ಮುಂಬೈ: ಇಂಟರ್‌ನೆಟ್ ಸೆನ್ಸೇಷನ್ ರಾನು ಮೊಂಡಲ್ ಅವರು ಹಾಡಿದ ಮೊದಲ ಹಾಡನ್ನು ಗಾಯಕ ಹಿಮೇಶ್ ರೇಶ್ಮಿಯಾ ಅವರು ಅದ್ಧೂರಿಯಾಗಿ ಲಾಂಚ್ ಮಾಡಿದ್ದಾರೆ. ಈ ವೇಳೆ ರಾನು ಅವರು ಧನ್ಯವಾದ ತಿಳಿಸಿದ್ದಕ್ಕೆ ಹಿಮೇಶ್ ಭಾವುಕರಾಗಿದ್ದಾರೆ.
ಬುಧವಾರ ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಮೊಂಡಲ್ ಅವರ ಹಾಡನ್ನು ಲಾಂಚ್ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರಾನು ಮೊಂಡಲ್, ಹಿಮೇಶ್ ರೇಶ್ಮಿಯಾ ಹಾಗೂ ‘ಹ್ಯಾಪಿ ಹಾರ್ಡಿ ಅಂಡ್ ಹೀರ್’ ಚಿತ್ರತಂಡ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾನು ಮೊಂಡಲ್, ನಾನು ಮೊದಲು ಹಿಮೇಶ್ ಅವರಿಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ಏಕೆಂದರೆ ಹಿಮೇಶ್ ಅವರು ನನಗೆ ಅವಕಾಶ ಕೊಡದಿದ್ದರೆ, ನಾನು ಎಂದಿಗೂ ಹಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 10 ವರ್ಷದ ಬಳಿಕ ರಾನು ಮೊಂಡಲ್ ಭೇಟಿಯಾದ ಮಗಳು
ರಾನು ಮಾತು ಕೇಳಿ ಭಾವುಕರಾದ ಹಿಮೇಶ್, ನಾನು ಕೇವಲ ಒಬ್ಬರ ಪ್ರತಿಭೆಯನ್ನು ಎಲ್ಲರ ಮುಂದೆ ತಂದಿದ್ದೇನೆ ಅಷ್ಟೇ. ಅದನ್ನು ಬಿಟ್ಟು ನಾನು ಬೇರೆ ಏನೂ ಮಾಡಿದ್ದೇನೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಆದರೆ ವಾಸ್ತವವಾಗಿ ನಾನು ಏನನ್ನೂ ಮಾಡಿಲ್ಲ. ಎಲ್ಲವು ಮೇಲಿರುವವರ ಕೈಯಲ್ಲಿ ಇರುತ್ತದೆ. ನಾವು ಅವರ ಕೈಗೊಂಬೆಗಳು ಅಷ್ಟೇ. ನಮ್ಮಿಂದ ಏನೂ ಆಗುತ್ತದೋ ನಾವು ಅದನ್ನು ಮಾಡಿದ್ದೇವೆ. ಈಗ ರಾನು ಮೊಂಡಲ್ ಅವರನ್ನು ನೀವು ಯಶಸ್ಸಿನತ್ತ ಕರೆದುಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಯಾಕೆ ದೂಷಿಸುತ್ತೀರಾ, ಉಳಿದ ಮಕ್ಕಳನ್ನು ಯಾಕೆ ಪ್ರಶ್ನಿಸಲ್ಲ: ರಾನು ಪುತ್ರಿ
ಅಲ್ಲದೆ ಎಲ್ಲಿ ಪ್ರತಿಭೆ ಕಾಣುತ್ತಿರೋ ಅದನ್ನು ಪ್ರೋತ್ಸಾಹಿಸಿ. ಏಕೆಂದರೆ ಈ ಹಿಂದೆ ನಮಗೂ ಯಾರೋ ಒಬ್ಬರು ಬೆಂಬಲ ನೀಡಿದ್ದರಿಂದ ಜೀವನದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ಹಿಮೇಶ್ ಭಾವುಕರಾಗಿ ಮಾತನಾಡಿದ್ದಾರೆ. ಯೂಟ್ಯೂಬ್‍ನಲ್ಲಿ ರಾನು ಮೊಂಡಲ್ ಅವರು ಹಾಡಿದ ‘ತೇರಿ ಮೇರಿ ಕಹಾನಿ’ ರಿಲೀಸ್ ಆಗಿ ಈವರೆಗೂ 30 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದೆ. ತೇರಿ ಮೇರಿ ಕಹಾನಿ ಹಾಡಲ್ಲದೇ ಹಿಮೇಶ್ ಚಿತ್ರದಲ್ಲಿ ರಾನು ಅವರು ಮತ್ತೆ ಎರಡು ಹಾಡನ್ನು ಹಾಡಿದ್ದಾರೆ. ಇದನ್ನು ಓದಿ:ನಾನು ಫುಟ್‍ಪಾತ್‍ನಲ್ಲಿ ಹುಟ್ಟಿದವಳಲ್ಲ- ಕುಟುಂಬದ ಕಹಾನಿ ಬಿಚ್ಚಿಟ್ಟ ರಾನು