Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಬೂಲ್ ಗುರುದ್ವಾರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಕಾಸರಗೋಡಿನ ಸೂಸೈಡ್ ಬಾಂಬರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಕಾಬೂಲ್ ಗುರುದ್ವಾರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಕಾಸರಗೋಡಿನ ಸೂಸೈಡ್ ಬಾಂಬರ್

Latest

ಕಾಬೂಲ್ ಗುರುದ್ವಾರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಕಾಸರಗೋಡಿನ ಸೂಸೈಡ್ ಬಾಂಬರ್

Public TV
Last updated: March 27, 2020 11:23 pm
Public TV
Share
2 Min Read
terrorist
SHARE

– ಕಾಸರಗೋಡಿನಲ್ಲಿ ಅಂಗಡಿ ಇಟ್ಟುಕೊಂಡಿದ್ದ ಉಗ್ರ

ನವದೆಹಲಿ: ಇತ್ತೀಚೆಗೆ ಕಾಬೂಲ್‍ನಲ್ಲಿ ನಡೆದ ಸಿಖ್‍ರ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ನಾಲ್ಕು ಜನ ಭಯೋತ್ಪಾದಕರಲ್ಲಿ ಓರ್ವ ಕೇರಳದ ಕಾಸರಗೋಡಿನ ಯುವಕನಿದ್ದ ಎಂದು ವರದಿಯಾಗಿದೆ.

ಮಾರ್ಚ್ 25ರಂದು ಕಾಬೂಲ್‍ನ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಸಿಖ್‍ರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ಮಾಡಲಾಗಿತ್ತು. ಈ ದಾಳಿಯಲ್ಲಿ ನಾಲ್ಕು ಜನ ಸೂಸೈಡ್ ಬಾಂಬರ್ ಗಳು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿತ್ತು. ಈಗ ಇದರಲ್ಲಿ ಓರ್ವ ಭಾರತದ ಮೂಲದವನಾಗಿದ್ದು, ಕೇರಳದಿಂದ 4 ವರ್ಷದ ಹಿಂದೆ 14 ಜನರೊಂದಿಗೆ ಕಾಣೆಯಾಗಿದ್ದನು.

Kabul Gurdwara 1 1

ಕಳೆದ ಬುಧವಾರ ಕಾಬೂಲ್‍ನ ಸಿಖ್ ದೇಗುಲದ ಮೇಲೆ ದಾಳಿ ನಡೆಸಿದ ನಾಲ್ಕು ಸದಸ್ಯರ ತಂಡದ ಭಾಗವಾಗಿದ್ದ ಆತ್ಮಾಹುತಿ ದಾಳಿಕೋರ ಅಬು ಖಾಲಿದ್ ಅಲ್-ಹಿಂದಿ ಫೋಟೋವನ್ನು ಇಸ್ಲಾಮಿಕ್ ಸ್ಟೇಟ್ ಶುಕ್ರವಾರ ಪ್ರಕಟಿಸಿದೆ. ಉನ್ನತ ಮೂಲಗಳ ಪ್ರಕಾರ ಈತ ಕೇರಳದ ಕಾಸರಗೋಡಿನ ಪಾಡ್ನೆ ಪ್ರದೇಶದಲ್ಲಿ ಅಂಗಡಿ ಇಟ್ಟುಕೊಂಡಿದ್ದ ಮೊಹಮ್ಮದ್ ಸಾಜಿದ್ ಕುಥಿರುಮಾಲ್ ಎಂದು ತಿಳಿದು ಬಂದಿದೆ. 2016ರ ಎನ್‍ಐಎ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು ಮತ್ತು ಆತನ ವಿರುದ್ಧ ಇಂಟರ್‍ಪೋಲ್ ರೆಡ್ ನೋಟಿಸ್ ಜಾರಿಗೊಳಿಸಿತ್ತು.

terrorist

2016ರ ಜುಲೈನಲ್ಲಿ ಕೇರಳದ ಕಾಸರಗೋಡಿನ ಪೋಷಕರು, 30 ವರ್ಷದ ತಮ್ಮ ಮಗ ಅಬ್ದುಲ್ ರಶೀದ್ ಮತ್ತು ಆತನ ಪತ್ನಿ ಆಯಿಷಾ (ಸೋನಿಯಾ ಸೆಬಾಸ್ಟಿಯನ್) ಮತ್ತು ಮಗುವಿನೊಂದಿಗೆ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಇವರ ಜೊತೆ 14 ಜನರೊಂದಿಗೆ ಮೊಹಮ್ಮದ್ ಸಾಜಿದ್ ಕೂಡ ಕಾಣೆಯಾಗಿದ್ದಾನೆ ಎಂದು ಅದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೇ ವೇಳೆ ಕೇರಳದ ಸುತ್ತಲಿನ ಪ್ರದೇಶದ 14 ಯುವಕರು ಕಾಣೆಯಾಗಿದ್ದರು.

ISIS 1

ಇದಾದ ನಂತರ ಮೊಹಮ್ಮದ್ ಸಾಜಿದ್, ಅಬ್ದುಲ್ ರಶೀದ್ ಎಂಬಾತನ ಸಹಾಯ ಪಡೆದು, ನಿಷೇಧಿತ ಇಸ್ಲಾಮಿಸ್ಟ್ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಐಸಿಸ್)ಗೆ ತನ್ನ 14 ಜನ ಸ್ನೇಹಿತರೊಂದಿಗೆ ಸೇರಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ತಂದೆ ಮತ್ತು ಸಹೋದರನ ಜೊತೆ ಮಲೇಷ್ಯಾಗೆ ಹೋಗಿದ್ದ ಈತ ಅಲ್ಲಿ ಉಗ್ರರ ಜೊತೆ ನಂಟು ಹೊಂದಿದ್ದ ಎಂದು ಹೇಳಲಾಗಿತ್ತು.

Kabul Gurdwara

ಬಿಸಿನೆಸ್ ವಿಚಾರವಾಗಿ ಮಲೇಷ್ಯಾಗೆ ತಂದೆ ಮತ್ತು ಸಹೋದರನ ಜೊತೆ ಹೋಗಿದ್ದ ಸಾಜಿದ್ ಮತ್ತೆ ಅವರ ಜೊತೆ ವಾಪಸ್ ಬಂದಿರಲಿಲ್ಲ. ಆತ ಅಲ್ಲಿಂದ ಸೌದಿ ಅರೆಬೀಯಾಗೆ ಹೋಗಿದ್ದ. ಸೌದಿಯಿಂದ ದುಬೈಗೆ ಹೋಗಿ ಅಲ್ಲಿ ಪಾಕಿಸ್ತಾನದ ಐಸಿಸ್ ಏಜೆಂಟ್ ಜೊತೆ ಸಂಪರ್ಕ ಹೊಂದಿದ್ದ. ನಂತರ ಭಾರತಕ್ಕೆ ಬಂದಿದ್ದ ಆತ ತನ್ನೊಂದಿಗೆ 14 ಜನ ಕರೆದುಕೊಂಡು ಅಬ್ದುಲ್ ರಶೀದ್ ಸಹಾಯ ಪಡೆದು ಅಪ್ಘಾನಿಸ್ತಾಕ್ಕೆ ಹೋಗಿ ಉಗ್ರ ಸಂಘಟನೆ ಸೇರಿಕೊಂಡಿದ್ದ.

ಭಾರತದಿಂದ ಪರಾರಿಯಾದ ನಂತರ ಸುಮಾರು 6 ತಿಂಗಳವರೆಗೆ ಸಾಜಿದ್ ಅವರು ತಾಯಿ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದ. ಆದರೆ ಕಳೆದ ಕೆಲ ತಿಂಗಳಿನಿಂದ ಸಾಜಿದ್ ತನ್ನ ತಾಯಿ ಜೊತೆ ಸಂಪರ್ಕ ಕಳೆದುಕೊಂಡಿದ್ದ. ಇದಾದ ಕೆಲವೇ ದಿನಗಳಲ್ಲಿ ಸಾಜಿದ್ ಕಾಬೂಲ್‍ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಪ್ರಮುಖ ಸೂಸೈಡ್ ಬಾಂಬರ್ ಆಗಿದ್ದ ಎಂದು ಸಾಜಿದ್ ಅವನ ಫೋಟೋ ಐಸಿಸ್ ಬಿಡುಗಡೆ ಮಾಡಿದೆ.

ISIS

ಕಳೆದ ಮಾರ್ಚ್ 25 ರಂದು ಕಾಬೂಲ್‍ನ ಶೋರ್ ಬಜಾರ್ ಪ್ರದೇಶದಲ್ಲಿನ ಗುರುದ್ವಾರದಲ್ಲಿ 150 ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಆದರ ಭಯೋತ್ಪಾದಕರು ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದು ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ದಾಳಿಯ ಸಮಯದಲ್ಲಿ ಗುರುದ್ವಾರಕ್ಕೆ ಭೇಟಿ ನೀಡಿದ ಭಾರತೀಯ ರಾಜತಾಂತ್ರಿಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿತ್ತು ಎಂದು ವರದಿಗಳು ತಿಳಿಸಿವೆ.

TAGGED:GurudwaraISISKabulkasargodNew DelhiPublic TVterroristterrorist attackಉಗ್ರರ ದಾಳಿಐಸಿಸ್ಕಸರಗೋಡುಕಾಬೂಲ್ಗುರುದ್ವಾರನವದೆಹಲಿಪಬ್ಲಿಕ್ ಟಿವಿಭಯೋತ್ಪಾದಕ
Share This Article
Facebook Whatsapp Whatsapp Telegram

Cinema news

gilli fan tattoo bigg boss
BBK 12: ಬಿಗ್‌ಬಾಸ್ ಗಿಲ್ಲಿಯ ಅಭಿಮಾನಿ ಕೈ ಮೇಲೆ ಟ್ಯಾಟೂ!
Cinema Latest Top Stories TV Shows
rakshitha rashika bigg boss
ನಿಂಗೆ ಗಿಲ್ಲಿ ಬೇಕು: ರಕ್ಷಿತಾ ವಿರುದ್ಧ ಗುಡುಗಿ ಕಳಪೆ ಕೊಟ್ಟ ರಾಶಿಕಾ
Cinema Latest Top Stories TV Shows
Samantha
`ಮಾ ಇಂಟಿ ಬಂಗಾರಂ’.. ಸಮಂತಾ ರಗಡ್ ಅವತಾರ..!
Cinema Latest South cinema Top Stories
Bigg Boss Ashwini Gowda and dhruvanth
ಇನ್ನೆರಡೇ ದಿನದಲ್ಲಿ ಮನೆಯಿಂದ ಇಬ್ರು ಹೋಗ್ತಾರೆ ಎಂದಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ಧ್ರುವಂತ್
Cinema Latest Top Stories TV Shows

You Might Also Like

Yeshwanthpur Flyover Mini Tempo Accident
Bengaluru City

ಫ್ಲೈಓವರ್ ಡಿವೈಡರ್‌ಗೆ ಗುದ್ದಿದ ಮಿನಿ ಟೆಂಪೋ – ತಪ್ಪಿದ ಅನಾಹುತ

Public TV
By Public TV
17 minutes ago
HDK 3
Bengaluru City

ರಾಜ್ಯ ರಾಜಕಾರಣಕ್ಕೆ ಹೆಚ್‌ಡಿಕೆ ವಾಪಸ್? – ಅಭಿಮಾನಿಗಳಿಂದ ʻDaddy is homeʼ ಎಐ ವಿಡಿಯೋ ರಿಲೀಸ್‌!

Public TV
By Public TV
20 minutes ago
Hubballi BJP Worker Undressed Case CID
Dharwad

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ – ಪ್ರಕರಣ ಸಿಐಡಿಗೆ ವಹಿಸಲು ಸರ್ಕಾರ ಚಿಂತನೆ

Public TV
By Public TV
50 minutes ago
Chamarajanagar 2
Chamarajanagar

ಚಾಮರಾಜನಗರ | 7 ಗ್ರಾಮಗಳ ಜನರ ನಿದ್ದೆಗೆಡಿಸಿದ್ದ ತಾಯಿ ಹುಲಿ ಸೆರೆ!

Public TV
By Public TV
50 minutes ago
Chikkaballapura 2 2
Chikkaballapur

ಕಾಡುಹಂದಿಗೆ ಹಾಕಿದ್ದ ಬಲೆಗೆ ಸಿಲುಕಿ ಅಸ್ವಸ್ಥ – ಒದ್ದಾಡಿ ಪ್ರಾಣ ಬಿಟ್ಟ ಚಿರತೆ!

Public TV
By Public TV
55 minutes ago
Mysuru
Crime

ಮಗಳ ಸಾವಿಗೆ ಪೋಷಕರೆ ಕಾರಣನಾ? ಅಪ್ರಾಪ್ತೆ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್!

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?