ಮದ್ವೆಯಾಗಿ 7 ವರ್ಷವಾದ್ರೂ ಪ್ರಿಯಕರನನ್ನು ಮರೆಯದ ಪತ್ನಿ

Public TV
2 Min Read
marriage 2

– ಪತ್ನಿಗೆ ಲವ್ವರ್ ಜೊತೆ ಮದ್ವೆ ಮಾಡಿಸಿದ ಟೆಕ್ಕಿ

ಭೋಪಾಲ್: ಮದುವೆಯಾಗಿ 7 ವರ್ಷವಾದರೂ ಪ್ರಿಯಕರನನ್ನು ಮರೆಯದ ತನ್ನ ಪತ್ನಿಗೆ ಟೆಕ್ಕಿ ಪತಿಯೊಬ್ಬ ಮತ್ತೊಂದು ವಿವಾಹ ಮಾಡಿಸಿದ ಅಪರೂಪದ ಘಟನೆ ಮಧ್ಯ ಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ.

ಮುಕೇಶ್ ಹಾಗೂ ಅಲ್ಕಾ (ಹೆಸರು ಬದಲಾಯಿಸಲಾಗಿದೆ) ಸಿಟಿ ಆಫ್ ಲೇಕ್‍ನ ಕೋಲಾರ ಕ್ಷೇತ್ರದ ನಿವಾಸಿಯಾಗಿದ್ದು, 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅಲ್ಕಾ ಫ್ಯಾಶನ್ ಡಿಸೈನರ್ ಆಗಿದ್ದು, ಮುಕೇಶ್ ಸಾಫ್ಟವೇರ್ ಎಂಜಿನಿಯರ್ ಆಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಮದುವೆಯಾದ ಬಳಿಕ ಇಬ್ಬರು ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಈ ನಡುವೆ ಅಲ್ಕಾಳ ಹಳೆ ಪ್ರಿಯಕರ ಆಕೆಯ ಜೀವನದಲ್ಲಿ ಮತ್ತೆ ಬಂದನು. ಪ್ರಿಯಕರನಿಂದ ಪತಿ-ಪತ್ನಿ ನಡುವೆ ಅಂತರ ಹೆಚ್ಚಾಯಿತು. ಅಲ್ಕಾ ತನ್ನ ಪ್ರಿಯಕರನಿಗಾಗಿ ಪತಿಯ ಮನೆ ಬಿಟ್ಟು ಹೋಗಲು ಮುಂದಾಗಿದ್ದಳು. ಕುಟುಂಬ ನ್ಯಾಯಾಲಯದಲ್ಲಿ ಈ ಪ್ರಕರಣ ನಡೆಯುತ್ತಿತ್ತು. ಇದನ್ನೂ ಓದಿ: ಮದುವೆಯಾದ 6 ದಿನಕ್ಕೆ ಪತ್ನಿಗೆ ಮತ್ತೊಂದು ಮದುವೆ ಮಾಡಿಸಿದ ಪತಿ!

marriage 2

ಮದುವೆಗೂ ಮೊದಲು ಅಲ್ಕಾ ಬೇರೆ ಯುವಕನನ್ನು ಪ್ರೀತಿಸುತ್ತಿದ್ದಳು. ಅಲ್ಲದೆ ಮದುವೆ ಆದ ಬಳಿಕವೂ ಪ್ರಿಯಕರನ ಜೊತೆ ಸಂಬಂಧದಲ್ಲಿದ್ದಳು. ಪ್ರಿಯಕರ ಬೇರೆ ಜಾತಿಯವನಾಗಿದ್ದ ಕಾರಣ ಇವರಿಬ್ಬರ ಮದುವೆಗೆ ಅಲ್ಕಾ ತಂದೆ ವಿರೋಧಿಸಿದ್ದರು. ಅಲ್ಲದೆ ಮಗಳ ಇಚ್ಛೆಯ ವಿರುದ್ಧವಾಗಿ ಬೇರೆ ವ್ಯಕ್ತಿಯ ಜೊತೆ ಮದುವೆ ಮಾಡಿಸಿದ್ದರು. ಅಲ್ಕಾ ಬೇರೆ ವ್ಯಕ್ತಿಯ ಜೊತೆ ಮದುವೆ ಆದ ವಿಷಯ ತಿಳಿದು ಪ್ರಿಯಕರ ಈವರೆಗೂ ಮದುವೆ ಆಗಲೇ ಇಲ್ಲ. ಇದನ್ನೂ ಓದಿ: ಪ್ರಿಯಕರನೊಂದಿಗೆ ಪತ್ನಿ ಮದ್ವೆ – ಮಗುವನ್ನೇ ಗಿಫ್ಟ್ ನೀಡಿದ ಪತಿ

Couple

ಪತಿ-ಪತ್ನಿ ನಡುವೆ ಅಂತರ ಕಡಿಮೆ ಮಾಡಲು ಕೌನ್ಸ್ ಲಿಂಗ್ ಮಾಡಿಸಲಾಯಿತು. ಆದರೆ ಇಬ್ಬರ ಸಂಬಂಧ ಸರಿ ಹೋಗಲಿಲ್ಲ. ಮುಕೇಶ್ ಕೌನ್ಸಿಲರ್ ಬಳಿ ನಾನು ಹಲವು ಪ್ರಯತ್ನ ಮಾಡಿದರೂ ಅಲ್ಕಾ ನನ್ನ ಜೊತೆ ಖುಷಿಯಾಗಿಲ್ಲ. ಆಕೆ ತನ್ನ ಪ್ರಿಯಕರನನ್ನು ತುಂಬಾ ಪ್ರೀತಿಸುತ್ತಿದ್ದು, ಆತನನ್ನು ಮರೆಯಲು ಆಕೆಗೆ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಅಲ್ಕಾ ಕೂಡ ನನಗೆ ನನ್ನ ಮೊದಲ ಪ್ರೀತಿಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ನನ್ನ ಪ್ರಿಯಕರನ ಜೊತೆ ವಾಸಿಸಲು ಇಷ್ಟಪಡುತ್ತಿದ್ದೇನೆ. ಮುಕೇಶ್‍ಗೆ ಮಕ್ಕಳನ್ನು ನೋಡಿಕೊಳ್ಳಲು ಆಗಲಿಲ್ಲ ಎಂದರೆ ನಾನೇ ಅವರನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.

divorce rings 3

ಇದಾದ ಬಳಿಕ ನ್ಯಾಯಾಲಯದಲ್ಲೇ ಮುಕೇಶ್, ನಾನು ನನ್ನ ಪತ್ನಿಯ ಮದುವೆಯನ್ನು ಆಕೆಯ ಪ್ರಿಯಕರನ ಜೊತೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ಅಲ್ಕಾಳಿಗೆ ವಿಚ್ಛೇದನ ಅರ್ಜಿ ಕೂಡ ನೀಡಿದ್ದಾರೆ. ಮುಕೇಶ್ ನಿರ್ಧಾರ ಕೇಳಿದ ಕೌನ್ಸಿಲರ್ ಶೈಲ್ ಅವ್ಯಸ್ತಿ ಆಶ್ಚರ್ಯಪಟ್ಟರು. ನಾನು ಮೊದಲ ಬಾರಿಗೆ ಈ ರೀತಿಯ ಪ್ರಕರಣವನ್ನು ನೋಡುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ಮುಕೇಶ್ ಅವರ ಈ ನಿರ್ಧಾರಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *