ಮದ್ವೆ ವಾರ್ಷಿಕೋತ್ಸವಕ್ಕೆ ಪ್ರಿಯಾಂಕಾ ಜೀವನದಲ್ಲಿ ಹೊಸ ಸದಸ್ಯನ ಎಂಟ್ರಿ

Public TV
1 Min Read
nick priyanka 1

ಮುಂಬೈ: ಸ್ಟಾರ್ ಜೋಡಿ ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಮಗು ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿದ ನೆಟ್ಟಿಗರು ಪರ್ಫೆಕ್ಟ್ ಫ್ಯಾಮಿಲಿ ಎಂದು ಹೇಳುತ್ತಿದ್ದಾರೆ.

ಪ್ರಿಯಾಂಕಾ ಹಾಗೂ ನಿಕ್ ಇಂದು ತಮ್ಮ ಮೊದಲನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಸಂಭ್ರಮವನ್ನು ಹೆಚ್ಚಿಸಲು ಅಭಿಮಾನಿಗಳು ಪ್ರಿಯಾಂಕಾ ಹಾಗೂ ನಿಕ್ ತೋಳಿನಲ್ಲಿ ಮಗುವಿರುವ ಫೋಟೋವನ್ನು ಫೋಟೋಶಾಪ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಿಕ್ – ಪ್ರಿಯಾಂಕಾ

ನಿಕ್ ಹಾಗೂ ಪ್ರಿಯಾಂಕಾ ಮಗು ಜೊತೆಗಿರುವ ಫೋಟೋಶಾಪ್ ಫೋಟೋ ನೋಡಿ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಇದು ತುಂಬಾ ಸುಂದರವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅದ್ಭುತವಾಗಿ ಫೋಟೋಶಾಪ್ ಮಾಡಿದ್ದೀರಾ ಎಂದು ಬರೆದಿದ್ದಾರೆ

ಈ ಹಿಂದೆ ಸಂದರ್ಶನದಲ್ಲಿ ಪ್ರಿಯಾಂಕಾ, ನಾನು ಸುಮಾರು ದಿನಗಳಿಂದ ಲಾಸ್ ಏಂಜಲೀಸ್‍ನಲ್ಲಿ ಮನೆ ಹುಡುಕುತ್ತಿದ್ದೇನೆ. ಈಗಾಗಲೇ ಮುಂಬೈ ಹಾಗೂ ನ್ಯೂಯಾರ್ಕ್ ನಲ್ಲಿ ನನ್ನ ಮನೆ ಇದೆ. ಮುಂಬೈ ನೆನಪಾಗಲಿ ಎಂದು ನಾನು ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಲು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದರು.

priyanka chopra nick jonas

ಅಲ್ಲದೆ, ನನ್ನ ಸುತ್ತಮುತ್ತ ನಾನು ಪ್ರೀತಿಸುವ ಜನರಿದ್ದರೆ ನಾನು ತುಂಬಾ ಖುಷಿಯಾಗಿರುತ್ತೇನೆ. ಈಗ ನನಗಾಗಿ ಒಂದು ಮನೆ ಖರೀದಿಸುವುದು ಹಾಗೂ ಮಗುವಿಗೆ ಜನ್ಮ ನೀಡುವುದು ನನ್ನ ಟಾಪ್ ಲಿಸ್ಟ್ ನಲ್ಲಿ ಇದೆ ಎಂದು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *