ಸಮಾಜದ ಸ್ವಾಸ್ಥ್ಯ ಕಾಪಾಡಿದ ಎಸ್‍ಐಗೆ ಸಸ್ಪೆಂಡ್ ಶಿಕ್ಷೆ – ಶಾಸಕ ರಘುಪತಿಭಟ್ ಆಕ್ರೋಶ

Public TV
1 Min Read
udp SI Suspend copy

ಉಡುಪಿ: ಅಯೋಧ್ಯೆ ರಾಮಮಂದಿರ ತೀರ್ಪಿನ ಬಿಸಿಯಲ್ಲಿ ಹಿಂದೂ-ಮುಸ್ಲಿಂ ಪ್ರೇಮ ಪ್ರಕರಣವೊಂದನ್ನು ರಾಜಿ ಪಂಚಾಯ್ತಿ ಮೂಲಕ ಇತ್ಯರ್ಥ ಮಾಡಿದ್ದ ಉಡುಪಿ ಎಸ್‍ಐಗೆ ಸಸ್ಪೆಂಡ್ ಶಿಕ್ಷೆ ವಿಧಿಸಲಾಗಿದೆ.

ಹಿಂದೂ ಯುವತಿ ಮತ್ತು ಮುಸಲ್ಮಾನ ಯುವಕ ಉಡುಪಿಯ ಭುಜಂಗ ಪಾರ್ಕ್ ನಲ್ಲಿ ಅಸಭ್ಯ ವರ್ತನೆಯಲ್ಲಿ ತೊಡಗಿದ್ದರು.ಯುವಕ, ಯುವತಿಗೆ ಸ್ಥಳೀಯರು ಧರ್ಮದೇಟು ಕೊಟ್ಟಿದ್ದರು. ಸ್ಥಳಕ್ಕೆ ಆಗಮಿಸಿದ್ದ ಉಡುಪಿ ನಗರಠಾಣಾ ಎಸ್‍ಐ ಅನಂತಪದ್ಮನಾಭ ಎರಡೂ ಕಡೆಯವರನ್ನು ಠಾಣೆಗೆ ಕರೆಸಿದ್ದರು. ಎರಡೂ ಕಡೆಯವರು ದೂರು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜಿಯಲ್ಲಿ ಪ್ರಕರಣ ಇತ್ಯರ್ಥವಾಗಿತ್ತು. ರಾಮಮಂದಿರ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲು ಎಸ್‍ಐ ಕ್ರಮ ಕೈಗೊಂಡಿದ್ದರು ಎನ್ನಲಾಗಿದೆ.

Udp SI suspend

ಆ ಬಳಿಕ ಯುವಕನ ಕಡೆಯವರು ಹಲ್ಲೆ ಮಾಡಿದ ಬಗ್ಗೆ ಎಸ್‍ಪಿಗೆ ದೂರು ನೀಡಿದ್ದರು. ಎಸ್‍ಪಿ ನಿಶಾ ಜೇಮ್ಸ್ ದೂರನ್ನು ದಾಖಲಿಸಿಕೊಳ್ಳದೆ ಕರ್ತವ್ಯಲೋಪ ಮಾಡಿದ ಆರೋಪದಲ್ಲಿ ನಗರ ಠಾಣಾ ಎಸ್‍ಐ ಅನಂತ ಪದ್ಮನಾಭ ಅವರನ್ನು ಅಮಾನತು ಮಾಡಿದ್ದಾರೆ. ಶಾಸಕರು ಎಸ್‍ಐ ಅನಂತ ಪದ್ಮನಾಭ ಅವರ ಕ್ರಮವನ್ನು ಬೆಂಬಲಿಸಿದ್ದಾರೆ.

udp si suspend 2 e1573556188994

ಸೌಹಾರ್ದಕ್ಕೆ ಅಡ್ಡಿಯಾಗಬಾರದು ಎನ್ನುವ ಉದ್ದೇಶದಿಂದ ಅನಂತ ಪದ್ಮನಾಭ ತೆಗೆದುಕೊಂಡ ಕ್ರಮ ಸರಿಯಾಗಿದೆ. ಅಯೋಧ್ಯೆ ತೀರ್ಪು ಬರಬೇಕಾಗಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಎಸ್‍ಐ ಸರಿಯಾಗಿ ನಡೆದುಕೊಂಡಿದ್ದಾರೆ ಎಂದು ಎಸ್‍ಪಿ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. ಉಡುಪಿ ಜಿಲ್ಲೆಯ ವ್ಯಾಪ್ತಿಯ ಮಟ್ಕಾ, ಗಾಂಜಾ ಮತ್ತಿತರ ದಂಧೆ ವಿರುದ್ಧ ಕ್ರಮ ಕೈಗೊಳ್ಳದವರನ್ನು ಸಸ್ಪೆಂಡ್ ಮಾಡಿ, ಈ ಬಗ್ಗೆ ಗೃಹ ಸಚಿವರು, ಐಜಿಪಿಗೆ ದೂರು ನೀಡಿರುವುದಾಗಿ ಶಾಸಕರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *