ರಾಯಚೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನ ತಡೆಯಲು ಇಡೀ ರಾಜ್ಯವೇ ಲಾಕ್‍ಡೌನ್ ಆಗಿದ್ದರೂ ರಾಯಚೂರಿನಲ್ಲಿ ಮಾತ್ರ ಜನ ಯಾವುದಕ್ಕೂ ಕೇರ್ ಮಾಡುತ್ತಿಲ್ಲ.
ನಗರದ ತರಕಾರಿ ಮಾರುಕಟ್ಟೆಯಲ್ಲಂತೂ ಎಂದಿನಂತೆ ಜನ ಜಂಗುಳಿ ನಡುವೆಯೇ ವ್ಯಾಪಾರ ನಡೆದಿದೆ. ಜನ ತಮಗೇನು ಸಂಬಂಧವೇ ಇಲ್ಲ ಅನ್ನೋ ಹಾಗೇ ಗುಂಪುಗುಂಪಾಗಿ ಓಡಾಡಿಕೊಂಡಿದ್ದಾರೆ. ಇಲ್ಲಿನ ಎಷ್ಟೋ ವ್ಯಾಪಾರಿಗಳಿಗೆ ಕೊರೊನಾ ವೈರಸ್ ಬಗ್ಗೆ ಗೊತ್ತಿಲ್ಲ. ಹೊಟ್ಟೆಪಾಡಿಗೆ ವ್ಯಾಪಾರ ಮಾಡುತ್ತಿದ್ದೇವೆ ಅಂತಿದ್ದಾರೆ. ಗ್ರಾಹಕರು ಸಹ ಯಾವುದೇ ಮುನ್ನೆಚ್ಚರಿಕೆ ಕ್ರಮಗಳೂ ಇಲ್ಲದೆ ಗುಂಪು ಗುಂಪಾಗಿ ಬಂದು ತರಕಾರಿ ಖರೀದಿಸುತ್ತಿದ್ದಾರೆ.
ಜನರನ್ನ ಮನೆಯಲ್ಲೇ ಇರಿ ಅಂತ ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ನಗರದ ಪ್ರಮುಖ ರಸ್ತೆ ವೃತ್ತಗಳಲ್ಲಿ ಜನ ಓಡಾಡುತ್ತಲೇ ಇದ್ದಾರೆ. ನಗರದ ಗಡಿಗಳಲ್ಲಿ ಬ್ಯಾರಿಕೇಡ್ ಮೂಲಕ ಗ್ರಾಮೀಣ ಭಾಗದಿಂದ ಬರುವ ಜನರನ್ನ ತಡೆಯಲಾಗುತ್ತಿದೆ. ಆದರೂ ಜನರ ಓಡಾಟಕ್ಕೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ. ಆಂಧ್ರಪ್ರದೇಶ, ತೆಲಂಗಾಣ ಗಡಿಯಲ್ಲಿ ಚೆಕ್ ಪೋಸ್ಟ್‌ಗಳನ್ನ ತೆರೆದಿದ್ದು, ಅಂತರರಾಜ್ಯ ಸಾರಿಗೆಯನ್ನ ಸಂಪೂರ್ಣ ಬಂದ್ ಮಾಡಲಾಗಿದೆ.