್ಳಿಯ ಎಲ್ಲ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದ್ದು, ಹಂತ ಹಂತವಾಗಿ ಧಾರವಾಡಕ್ಕೂ ವಿಸ್ತರಿಸಲಾಗುವುದು. ಇನ್ನೂ ಉತ್ತಮ ಗುಣಮಟ್ಟದ ಮಾಂಸವನ್ನು ಕೆಜಿ ಚಿಕನ್‍ಗೆ 220, ಕೆಜಿ ಮಟನ್‍ಗೆ 700 ರೂ. ನಿಗದಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ದರದಲ್ಲಿ ಇನ್ನಷ್ಟು ಕಡಿತಗೊಳಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.

Hubli Travel Meat 2

ಡಾ. ಪ್ರಭು ಬಿರಾದಾರ ಮಾತನಾಡಿ, ಮಾಂಸವನ್ನು ಉಪಯೋಗ ಮಾಡುವುದರಿಂದ ರೋಗಿಗಳಿಗೆ ಇನ್ನಷ್ಟು ವಿಟಮಿನ್ ನೀಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ವಿಸುವುದು. ಹಾಗಾಗಿ ಸಾರ್ವಜನಿಕರು ಮಿಟ್ ಆನ್ ವಿಲ್ಸ್ ನ ಉಪಯೋಗ ಪಡೆದುಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಡಾ. ರವಿ ಸಾಲಿಗೌಡರು, ಪಾಲಿಕೆ ಸಹಾಯಕ ಆಯುಕ್ತರು ಎಜೀಜ್ ದೇಸಾಯಿ, ಶ್ರೀಧರ್ ಸಾಮ್ರಾಣಿ ಸೇರಿದಂತೆ ಇತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *