ಆಪರೇಷನ್ ಕಮಲವನ್ನ ನಿಲ್ಲಿಸಿದ್ದೇವೆ, ಆದ್ರೆ ಬಿಜೆಪಿ ಮನೆ ಬಾಗಿಲು ಓಪನ್ ಇದೆ: ಕಟೀಲ್

Public TV
1 Min Read
YGR KATEEL

ಯಾದಗಿರಿ: ಆಪರೇಷನ್ ಕಮಲವನ್ನ ನಾವು ನಿಲ್ಲಿಸಿದ್ದೇವೆ. ಆದರೆ ಬಿಜೆಪಿ ಮನೆ ಬಾಗಿಲು ಓಪನ್ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ನಗರದ ಸರ್ಕಿಟ್ ಹೌಸ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಟಿ ದೇವೇಗೌಡ ಬಿಜೆಪಿ ಸೇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತವಿದೆ. ಯಾರೇ ರಾಜೀನಾಮೆ ಕೊಟ್ಟು ಬಂದರು ಸ್ವಾಗತಿಸುತ್ತೇವೆ. ಆಪರೇಷನ್ ಕಮಲವನ್ನ ನಾವು ನಿಲ್ಲಿಸಿದ್ದೇವೆ. ಆದರೆ ಬಿಜೆಪಿ ಮನೆ ಬಾಗಿಲು ಓಪನ್ ಇದೆ ಎಂದರು.

HDD JDS 768x454 1

ರಾಜ್ಯ ಬಿಜೆಪಿ ಸರ್ಕಾರ ಜನಾದೇಶದ ಅಲ್ಲದ ಸರ್ಕಾರ ಎನ್ನುವ ಸಿದ್ದು ಹೇಳಿಕೆಗೆ ಟಾಂಗ್ ನೀಡಿದ ಕಟೀಲ್, ಕಾಂಗ್ರೆಸ್ ಹಾಗೂ ಜೆಡಿಎಸ್‍ಗಿಂತ ಹೆಚ್ಚು ಜನಾದೇಶ ಬಿಜೆಪಿಗಿದೆ ಎಂದು ಕುಟುಕಿದರು. ಇದೇ ವೇಳೆಯಲ್ಲಿ ಕುಮಾರಸ್ವಾಮಿ, ಉಮೇಶ್ ಕತ್ತಿ ಭೇಟಿ ವಿಚಾರ ಎಲ್ಲ ಉಹಾಪೋಹಗಳು, ಸರ್ಕಾರ ಮೂರು ವರ್ಷ ಸುಭದ್ರವಾಗಿದೆ ಎಂದರು.

ದೇವೇಗೌಡ ಚಾಣಾಕ್ಷ ರಾಜಕಾರಣಿ, ಅವರು ದಿನಕ್ಕೊಂದು ಮಾತಾಡುತ್ತಾರೆ. ಅವರ ಶಾಸಕರು ಕಾಲು ಹೊರಗಿಟ್ಟರೆ, ಪಕ್ಷ ಒಡೆಯುತ್ತೆ ಎನ್ನುತ್ತಾರೆ. ಪಾರ್ಟಿಯಲ್ಲಿ ಶಾಸಕರನ್ನ ಹಿಡಿದುಕೊಂಡಿದ್ರೆ ಸರ್ಕಾರ ಉಳಿಯುತ್ತೆ ಎಂದು ನಳಿನ್ ಕುಮಾರ್ ವ್ಯಂಗ್ಯವಾಡಿದರು.

Share This Article
Leave a Comment

Leave a Reply

Your email address will not be published. Required fields are marked *