Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ತನ್ನ ಕುಟುಂಬಕ್ಕೆ ಊಟವಿಲ್ಲದಿದ್ರೂ ಬೆಂಗ್ಳೂರಿನ ಮಂದಿಗೆ ಆಹಾರ ವಿತರಣೆ

Public TV
Last updated: April 15, 2020 3:26 pm
Public TV
Share
2 Min Read
sheru 1
SHARE

– ಉಳಿತಾಯದ ಹಣದ ಖರ್ಚು
– ಪ್ರತಿದಿನ 2 ಸಾವಿರ ಆಹಾರ ಪ್ಯಾಕೆಟ್ ವಿತರಣೆ

ಬೆಂಗಳೂರು: ಲಾಕ್‍ಡೌನ್‍ನಿಂದ ಅನೇಕ ಬಡವರು, ನಿರಾಶ್ರಿತರು ಮತ್ತು ನಿರ್ಗತಿಕರು ಊಟಕ್ಕಾಗಿ ಪರದಾಡುತ್ತಿದ್ದಾರೆ. ಅಂತವರಿಗೆ ಸರ್ಕಾರ ಸೇರಿದಂತೆ ಅನೇಕರು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬರು ತನ್ನ ಮನೆಯವರಿಗೆ ಊಟವಿಲ್ಲದಿದ್ದರೂ ಬೇರೆಯವರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ.

27 ವರ್ಷದ ಶೆರು ಶೇಖ್ ಬಡವರಿಗೆ ಊಟ ಪೂರೈಕೆ ಮಾಡುತ್ತಿದ್ದಾರೆ. ಇವರು ಝೊಮಾಟೋದಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಲಾಕ್‍ಡೌನ್ ಆದಾಗಿನಿಂದ ಯಾವುದೇ ಕೆಲಸವಿಲ್ಲದ ಕಾರಣ ಶೇಖ್ ಮನೆಯಲ್ಲಿಯಿದ್ದರು. ಆದರೆ ಮನೆಯಲ್ಲಿ ಸುಮ್ಮನೇ ಕೂರದೆ ಉಚಿತವಾಗಿ ಜನರಿಗೆ ಆಹಾರವನ್ನು ತಲುಪಿಸುವಂತಹ ಕೆಲಸ ಮಾಡುತ್ತಿದ್ದಾರೆ.

corona 5

ಅಗತ್ಯವಿರುವವರನ್ನು ತಲುಪಲು ಶೇಖ್ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅವರೊಂದಿಗೆ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು 2,000 ಆಹಾರ ಪ್ಯಾಕೆಟ್‍ಗಳನ್ನು ಪೂರೈಸುತ್ತಿದ್ದಾರೆ.

ಸದ್ಯಕ್ಕೆ ನನಗೆ ಯಾವುದೇ ಕೆಲಸವಿಲ್ಲ. ಅಲ್ಲದೇ ನನ್ನ ಕುಟುಂಬವು ಹಸಿದುಕೊಂಡಿದೆ. ಆದರೆ ಕೆಲವರ ಪರಿಸ್ಥಿತಿ ಇನ್ನೂ ಕೆಟ್ಟಾಗಿದೆ. ಹೀಗಾಗಿ ವಾರ್ಡ್ 33ರ ಮನೋರಾಯನಪಾಳ್ಯದಲ್ಲಿ ಅಗತ್ಯವಿರುವವರಿಗೆ ಆಹಾರವನ್ನು ತಲುಪಿಸುತ್ತಿದ್ದೇನೆ. ಆಹಾರವನ್ನು ತಲುಪಿಸಲು ನನಗೆ ಪಾಸ್ ಇದೆ. ಆದರೆ ಝೊಮಾಟೋದಿಂದ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಮನೆಯಲ್ಲಿ ಕುಳಿತುಕೊಂಡು ಸಮಯ ವ್ಯರ್ಥ ಮಾಡುವ ಬದಲು ಬೇರೆ ಏನಾದರೂ ಕೆಲಸ ಮಾಡಬೇಕು ಎಂದು ಯೋಚಿಸಿದ್ದೆ. ಅದೇ ರೀತಿ ನಾನು ಯಶವಂತಪುರ ರೈಲ್ವೇ ನಿಲ್ದಾಣದ ಬಳಿಯಿಂದ ಆಹಾರದ ಪೊಟ್ಟಣಗಳನ್ನು ಸಂಗ್ರಹಿಸಿ ಮನೋರಾಯನಪಾಳ್ಯದ ಜನರಿಗೆ ವಿತರಿಸುತ್ತೇನೆ ಎಂದು ಶೇಖ್ ತಿಳಿಸಿದರು.

Bengaluru Lockdown 4

ಕಡಿಮೆ ಆಹಾರ ಪ್ಯಾಕೆಟ್‍ಗಳಿರುವ ದಿನಗಳಲ್ಲಿ, ಸಾಮಾನ್ಯವಾಗಿ ತನ್ನ ಕುಟುಂಬಕ್ಕಾಗಿ ಇಡುವ ಪಾಲನ್ನು ಸಹ ಬೇರೆಯವರಿಗೆ ವಿತರಿಸುತ್ತಿದ್ದಾರೆ. ಶೇಖ್‍ಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದು, ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಎಂದರೆ ಶೇಖ್ ಮಾತ್ರ. ಆದರೂ ಆಹಾರ ಪ್ಯಾಕೆಟ್‍ಗಳನ್ನು ಸಾಗಿಸಲು ಮತ್ತು ವಿತರಿಸಲು ತಾವು ಉಳಿತಾಯ ಮಾಡಿಕೊಂಡಿದ್ದ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಪ್ರತಿದಿನ ಮನೋರಾಯನಪಾಳ್ಯದ ಜನರು ಶೇಖ್ ಬರುವ ಆಟೋಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ. ಒಂದು ವೇಳೆ ಶೇಕ್ ಬರುವುದನ್ನು ತಡ ಮಾಡಿದರೆ, ಆ ಪ್ರದೇಶದ ಬಡವರು ಆತನಿಗೆ ಮನೆಯಿಂದ ಹೊರಗೆ ನಿಂತು ಕಾಯುತ್ತಿರುತ್ತಾರೆ.

ಈ ಪ್ರದೇಶದವರಿಗೆ ಊಟದ ವ್ಯವಸ್ಥೆ ಮಾಡಬೇಕು ಎಂದು ನಮಗೆ 2,000 ಆಹಾರ ಪ್ಯಾಕೆಟ್‍ಗಳು ಬೇಕಾಗುತ್ತವೆ. ಆದರೆ ಆಹಾರವನ್ನು ಎನ್‍ಜಿಒ ಸಂಸ್ಥೆವೊಂದು ಪೂರೈಸುತ್ತಿದೆ. ಹೀಗಾಗಿ ದಿನದಲ್ಲಿ ಎಷ್ಟು ಆಹಾರದ ಪೊಟ್ಟಣ ಸರಬರಾಜು ಮಾಡಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇಲ್ಲಿ ವಾಸಿಸುವವರಿಗೆ ಬಿಬಿಎಂಪಿ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

TAGGED:bengaluruCoronafoodLockdownPublic TVಆಹಾರಕೊರೊನಾಪಬ್ಲಿಕ್ ಟಿವಿಬೆಂಗಳೂರುಲಾಕ್‍ಡೌನ್
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Sumalatha
ಕೋರ್ಟ್‌ ಆದೇಶದ ಮುಂದೆ ನಾವೆಲ್ಲ ನಿಸ್ಸಹಾಯಕರು – ವಿಷ್ಣು ಸಮಾಧಿ ತೆರವಿಗೆ ನಟಿ ಸುಮಲತಾ ಬೇಸರ
Bengaluru City Cinema Districts Karnataka Latest Main Post Sandalwood
CHOWKIDAR
ಚೌಕಿದಾರ್ ಜಾಲಿ ಹಾಡಿಗೆ ಕುಣಿದ ಪೃಥ್ವಿ ಅಂಬಾರ್, ಸಾಥ್‌ ಕೊಟ್ಟ ಸಾಯಿ ಕುಮಾರ್
Cinema Latest Sandalwood Top Stories
Siri Ravikumar
`ಶೋಧ’ಕ್ಕಾಗಿ ಪವನ್ ಕುಮಾರ್ ಜೊತೆ ಒಂದಾದ ಸಿರಿ ರವಿಕುಮಾರ್
Cinema Latest
Sudeep
ವಿಷ್ಣು ಸ್ಮಾರಕಕ್ಕಾಗಿ ಕೋರ್ಟಿಗೆ ಬೇಕಾದ್ರೂ ಹೋಗ್ತೀನಿ, ಹಣಕಾಸು ಕೊಡಲು ರೆಡಿ ಇದ್ದೀನಿ: ಕಿಚ್ಚ ಸುದೀಪ್‌
Bengaluru City Cinema Latest Main Post Sandalwood
Anirudh
ವಿಷ್ಣು ಸಮಾಧಿ ನೆಲಸಮ; ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ – ಫ್ಯಾನ್ಸ್‌ಗೆ ಅನಿರುದ್ಧ್ ಮನವಿ
Bengaluru City Cinema Districts Karnataka Latest Sandalwood Top Stories

You Might Also Like

Madikeri
Districts

ಪ್ಲಾಸ್ಟಿಕ್ ಶೇಡ್‌ನಲ್ಲಿ ಬದುಕು ನಡೆಸುತ್ತಿದ್ದ ವೃದ್ಧೆಗೆ ʻಸೂರಿನ ಭಾಗ್ಯʼ ಕಲ್ಪಿಸಿದ ದಾನಿ

Public TV
By Public TV
14 minutes ago
Donald Trump threatens Russia with sanctions tariffs if Vladimir Putin doesnt end Ukraine war 1
Latest

ʻಇದು ಯುದ್ಧದ ಯುಗವಲ್ಲʼ – ಮೋದಿ ಸಂದೇಶ ಉಲ್ಲೇಖಿಸಿ ಅಮೆರಿಕ-ರಷ್ಯಾ ಮಾತುಕತೆಗೆ ಭಾರತ ಬೆಂಬಲ

Public TV
By Public TV
27 minutes ago
01 2
Big Bulletin

ಬಿಗ್‌ ಬುಲೆಟಿನ್‌ 09 August 2025 ಭಾಗ-1

Public TV
By Public TV
48 minutes ago
1111
Big Bulletin

ಬಿಗ್‌ ಬುಲೆಟಿನ್‌ 09 August 2025 ಭಾಗ-2

Public TV
By Public TV
50 minutes ago
Tumkur
Crime

ತುಮಕೂರು | ಮಹಿಳೆ ಆತ್ಮಹತ್ಯೆ – ವರದಕ್ಷಿಣೆ ಕಿರುಕುಳ ಆರೋಪ

Public TV
By Public TV
53 minutes ago
Sharad Pawar
Latest

ಮಹಾರಾಷ್ಟ್ರ ಚುನಾವಣೆಯಲ್ಲಿ 160 ಸೀಟ್‌ ಗೆಲ್ಲಿಸಿಕೊಡುವುದಾಗಿ ಆಫರ್‌ ಬಂದಿತ್ತು – ಶರದ್ ಪವಾರ್ ಬಾಂಬ್‌

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?