ಬೆಳಗಾವಿ: ಭೀಕರ ಪ್ರವಾಹದಿಂದ ನಲುಗಿದ ಬೆಳಗಾವಿಯ ಜನತೆ 2020ಯನ್ನು ಸ್ವಾಗತಿಸುವ ಭರದಲ್ಲಿ ಕುಂದಾನಗರಿ, ಸ್ಮಾರ್ಟ್ ಸಿಟಿಯ ಜನತೆ ಪಾರ್ಟಿ, ಮೋಜು-ಮಸ್ತಿಯೊಂದಿಗೆ ರಾಜ್ಯ ಸರ್ಕರದ ಬೊಕ್ಕಸೆಯನ್ನು ಭರ್ಜರಿಯಾಗಿ ತುಂಬಿಸಿದ್ದಾರೆ.
ಹೊಸ ವರ್ಷವನ್ನು ಸ್ವಾಗತಿಸುವ ನೆಪದಲ್ಲಿ ಡಿಸೆಂಬರ್ 31ರ ಒಂದೇ ದಿನದಂದು ಬರೋಬ್ಬರಿ 6.49 ಕೋಟಿ ರೂ. ಹೆಚ್ಚು ಮದ್ಯ ಮಾರಾಟವಾಗಿದೆ. ಡಿ. 31ರಂದು ಅಬಕಾರಿ ಇಲಾಖೆಗೆ ಭರ್ಜರಿ ವ್ಯಾಪಾರವಾಗಿದ್ದರೂ ಇಲಾಖೆ ಅಂದುಕೊಂಡ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಬೆಳಗಾವಿ ಸೇರಿದಂತೆ ನೂತನ ವರ್ಷವನ್ನು ಸ್ವಾಗತಿಸುವ ಭರದಲ್ಲಿ ರಾಜ್ಯದ ಜನತೆ ಅಬಕಾರಿ ಇಲಾಖೆಗೆ ಭರ್ಜರಿ ಉಡುಗೊರೆ ನೀಡಿದ್ದು, ಅಬಕಾರಿ ಇಲಾಖೆಗೆ ಈ ವರ್ಷ ಬರೋಬ್ಬರಿ 15 ಪ್ರತಿಶತ ಏರಿಕೆಯಾಗಿದೆ. ಅಲ್ಲದೆ ರಾಜ್ಯದಲ್ಲಿ ಒಟ್ಟು 597 ಕೋಟಿ ರೂ. ಆದಾಯ ಒಂದೇ ದಿನದಲ್ಲಿ ಅಬಕಾರಿ ಇಲಾಖೆಗೆ ಆದಾಯ ತರಿಸಿದ್ದು ಗಮನಾರ್ಹ ಸಂಗತಿ.
ಹೊಸ ವರ್ಷದ ಸಂಭ್ರಮದಲ್ಲಿ ರಾಜ್ಯದಲ್ಲಿ ಒಟ್ಟು 5.88 ಲಕ್ಷ ಕೇಸ್ ಮಾರಾಟವಾಗಿದೆ. ಇದರಲ್ಲಿ 6.49 ಲಕ್ಷ ರೂ. ಗಳಷ್ಟು ಬೆಳಗಾವಿ ಜಿಲ್ಲೆಯಲ್ಲಿ ಮಾರಾಟವಾಗಿದ್ದು ವಿಶೇಷವಾಗಿದೆ. ವರ್ಷಾಂತ್ಯಕ್ಕೆ ಬೆಳಗಾವಿಯಲ್ಲಿ ಹೆಚ್ಚು ಮದ್ಯ ಮಾರಾಟವಾಗಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್‍ಗಳಲ್ಲಿ ಬಾಕ್ಸ್ ಗಟ್ಟಲೇ ಎಣ್ಣೆ ಮಾರಾಟವಾಗಿದೆ. ಚಳಿಗಾಲ ಇರುವುದರಿಂದ ತಂಡಿಯ ಸಮಯದಲ್ಲಿ ಬೇಡಿಕೆ ಕಡಿಮೆ ಇದ್ದ ಬಿಯರ್ ಗೆ ಶೇ. 20ರಷ್ಟು ಅಧಿಕ ಮಾರಾಟವಾಗಿದೆ.