ಹಾಲಿವುಡ್ ನಟನಿಗಾಗಿ ‘ಆರ್‌ಆರ್‌ಆರ್’ ಚಿತ್ರ ಬಿಡುಗಡೆಯನ್ನು ಮುಂದೂಡಿದ ರಾಜಮೌಳಿ

Public TV
1 Min Read
RRR 2

ಹೈದರಾಬಾದ್: ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರ ಬಿಡುಗಡೆಯನ್ನು ಹಾಲಿವುಡ್ ನಟನಿಗಾಗಿ ಮುಂದೂಡಲಾಗಿದೆ.

2018ರ ನವೆಂಬರಿನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಈ ವರ್ಷದ ಜುಲೈ ತಿಂಗಳ ಕೊನೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಆದರೆ ಇತ್ತೀಚೆಗಷ್ಟೇ ಚಿತ್ರತಂಡ ಈ ಚಿತ್ರವನ್ನು ಮುಂದಿನ ವರ್ಷ ಜನವರಿ 8ಕ್ಕೆ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿತ್ತು. ಆದರೆ ಆಕೆ ಎಂಬುದರ ಕಾರಣವನ್ನು ಹೇಳಿರಲಿಲ್ಲ. ಆದರೆ ಚಿತ್ರ ಮುಂದೂಡಿದ್ದೇಕೆ ಎಂಬುದು ಈಗ ರಿವೀಲ್ ಆಗಿದೆ.

ಆರ್‌ಆರ್‌ಆರ್ ಚಿತ್ರದಲ್ಲಿ ಜೂ. ಎನ್‍ಟಿಆರ್ ಹಾಗೂ ರಾಮ್‍ಚರಣ್ ಅವರ ಜೊತೆ ಹಾಲಿವುಡ್ ನಟ ಕೂಡ ನಟಿಸುತ್ತಿದ್ದಾರೆ. ಚಿತ್ರೀಕರಣದ ವೇಳೆ ಹಾಲಿವುಡ್ ನಟ ತೀವ್ರವಾಗಿ ಗಾಯಗೊಂಡಿದ್ದು, ದೀರ್ಘ ಸಮಯದ ವಿಶ್ರಾಂತಿಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಾಲಿವುಡ್ ನಟ, ರಾಮ್‍ಚರಣ್ ಅವರ ಜೊತೆಗೆ ಚಿತ್ರದಲ್ಲಿ ಹಲವು ದೃಶ್ಯಗಳಲ್ಲಿ ನಟಿಸಿದ್ದಾರೆ. ಆದರೆ ಇವರಿಬ್ಬರ ಶೂಟಿಂಗ್ ಇನ್ನೂ ಪೂರ್ಣಗೊಂಡಿಲ್ಲ. ನಟ ವಿಶ್ರಾಂತಿ ಪಡೆದು ಬಂದ ಬಳಿಕವಷ್ಟೇ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧಾರ ಮಾಡಿದೆ.

RRR 1

ಆರ್‌ಆರ್‌ಆರ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, 1920ರ ಕಾಲಘಟ್ಟದಲ್ಲಿ ನಡೆಯುವ ಕತೆ ಇದಾಗಿದೆ. ಅದಕ್ಕೆ ತಕ್ಕಂತೆ ಅದ್ಧೂರಿಯಾಗಿ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣ ನಡೆಸುತ್ತಿದ್ದಾರೆ. ಈ ಚಿತ್ರ ಹೈದರಾಬಾದ್‍ನ ನಿಜಾಮರ ಹಾಗೂ ಬ್ರಿಟಿಷರ ಆಡಳಿತದ ವಿರುದ್ಧ ಕೋಮರಾಮ್ ಭೀಮ ಮತ್ತು ಅಲ್ಲುರಿ ಸೀತಾರಾಮ ರಾಜು ಹೋರಾಟ ನಡೆಸುವ ಕತೆ ಆಗಿದ್ದು, ಜೂ. ಎನ್‍ಟಿಆರ್ ಕೋಮರಾಮ್ ಭೀಮನಾಗಿ ಕಾಣಿಸಿಕೊಂಡರೆ, ರಾಮ್ ಚರಣ್ ಸೀತಾರಾಮ ರಾಜನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

RRR

300 ಕೋಟಿ ಬಜೆಟ್‍ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ಕಲಾವಿದರಾದ ಅಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಹತ್ತು ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಕನ್ನಡದಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಡಿವಿವಿ ದಾನಯ್ಯ ಅವರು ಈ ಚಿತ್ರವನ್ನು ಡಿವಿವಿ ಎಂಟರ್‍ಟೈನ್‍ಮೆಂಟ್ಸ್‍ನಡಿ ನಿರ್ಮಾಣ ಮಾಡುತ್ತಿದ್ದು, ಎಂ.ಎಂ ಕೀರ್ವಾಣಿ ಸಂಗೀತ ನೀಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *