ಇರಾನ್ ಮೇಲೆ‌ ಯುದ್ಧವಿಲ್ಲ, ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡಲ್ಲ: ಟ್ರಂಪ್

Public TV
1 Min Read
Trump

– ವಿಶ್ವದಲ್ಲೇ‌ ನಮ್ಮದು ಬಲಾಢ್ಯ ಸೇನೆ
– ತೈಲಕ್ಕಾಗಿ ಯಾವುದೇ ದೇಶವನ್ನು ಅವಲಂಬಿಸಿಲ್ಲ

ವಾಷಿಂಗ್ಟನ್: ನಾನು ಅಧಿಕಾರಲ್ಲಿರುವವರೆಗೂ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಎಂದಿಗೂ ಅನುಮತಿಸುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.

ಇರಾನ್ ಮತ್ತು ಅಮೆರಿಕದ ಮಧ್ಯೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್, ಕಳೆದ ರಾತ್ರಿ ಇರಾಕ್ ನಲ್ಲಿರುವ ನಮ್ಮ ವಾಯುನೆಲೆಯ ಮೇಲೆ ನಡೆದ ದಾಳಿಯಲ್ಲಿ ಯಾವುದೇ ಸೈನಿಕ ಹಾಗೂ ಅಧಿಕಾರಿಗಳಿಗೆ ತೊಂದರೆಯಾಗಿಲ್ಲ. ಯಾವುದೇ ಸಾವು, ನೋವುಗಳನ್ನು ಸಂಭವಿಸಿಲ್ಲ. ನಮ್ಮ ಎಲ್ಲಾ ಸೈನಿಕರು ಸುರಕ್ಷಿತರಾಗಿದ್ದಾರೆ. ಅಮೆರಿಕದ ಮಿಲಿಟರಿ ನೆಲೆಗಳಲ್ಲಿ ಕನಿಷ್ಠ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತೈಲ ಬೆಲೆ ಏರಿಕೆ ಎಚ್ಚರಿಕೆ!

ಮೊದಲಿಗಿಂತಲೂ ಅಮೆರಿಕ ಸೈನ್ಯವೂ ಎಲ್ಲದಕ್ಕೂ ಸಿದ್ಧವಾಗಿದೆ. ಸುಧಾರಿತ ಕ್ಷಿಪಣಿಗಳನ್ನು ಹೊಂದಿದ್ದೇವೆ. ಆದರೆ ಅವುಗಳನ್ನು ನಾವು ಬಳಸಲು ಇಚ್ಛಿಸುವುದಿಲ್ಲ. ಯಾಕೆಂದರೆ ನಾವು ಶಾಂತಿಯನ್ನು ಬಯಸುತ್ತೇವೆ. ಇರಾನ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಲು ಹಾಗೂ ವಿಶ್ವ ಶಾಂತಿಯನ್ನು ಕಾಪಾಡಲು ಇಚ್ಛಿಸುತ್ತೇವೆ ಎಂದು ಟ್ರಂಪ್ ಹೇಳಿದರು. ಇದನ್ನೂ ಓದಿ: ಇರಾನ್ ಕ್ಷಿಪಣಿ ದಾಳಿಗೆ 80 ಅಮೆರಿಕ ಸೈನಿಕರು ಹತ 

ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಉಗ್ರರಿಗೆ ತರಬೇತಿ ನೀಡುತ್ತಿದ್ದ. ಅಷ್ಟೇ ಅಲ್ಲದೆ ಅಮೆರಿಕದ ಭದ್ರೆತೆಗೆ ಬೆದರಿಕೆ ಒಡ್ಡಿದ್ದ. ಇದರಿಂದಾಗಿ ಆತನನ್ನು ಹತ್ಯೆಗೈಯುವುದು ಅನಿವಾರ್ಯವಾಗಿತ್ತು ಎಂದು ಖಾಸಿಂ ಸೊಲೈಮನಿ ಹತ್ಯೆಯನ್ನು ಸಮರ್ಥಿಸಿಕೊಂಡರು.

ಇಂಧನ ಹಾಗೂ ಅನಿಲ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ನಾವು ನಂಬರ್ 1. ಸ್ಥಾನದಲ್ಲಿದ್ದೇವೆ. ಹೀಗಾಗಿ ತೈಲ ವಿಚಾರದಲ್ಲಿ ಯಾವುದೇ ದೇಶದ ಮೇಲೆ ಅವಲಂಬಿಸಿಲ್ಲ ಎಂದು ತಿಳಿಸಿದರು.

ಇರಾನ್ ಉಗ್ರರ ತವರೂರು ಆಗಿದ್ದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿದೆ. ನಮ್ಮ ಅವಧಿಯಲ್ಲಿ ಆಲ್ ಖೈದಾ ಉಗ್ರ ಬಾಗ್ದಾದಿಯನ್ನು ಹತ್ಯೆ ಮಾಡಲಾಗಿದೆ. ಆರ್ಥಿಕವಾಗಿ ನಾವು ಪ್ರಬಲವಾಗಿದ್ದೇವೆ. ಸೇನೆಯನ್ನು ಅಭಿವೃದ್ಧಿಪಡಿಸಲಾಗಿದೆ‌ ಎಂದು ಹೇಳಿದರು‌‌.

Share This Article