ಕೆಜಿಎಫ್ ‘ನರಾಚಿ’ ಸೆಟ್ ನಿರ್ಮಾಣ ಕಥೆ ಬಿಚ್ಚಿಟ್ಟ ಕಲಾ ನಿರ್ದೇಶಕ

Public TV
2 Min Read
KGF

– ನಿರ್ಮಾಣಕ್ಕಾಗಿ ಮೂರು ತಿಂಗಳ ಕಾಲ 350 ಮಂದಿ ಕೆಲಸ
– ಸೆಟ್ ನಿರ್ಮಾಣದ ವೇಳೆ ಮಳೆ ಬಂದಿತ್ತು
– ಎದುರಾದ ಕಷ್ಟವನ್ನು ನೆನಪಿಸಿಕೊಂಡ ಶಿವಕುಮಾರ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷತ ‘ಕೆಜಿಎಫ್-2’ ಚಿತ್ರ ಅಕ್ಟೋಬರ್ 23ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಈ ಚಿತ್ರದ ಸೆಟ್ ನಿರ್ಮಾಣಕ್ಕೆ ಎಷ್ಟು ಸಂಕಷ್ಟ ಎದುರಾಯಿತು ಎಂಬುದನ್ನು ಕಲಾ ನಿರ್ದೇಶಕ ಶಿವಕುಮಾರ್ ವಿವರಿಸಿದ್ದಾರೆ.

ಪ್ರತಿಕೆಯೊಂದಕ್ಕೆ ಸಂದರ್ಶನ ನೀಡಿದ ಶಿವಕುಮಾರ್, ಕೆಜಿಎಫ್ ಚಾಪ್ಟರ್-1 ಚಿತ್ರಕ್ಕೆ ಸೆಟ್ ನಿರ್ಮಿಸುವುದು ದೊಡ್ಡ ಸವಾಲಾಗಿತ್ತು. ಏಕೆಂದರೆ ನಾವು ನಿರ್ಮಿಸಿದ ಸೆಟ್ ನಮ್ಮ ಕಣ್ಣ ಮುಂದೆಯೇ ಮಳೆಯಿಂದ ಸಂಪೂರ್ಣವಾಗಿ ಕೊಚ್ಚಿ ಹೋಗಿತ್ತು. ಬಳಿಕ ಕೆಜಿಎಫ್-2ಗೆ ಸೆಟ್ ನಿರ್ಮಿಸುತ್ತಿದ್ದೇವು. ಈ ವೇಳೆಯೂ ಮಳೆ ಬರುತ್ತಿತ್ತು. ಕೆಜಿಎಫ್ ಚಾಪ್ಟರ್-1 ಚಿತ್ರದ ಸೆಟ್ ನಿರ್ಮಾಣದ ವೇಳೆ ಮಳೆ ಬಂದಿದ್ದರಿಂದ ಚಾಪ್ಟರ್-2ಗೂ ಬರಬಹುದು ಎಂದು ನಾವು ನಿರೀಕ್ಷೆ ಮಾಡಿದ್ದೆವು. ಹಾಗಾಗಿ ಮೊದಲೇ ಎಲ್ಲ ತಯಾರಿ ಮಾಡಿಕೊಂಡಿದ್ದೆವು. ಇದರಿಂದ ನಮಗೆ ಹೆಚ್ಚು ತೊಂದರೆ ಆಗಲಿಲ್ಲ ಎಂದರು.

kgf set kolar 5

ಸೆಟ್ ನಿರ್ಮಾಣಕ್ಕಾಗಿ ಬಾಲಿವುಡ್ ಹಾಗೂ ಹಾಲಿವುಡ್‍ನಲ್ಲಿ ಹೇಗೆ ಕೋಟ್ಯಂತರ ರೂ. ಖರ್ಚು ಮಾಡುತ್ತಾರೋ, ಹಾಗೆಯೇ ಕೆಜಿಎಫ್ ಚಿತ್ರಕ್ಕೂ ಖರ್ಚು ಮಾಡಿ ಸೆಟ್ ಹಾಕಲಾಗಿದೆ. ತಂತ್ರಜ್ಞರು ನಮ್ಮ ಕನ್ನಡ ಚಿತ್ರರಂಗವನ್ನು ಬೇರೆ ಲೆವೆಲ್‍ಗೆ ತೆಗೆದುಕೊಂಡು ಹೋಗಲು ಕಷ್ಟಪಟ್ಟು ದುಡಿದಿದ್ದಾರೆ. ಚಿತ್ರ ನೋಡಿದಾಗ ಸೆಟ್‍ನ ಖರ್ಚಿನ ಬಗ್ಗೆ ಎಲ್ಲರಿಗೂ ಅರಿವಾಗುತ್ತದೆ ಎಂದು ಶಿವಕುಮಾರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

kgf art director

ಕೆಜಿಎಫ್ ಚಿತ್ರದಲ್ಲಿ `ನರಾಚಿ ಸಾಮ್ರಾಜ್ಯ’ವನ್ನು ನಿರ್ಮಿಸಿದ್ದೆವು. ಈಗ ಕೆಜಿಎಫ್-2ನಲ್ಲೂ ನರಾಚಿಯ ಸೆಟ್ ನಿರ್ಮಿಸಿದ್ದೇವೆ. ಆದರೆ ಈ ಸೆಟ್ ನೆಕ್ಸ್ಟ್ ಲೆವೆಲ್‍ನಲ್ಲಿದೆ. ಮೂರು ತಿಂಗಳ ಕಾಲ 350 ಮಂದಿ ನಿರಂತರ ಕೆಲಸ ಮಾಡಿ ಕೆಜಿಎಫ್-2 ಸೆಟ್ ನಿರ್ಮಿಸಿದ್ದಾರೆ. ಕೆಜಿಎಫ್ ಚಾಪ್ಟರ್-1 ಸೆಟ್ ನಿರ್ಮಿಸಲು 250 ಜನ ಕೆಲಸ ಮಾಡಿದ್ದರು. ಆಗ ಹೆಚ್ಚು ಮಳೆ ಬಂದ ಕಾರಣ ಹೆಚ್ಚಿನ ಸಮಯ ಹಿಡಿದಿತ್ತು ಎಂದು ಶಿವಕುಮಾರ್ ಕೆಜಿಎಫ್-1 ಸೆಟ್ ನಿರ್ಮಾಣದ ವೇಳೆ ಎದುರಾದ ಕಷ್ಟಗಳ ಬಗ್ಗೆ ತಿಳಿಸಿದ್ದಾರೆ.

kgf set kolar 2

ಬೆಂಗಳೂರಿನ ಮಿನರ್ವ ಮಿಲ್, ಕೋಲಾರದ ಕೆಜಿಎಫ್, ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸಿಟಿ, ಮೈಸೂರಿನಲ್ಲಿ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ. ಅಂತಹ ಸೆಟ್‍ನಲ್ಲಿ ಸಣ್ಣ ಕುರ್ಚಿ ತಂದರೂ ಅದು ನೆನಪಿನಲ್ಲಿರುತ್ತೆ. ಸದ್ಯ ಕೆಜಿಎಫ್-2 ಚಿತ್ರದ ಇಡೀ ಚಿತ್ರೀಕರಣ ಸೆಟ್‍ನಲ್ಲಿಯೇ ನಡೆದಿದೆ ಎಂದು ಶಿವಕುಮಾರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *