ಒಂದೇ ಉತ್ತರ, ಒಂದೇ ರೀತಿ ತಪ್ಪು – 959 ವಿದ್ಯಾರ್ಥಿಗಳಿಂದ ಸಾಮೂಹಿಕ ನಕಲು

Public TV
1 Min Read
mass copy

ಗಾಂಧಿನಗರ: ಪರೀಕ್ಷೆ ಬರೆದ 959 ವಿದ್ಯಾರ್ಥಿಗಳು ಸಾಮೂಹಿಕವಾಗಿ ನಕಲು ಮಾಡಿ ಒಂದೇ ರೀತಿ ಉತ್ತರ ಬರೆದು, ಒಂದೇ ರೀತಿ ತಪ್ಪುಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡ ಘಟನೆ ಗುಜರಾತ್‍ನಲ್ಲಿ ನಡೆದಿದೆ.

ಗುಜರಾತ್‍ನ 12ನೇ ತರಗತಿಯ ಪರೀಕ್ಷೆ ವೇಳೆ 959 ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡಿದ್ದಾರೆ. ಇದು ರಾಜ್ಯ ಮಂಡಳಿಯ ಇತಿಹಾಸದಲ್ಲೇ ಅತಿ ದೊಡ್ಡ ಸಾಮೂಹಿಕ ನಕಲು ಎಂದು ವರದಿಯಾಗಿದೆ.

exam fee

ಸಾಮೂಹಿಕ ನಕಲು ಆಗಬಾರದು ಎಂದು ಕಠಿಣ ಕ್ರಮಕೈಗೊಂಡರೂ ಸಹ 959 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ನಕಲು ಮಾಡಿ ಒಂದೇ ರೀತಿ ಉತ್ತರ ಬರೆದಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ಒಂದೇ ರೀತಿಯ ತಪ್ಪು ಉತ್ತರಗಳನ್ನು ಬರೆದಿದ್ದಾರೆ.

ಯಾಕೆ ಹೀಗಾಯ್ತು ಎಂದು ಬೋರ್ಡ್ ಅಧಿಕಾರಿಗಳು ವರದಿಯಾದ ಉತ್ತರ ಪತ್ರಿಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ತನಿಖೆಗೆ ಇಳಿದಾಗ ಜುನಾಗಢ್ ಹಾಗೂ ಗಿರ್-ಸೋಮನಾಥ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ನಡೆದಿರುವ ವಿಚಾರ ಪತ್ತೆಯಾಗಿದೆ.

ಸಾಮೂಹಿಕ ನಕಲನ್ನು ಪರಿಶೀಲಿಸಲು ಅಧಿಕಾರಿಗಳನ್ನು ವಿದ್ಯಾರ್ಥಿಗಳನ್ನು ಕರೆಸಿ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಶಿಕ್ಷಕರೇ ಉತ್ತರವನ್ನು ಹೇಳಿಕೊಟ್ಟಿದ್ದಾರೆ ಎಂದು ಉತ್ತರಿಸಿದ್ದಾರೆ.

ಈ ವಿದ್ಯಾರ್ಥಿಗಳ ಫಲಿತಾಂಶ 2020ರವರೆಗೂ ತಡೆ ಹಿಡಿಯಲಾಗಿದೆ. ಅಲ್ಲದೆ ಅವರು ನಕಲು ಮಾಡಿದ ವಿಷಯಗಳಲ್ಲಿ ಫೇಲ್ ಮಾಡಲಾಗಿದೆ.

ಅಮರಾಪುರ(ಗಿರ್ ಸೋಮನಾಥ್), ವಿಸನ್ವೆಲ್ (ಜುನಾಗಢ್) ಹಾಗೂ ಪ್ರಾಚಿ-ಪಿಪ್ಲಾ (ಗಿರ್ ಸೋಮನಾಥ್)ನಲ್ಲಿ ಈ ಕೇಂದ್ರಗಳಲ್ಲಿ 13ನೇ ತರಗತಿಯ ಪರೀಕ್ಷೆಗಳನ್ನು ಕ್ಯಾನ್ಸಲ್ ಮಾಡಲು ಬೋರ್ಡ್ ತಯಾರಿ ನಡೆಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *