– ಟೆಸ್ಟ್ ಡ್ರೈವ್‍ಗೆ ಬೈಕ್ ಪಡೆದು ನಾಪತ್ತೆಯಾಗಿದ್ದ ಆರೋಪಿ
ಹಾಸನ: ಪ್ರೇಯಸಿಯನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಶೋಕಿ ಮಾಡಲು ದುಬಾರಿ ಬೈಕ್ ಕದ್ದ ಯುವಕನನ್ನು ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೂಳದ ಪೊಲೀಸರು ಬಂಧಿಸಿದ್ದಾರೆ.
ಆಲೂರು ತಾಲೂಕಿನ ಬಂಡಿತಿಮ್ಮನಹಳ್ಳಿ ಗ್ರಾಮದ ನಿವಾಸಿ ಪ್ರಮೋದ್ (19) ಬಂಧಿತ ಆರೋಪಿ. ಪ್ರಮೋದ್ ಶ್ರವಣಬೆಳಗೊಳದ ಪುನೀತ್ ಎಂಬವರ ಬೈಕ್ ಅನ್ನು ಫೆಬ್ರವರಿ 9ರಂದು ಎಗರಿಸಿಕೊಂಡು ಹೋಗಿದ್ದ. ಆರೋಪಿಗೆ ಬಲೆ ಬೀಸಿದ್ದ ಪೊಲೀಸರು 9 ದಿನಗಳ ಬಳಿಕ ಬಂಧಿಸಿದ್ದಾರೆ.
ಏನಿದು ಪ್ರಕರಣ?:
ಶ್ರವಣಬೆಳಗೊಳದ ಪುನೀತ್ ಬೈಕನ್ನು ಮಾರಾಟಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ್ದರು. ಈ ಜಾಹೀರಾತನ್ನು ಒಎಲ್‍ಎಕ್ಸ್ ನಲ್ಲಿ ನೋಡಿದ್ದ ಪ್ರಮೋದ್ ಕೂಡಲೇ ಪುನೀತ್ ಅವರಿಗೆ ಫೋನ್ ಮಾಡಿ ಮಾತನಾಡಿದ್ದ. ನಂತರ ಪರಿಚಯ ಮಾಡಿಕೊಂಡು ಬೈಕನ್ನು ಖರೀದಿಸುವುದಾಗಿ ಹೇಳಿದ್ದ. ಶ್ರವಣಬೆಳಗೊಳ ಬಸ್ ನಿಲ್ದಾಣದ ಹತ್ತಿರ ಫೆಬ್ರವರಿ 9ರಂದು ಸಂಜೆ ಬಂದಿದ್ದ ಪ್ರಮೋದ್, ಪುನೀತ್ ಬಳಿಯಿದ್ದ ಬೈಕನ್ನು ಟೆಸ್ಟ್ ಡ್ರೈವ್ ಮಾಡುತ್ತೇನೆಂದು ನಂಬಿಸಿ ತೆಗೆದುಕೊಂಡು ಪರಾರಿಯಾಗಿದ್ದ. ನಂತರ ಫೋನ್ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.
ಈ ಸಂಬಂಧ ಪುನೀತ್ ಶ್ರವಣಬೆಳಗೊಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂಬಿಕೆ ದ್ರೋಹ ಪ್ರಕರಣದ ಅಡಿ ಕೇಸ್ ದಾಖಲಿಸಿಕೊಂಡ ಪೊಲೀಸರು, ಆರೋಪಿಗೆ ಬಲೆ ಬೀಸಿದ್ದರು. ಈ ನಿಟ್ಟಿನಲ್ಲಿ ಎಸ್‍ಪಿ ಶ್ರೀನಿವಾಸಗೌಡ ಹಾಗೂ ಎಎಸ್‍ಪಿ ನಂದಿನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತನಿಖೆ ಚುರುಕುಗೊಳಿಸಿದ ತಂಡವು ಆರೋಪಿ ಪ್ರಮೋದ್‍ನನ್ನು ಇಂದು ಹಾಸನ ನಗರದ ರೈಲ್ವೆ ನಿಲ್ದಾಣದ ಬಳಿ ಬಂಧಿಸಿ, ಬೈಕ್ ವಶಕ್ಕೆ ಪಡೆದಿದ್ದಾರೆ.