ಬಿಗ್ ಬಾಸ್ ಮನೆಗೆ ‘ಜೋಕರ್’ ಸುದೀಪ್ ಎಂಟ್ರಿ

Public TV
1 Min Read
bigg boss 3

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್-7ರ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಇಂದಿನ ಬಿಗ್ ಬಾಸ್ ಸಂಚಿಕೆಯಲ್ಲಿ ಜಾತ್ರೆ ರೀತಿಯಲ್ಲಿ ಸೆಟ್ ಹಾಕಲಾಗಿದ್ದು, ಇದರಲ್ಲಿ ಮನೆಯ ಎಲ್ಲ ಸದಸ್ಯರು ಎಂಜಾಯ್ ಮಾಡಿದ್ದಾರೆ. ಜಾತ್ರೆಯಲ್ಲಿ ಜೋಕರ್ ವೇಷ ಧರಿಸಿ ಕಿಚ್ಚ ಸುದೀಪ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅವರು ಸುದೀಪ್ ಎಂಬುದು ಮನೆಯವರಿಗೆ ತಿಳಿಯಲಿಲ್ಲ.

ಸುದೀಪ್ ಜೋಕರ್ ವೇಷ ಧರಿಸಿ ಮನೆಯವರ ಜೊತೆ ಹೆಚ್ಚು ಸಮಯ ಕಳೆದರು. ಈ ನಡುವೆ ವಾಸುಕಿ ಹಾಗೂ ಶೈನ್ ಅವರನ್ನು ತಬ್ಬಿಕೊಂಡರು. ಆದರೂ ಅವರಿಗೂ ಸುದೀಪ್ ಎಂಬುದು ತಿಳಿಯಲಿಲ್ಲ. ಬಳಿಕ ಬಿಗ್ ಬಾಸ್ ಟಿವಿಯಲ್ಲಿ ಜೋಕರ್ ವೇಷಧಾರಿಯನ್ನು ತೋರಿಸಿದರು.

vlcsnap 2019 12 24 13h36m51s123 e1577175229581

ಟಿವಿಯಲ್ಲಿ ಜೋಕರ್ ವೇಷದಲ್ಲಿ ಇರುವುದು ಸುದೀಪ್ ಎಂದು ತಿಳಿದ ಮನೆಯ ಸದಸ್ಯರು ಶಾಕ್ ಆದರು. ಬಳಿಕ ಸುದೀಪ್ ಅವರನ್ನು ಕಂಡು ಹಿಡಿಯಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಖಾಸಗಿ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಪ್ರೋಮೋ ಬಿಡುಗಡೆ ಮಾಡಿದ್ದು, ಇಂದು ಸಂಜೆ ಈ ಸಂಚಿಕೆ ಪ್ರಸಾರವಾಗಲಿದೆ.

ಬಿಗ್ ಬಾಸ್ ಸೀಸನ್ -5ರಲ್ಲಿ ಸುದೀಪ್ ಮಾಸ್ಕ್ ಧರಿಸುವ ಮೂಲಕ ಶೆಫ್ ಆಗಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಆಗಲೂ ಸಹ ಯಾವ ಸ್ಪರ್ಧಿಯೂ ಸುದೀಪ್ ಅವರನ್ನು ಕಂಡು ಹಿಡಿಯಲಿಲ್ಲ. ಬಳಿಕ ಬಿಗ್ ಬಾಸ್ ಟಿವಿಯಲ್ಲಿ ಸುದೀಪ್ ಅವರನ್ನು ತೋರಿಸಿತು.

Share This Article
Leave a Comment

Leave a Reply

Your email address will not be published. Required fields are marked *