ಬೆಂಗಳೂರು: ಕೇಂದ್ರದ ನೀತಿಗಳು ಬಹುತೇಕ ಕನ್ನಡದ ಮೇಲೆ ಗಧಾಪ್ರಹಾರ ಮಾಡ್ತಾನೆ ಇರುತ್ತವೆ. ಕನ್ನಡಕ್ಕೆ ಕೇಂದ್ರ ಮಲತಾಯಿ ಧೋರಣೆ ತೋರಿಸ್ತಾನೆ ಇರುತ್ತವೆ. ಈಗ ಒಂದು ಹೆಜ್ಜೆ ಮುಂದೆ ಹೋಗಿರೋ ಕೇಂದ್ರದ ಅಧೀನ ಸಂಸ್ಥೆ ಕೇಂದ್ರೀಯ ವಿದ್ಯಾಲಯ ಶಾಲೆ, ಮಕ್ಕಳಿಗೆ ಕನ್ನಡ ಕಲಿಸದೇ ಭಂಡತನ ಪ್ರದರ್ಶನ ಮಾಡುತ್ತಿದೆ.
2015ರ ಕಾಯ್ದೆ ಪ್ರಕಾರ ಕರ್ನಾಟಕದ ಎಲ್ಲಾ ಶಾಲೆಗಳು ಕನ್ನಡ ಕಲಿಸೋದು ಕಡ್ಡಾಯ. ಅದು ಕೂಡ ಪ್ರಥಮ ಅಥವಾ ದ್ವಿತೀಯ ಭಾಷೆಯಲ್ಲೇ ಕಲಿಸಬೇಕು. ಆದರೆ ಕೇಂದ್ರೀಯ ವಿದ್ಯಾಲಯ ಶಾಲೆ ಕನ್ನಡಕ್ಕೆ ಗೇಟ್ ಪಾಸ್ ಕೊಟ್ಟಿದೆ.
ಕರ್ನಾಟಕದ ಯಾವುದೇ ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಕಲಿಸುತ್ತಿಲ್ಲ. ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಮಾನ್ಯತೆ ಕೊಟ್ಟು ಕಲಿಸುತ್ತಿದ್ದಾರೆ. ಪೋಷಕರೇ ಕನ್ನಡ ಕಲಿಸಿ ಅಂದರೂ ಕಲಿಸುತ್ತಿಲ್ಲ ಅಂತ ಉದ್ಧಟತನ ತೋರುತ್ತಿದೆ. ರಾಜ್ಯ ಸರ್ಕಾರವೇ ನಿಯಮ ತಂದರೂ ನಿಯಮಗಳನ್ನು ಕೇಂದ್ರೀಯ ಶಾಲೆ ಗಾಳಿಗೆ ತೂರಿದೆ. ಕನ್ನಡ ಕಲಿಸಿ ಅಂದ್ರು ನಾವು ಯಾವುದೇ ಕಾರಣಕ್ಕೂ ಕನ್ನಡ ಕಲಿಸಲ್ಲ ಅಂತ ಉದ್ಧಟತನ ಮೆರೆಯುತ್ತಿದೆ.
ಕೆವಿ ಶಾಲೆಗಳಲ್ಲಿ ಕನ್ನಡ ಕಲಿಸದೇ ಇರೋದು ರಾಜ್ಯ ಸರ್ಕಾರದ ಗಮನಕ್ಕೂ ಬಂದಿದೆ. ಆದರೆ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸವಾಗಿದ್ದು, ಈ ಕೇಂದ್ರೀಯ ವಿದ್ಯಾಲಯ ಮೊಂಡುತನಕ್ಕೆ ಕೊನೆ ಯಾವಾಗ ಎಂದು ರಾಜ್ಯ ಸರ್ಕಾರವೇ ನಿರ್ಧಾರ ಮಾಡಬೇಕಾಗಿದೆ.