Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಡುಗಳ್ಳ ವೀರಪ್ಪನ್ ಸಹಚರನ ಪತ್ನಿ ಬಂಧನ – ವಿಚಾರಣೆ ವೇಳೆ ಆಕೆ ಹೇಳಿದ್ದೇನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chamarajanagar | ಕಾಡುಗಳ್ಳ ವೀರಪ್ಪನ್ ಸಹಚರನ ಪತ್ನಿ ಬಂಧನ – ವಿಚಾರಣೆ ವೇಳೆ ಆಕೆ ಹೇಳಿದ್ದೇನು?

Chamarajanagar

ಕಾಡುಗಳ್ಳ ವೀರಪ್ಪನ್ ಸಹಚರನ ಪತ್ನಿ ಬಂಧನ – ವಿಚಾರಣೆ ವೇಳೆ ಆಕೆ ಹೇಳಿದ್ದೇನು?

Public TV
Last updated: February 2, 2020 7:52 pm
Public TV
Share
2 Min Read
steella
SHARE

ಚಾಮರಾಜನಗರ: ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕಾಡುಗಳ್ಳ ವೀರಪ್ಪನ್ ಸಹಚರನ ಪತ್ನಿಯನ್ನು ಕೊಳ್ಳೇಗಾಲ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಸ್ಟೆಲ್ಲಾ ಅಲಿಯಾಸ್ ಸ್ಟೆಲ್ಲಾಮೇರಿ ಬಂಧಿತ ಆರೋಪಿ. ಪಾಲಾರ್ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರ ಹೊತ್ತೊಯ್ದ ಆರೋಪಗಳೂ ಈಕೆ ಮೇಲಿದೆ. ಈಕೆ ವೀರಪ್ಪನ್ ಗುಂಪಿಗೆ ಬಲವಂತವಾಗಿ ಸೇರಿಕೊಂಡಾಗ 13ರ ಬಾಲಕಿಯಾಗಿದ್ದಳು ಎಂದು ಮೂಲಗಳು ತಿಳಿಸಿವೆ.

Simon Veerappan

ಕಾಡುಗಳ್ಳ ವೀರಪ್ಪನ್ ಹುದುಗಿಸಿಟ್ಟಿದ್ದ ಹಣವನ್ನು ಸ್ಟೆಲ್ಲಾಳ ಬಾವ ಶೇಷರಾಜ್ ಲಪಟಾಯಿಸಿದ್ದನಂತೆ. ಈ ವಿಚಾರ ತಿಳಿದ ವೀರಪ್ಪನ್, ಶೇಷರಾಜ್ ಸೇರಿದಂತೆ ಸ್ಟೆಲ್ಲಾಳನ್ನು ಅಪಹರಿಸಿ ತನ್ನ ಹಣ ಕೊಡುವಂತೆ ತಾಕೀತು ಮಾಡಿದ್ದ. ಇದಕ್ಕೆ ಶೇಷರಾಜ್ ಕೂಡ ಒಪ್ಪಿದ್ದ. ಆ ವೇಳೆ ವೀರಪ್ಪನ್ ಸಹಚರನಾದ ಸುಂಡ ಅಲಿಯಾಸ್ ವೆಲ್ಲೆಯನ್ ಸ್ಟೆಲ್ಲಾ ಮೇಲೆ ಮೋಹಗೊಂಡು ಬಲವಂತವಾಗಿ ವಿವಾಹ ಮಾಡಿಕೊಂಡಿದ್ದ. ಒಂದೂವರೆ ವರ್ಷ ವೀರಪ್ಪನ್ ತಂಡದಲ್ಲೇ ಇದ್ದ ಸ್ಟೆಲ್ಲಾ, ಪಾಲಾರ್ ಬಾಂಬ್ ಸ್ಫೋಟ, ರಾಮಾಪುರ ಠಾಣೆಗೆ ಬೆಂಕಿ, ಶಸ್ತ್ರಾಸ್ತ್ರ ಹೊತ್ತೊಯ್ದ ಪ್ರಕರಣದ ಆರೋಪ ಹೊತ್ತಿದ್ದು, ಟಾಡಾ ಪ್ರಕರಣ ದಾಖಲಾಗಿದೆ.

ಸ್ಟೆಲ್ಲಾ ಸಿಕ್ಕದ್ದೇಗೆ?
ಪತಿ ಸುಂಡ ಅನಾರೋಗ್ಯದಿಂದ ಮೃತಪಟ್ಟಿದ್ದರಿಂದ ಕೊಳ್ಳೇಗಾಲ ತಾಲೂಕಿನ ಜಾಗೇರಿಯ ಚೆನ್ನಿಪುರದದೊಡ್ಡಿಯ ವೇಲುಸ್ವಾಮಿ ಎಂಬಾತನೊಂದಿಗೆ ಎರಡನೇ ವಿವಾಹ ಮಾಡಿಕೊಂಡಿದ್ದ ಈಕೆ ಗುತ್ತಿಗೆ ಆಧಾರದ ಮೇಲೆ 6 ಎಕರೆಯಲ್ಲಿ ಕಬ್ಬು ಬೆಳೆದಿದ್ದಳು. ಕಳೆದ 4 ದಿನಗಳ ಹಿಂದೆ ಕಾಡಾನೆಗಳ ಹಿಂಡು ಇವರ ಜಮೀನಿಗೆ ಲಗ್ಗೆ ಇಟ್ಟ ವೇಳೆ, ಅರಣ್ಯ ಇಲಾಖೆ ಸಿಬ್ಬಂದಿ ಆನೆ ಬೆದರಿಸಲು ಫೈರ್ ಮಾಡಿದ್ದಾರೆ.

Veerappan story

ಫೈರ್ ಮಾಡಿದ ಹಿನ್ನೆಲೆ ಇವರ ಜಮೀನಿಗೆ ಬೆಂಕಿ ಬಿದ್ದಿತ್ತು. ಈ ವೇಳೆ ಸ್ಥಳಕ್ಕೆ ಪೊಲೀಸರು ಹೋದಾಗ ಈಕೆಯ ಬಗ್ಗೆ ಮಾಹಿತಿ ಸಿಕ್ಕಿತು. ಈ ಮಾಹಿತಿ ಆಧರಿಸಿ ಡಿವೈಎಸ್ಪಿ ನವೀನ್ ಕುಮಾರ್ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆದಳದ ಸಿಬ್ಬಂದಿಯಾದ ಗೋವಿಂದರಾಜು, ವೆಂಕಟೇಶ್, ದೊರೆಸ್ವಾಮಿ ಹಾಗೂ ವಸಂತಾ ಎಂಬವರು ಆರೋಪಿಯನ್ನು ಬಂಧಿಸಿ ಚಾಮರಾಜನಗರ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಒಂದೂವರೆ ವರ್ಷ ಕಾಡುಗಳ್ಳನ ಜೊತೆಯಲ್ಲಿದ್ದ ಸ್ಟೆಲ್ಲಾ, ವಿಚಾರಣೆ ವೇಳೆ ವೀರಪ್ಪನ್ ಮಹಿಳೆಯರನ್ನು ನಂಬುತ್ತಲೇ ಇರಲಿಲ್ಲ. ಯಾವುದೇ ಕಾರ್ಯ ನಿಯೋಜಿಸಬೇಕಿದ್ದರೂ ಎರಡು ಮೂರು ಬಾರಿ ಯೋಚಿಸುತ್ತಿದ್ದ ಎಂದು ಹೇಳಿದ್ದಾಳೆ ಎಂದು ಮೂಲಗಳು ತಿಳಿಸಿವೆ.

TAGGED:arrestchamarajanagarCompanion wifepolicePublic TVVeerappanಅರೆಸ್ಟ್ಚಾಮರಾಜನಗರಪಬ್ಲಿಕ್ ಟಿವಿಪೊಲೀಸ್ವೀರಪ್ಪನ್ಸಹಚರನ ಪತ್ನಿ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Abhishek Sharma 2
Cricket

ಹೈದರಾಬಾದ್‌ನಲ್ಲಿ ಸನ್‌ ಶೈನ್‌ – ಸಿಎಸ್‌ಕೆ ವಿರುದ್ಧ 10 ರನ್‌ಗಳ ಸೂಪರ್‌ ಜಯ

Public TV
By Public TV
8 hours ago
Mallikarjun kharge
Latest

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Public TV
By Public TV
8 hours ago
Iran Foreign Minister Abbas Araghchi
Latest

ಇರಾನ್‌ ವಿದೇಶಾಂಗ ಸಚಿವರನ್ನೇ ಮೂರ್ಖ ಎಂದ ಐಆರ್‌ಜಿಸಿ

Public TV
By Public TV
8 hours ago
Abhishek Sharma 1
Cricket

ಸಿಎಸ್‌ಕೆ ವಿರುದ್ಧ 15 ಎಸೆತಗಳಲ್ಲಿ ಫಿಫ್ಟಿ – ತನ್ನದೇ ದಾಖಲೆ ಮುರಿದ ಅಭಿ

Public TV
By Public TV
9 hours ago
01 13
Big Bulletin

ಬಿಗ್‌ ಬುಲೆಟಿನ್‌ 18 April 2026 ಭಾಗ-1

Public TV
By Public TV
9 hours ago
02 13
Big Bulletin

ಬಿಗ್‌ ಬುಲೆಟಿನ್‌ 18 April 2026 ಭಾಗ-2

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?