ಸಾರ್ವಜನಿಕವಾಗಿ ಫಸ್ಟ್ ಟೈಂ ನೋವನ್ನು ತೋಡಿಕೊಂಡ ಗಾಯಕ ರಘು ದೀಕ್ಷಿತ್

Public TV
2 Min Read
Raghu

ಬೆಂಗಳೂರು: ಗಾಯಕ ಮತ್ತು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಾರ್ವಜನಿಕವಾಗಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಹೀಗೆ ಸಾರ್ವಜನಿಕವಾಗಿ ರಘು ದೀಕ್ಷಿತ್ ತಮ್ಮ ನೋವನ್ನು ತೋಡಿಕೊಳ್ಳಲು ಕಾರಣ, ಅವರು ಇತ್ತೀಚೆಗೆ ಸಂಗೀತ ನಿರ್ದೇಶನ ಮಾಡಿದ್ದ ಲವ್ ಮಾಕ್ಟೇಲ್ ಚಿತ್ರ. ಹೌದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅಭಿನಯದ ಲವ್ ಮಾಕ್ಟೇಲ್ ಚಿತ್ರವನ್ನು ಕೆಲ ಚಿತ್ರಮಂದಿರಗಳಿಂದ ತೆಗೆದು ಹಾಕಿರುವುದಕ್ಕೆ ಬೇಸರಗೊಂಡ ರಘು ದೀಕ್ಷಿತ್ ವಿಡಿಯೋ ಮಾಡುವ ಮೂಲಕ ತಮ್ಮ ನೋವನ್ನು ಹೊರ ಹಾಕಿದ್ದಾರೆ.

ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮಾತನಾಡಿರುವ ರಘು ಅವರು, ನಾನು ಸಾರ್ವಜನಿಕವಾಗಿ ಯಾವತ್ತು ತನ್ನ ನೋವನ್ನು ಹಂಚಿಕೊಂಡಿರಲಿಲ್ಲ. ಆದರೆ ಅನಿರ್ವಾಯ ಕಾರಣದಿಂದ ಇಂದು ಈ ವಿಡಿಯೋ ಮಾಡಿ ತನ್ನ ನೋವನ್ನು ಹಂಚಿಕೊಳ್ಳುತ್ತಿದ್ದೇನೆ. ಇದಕ್ಕೆ ಕಾರಣ ಕಳೆದ ಶುಕ್ರವಾರ 150 ಚಿತ್ರಮಂದಿರದಲ್ಲಿ ತೆರೆಕಂಡ ಲವ್ ಮಾಕ್ಟೇಲ್ ಚಿತ್ರ ಇಂದು ಕೇವಲ ಬೆಂಗಳೂರಿನ ಶಾರದಾ ಥೀಯೇಟರ್‍ನಲ್ಲಿ ಮಾತ್ರ ಪ್ರದರ್ಶನ ಕಾಣುತ್ತಿದೆ. ಇದನ್ನು ಓದಿ: ಕಿಚ್ಚನ ಮನಸ್ಸಿಗೂ ಹಿಡಿಸಿದ ‘ಲವ್ ಮಾಕ್ಟೇಲ್’!

https://www.instagram.com/p/B8QI93VgrB0/

ಬುಕ್ ಮೈ ಶೋನಲ್ಲಿ 90% ವೋಟ್ ಕಂಡು ಜನ ಮತ್ತು ಮೀಡಿಯಾದಿಂದ ಒಳ್ಳೆ ಪ್ರತಿಕ್ರಿಯೆ ಬಂದರೂ ಚಿತ್ರಮಂದಿರ ತುಂಬಲಿಲ್ಲ. ನಿಧಾನಕ್ಕೆ ಜನ ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಇಂದು ಕೇವಲ ಒಂದೇ ಒಂದು ಥೀಯೇಟರ್‍ನಲ್ಲಿ ಲವ್ ಮಾಕ್ಟೇಲ್ ಪ್ರದರ್ಶನಗೊಳ್ಳುತ್ತಿದೆ. ಬಹಳ ಒಳ್ಳೆಯ ಚಿತ್ರ ನಾನು ವೈಯಕ್ತಿಕ ಗ್ಯಾರೆಂಟಿ ಕೊಡುತ್ತೇನೆ. ಆ ಚಿತ್ರ ಇಷ್ಟವಾಗಿಲ್ಲ ಎಂದರೆ ಆ ದುಡ್ಡನ್ನು ನಾನು ವಾಪಸ್ ನೀಡುತ್ತೇನೆ ಎಂದು ವಿಡಿಯೋದಲ್ಲಿ ರಘು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಇದನ್ನು ಓದಿ: ಹೃದಯ ತಟ್ಟುವ ಚಿತ್ರ ‘ಲವ್ ಮಾಕ್ಟೇಲ್’

ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳುವವರು, ನಿಜವಾಗಿಯೂ ನೀವು ನಮ್ಮ ಅಭಿಮಾನಿಗಳಾದರೆ ಚಿತ್ರಮಂದಿರಕ್ಕೆ ಬಂದು ಚಿತ್ರನೋಡಿ. ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ ಒಳ್ಳೆ ಸಂಗೀತ ನೀಡಿದ್ದೇನೆ. ಈ ಚಿತ್ರವನ್ನು ನೀವು ಕುಟುಂಬ ಸಮೇತ ಮತ್ತು ಗೆಳೆಯರ ಸಮೇತ ಹೋಗಿ ನೋಡಿ. ಈ ಚಿತ್ರವನ್ನು ಗೆಲ್ಲಿಸಬೇಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

LOVE MOCKTAIL

ಶಾರದಾ ಥೀಯೇಟರ್ ಅನ್ನು ನಾವೇಲ್ಲ ಸೇರಿ ತುಂಬಿಸಬೇಕು. ಟಿಕೆಟ್ ಸಿಗದ ರೀತಿ ಮಾಡಬೇಕು. ಆಗ ನಮಗೆ ಇನ್ನೊಂದು ಚಿತ್ರಮಂದಿರ ಸಿಗಬಹುದು. ದಯಮಾಡಿ ಕನ್ನಡ ಚಿತ್ರಗಳನ್ನು ಉಳಿಸಿ. ಈ ಚಿತ್ರಕ್ಕಿಂತ ಒಳ್ಳೆಯ ಸಿನಿಮಾ ಮಾಡಬೇಕು ಎಂದರೆ ನೀವು ನಮ್ಮನ್ನು ಗೆಲ್ಲಿಸಬೇಕು. ನೀವು ನಮ್ಮನ್ನು ಅನಾಥರನ್ನಾಗಿ ಮಾಡಿದರೆ ನಿಜವಾಗಿಯೂ ಕನ್ನಡ ಚಿತ್ರಗಳನ್ನು ಮಾಡಬಾರದು ಎನಿಸುತ್ತದೆ ಎಂದು ರಘು ದೀಕ್ಷಿತ್ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ‘ಲವ್ ಮಾಕ್ಟೇಲ್’ 4-5 ಪ್ರೀತಿಗಳ ಮಿಶ್ರಣ

ಬೇರೆ ಭಾಷೆಯಲ್ಲಿ ಚಿತ್ರ ಬಂದರೆ ಜನ ಹೋಗಿ ನೋಡುತ್ತಾರೆ. ಆ ಚಿತ್ರಗಳು ಮೂರು ನಾಲ್ಕು ವಾರ ಪ್ರದರ್ಶನ ಕಾಣುತ್ತವೆ. ಇದೇ ಚಿತ್ರ ತೆಲುಗು ಮತ್ತು ತಮಿಳಿನಲ್ಲಿ ಬಂದಿದ್ದರೆ ನಾಲ್ಕು ಐದು ವಾರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿತ್ತು. ಆದರೆ ಕನ್ನಡದಲ್ಲಿ ರಿಲೀಸ್ ಆದರೆ ಜನ ನೋಡುವುದಿಲ್ಲ ಕನ್ನಡ ಚಿತ್ರ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಈ ಚಿತ್ರ ಗೆಲ್ಲಬೇಕು ಅದಕ್ಕೆ ನೀವು ಸಹಾಯ ಮಾಡಬೇಕು ಎಂದು ರಘು ದೀಕ್ಷಿತ್ ಕೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *