ಲಂಡನ್: 2019ರ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ತಂಡ ಅಧಿಕೃತವಾಗಿ ಹೊರ ಬಿದ್ದಿದ್ದು, ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಬಾಂಗ್ಲಾ ತಂಡ 7ನೇ ರನ್ ಗಳಿಸುತ್ತಿದ್ದಂತೆ ಪಾಕ್ ಹೊರ ನಡೆಯುವುದು ಅಧಿಕೃತವಾಗಿದೆ.
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಪಾಕಿಸ್ತಾನ 315 ರನ್ ಗಳಿಸಿತ್ತು. ಇದರಂತೆ ಪಾಕ್ ವಿಶ್ವಕಪ್ ಸೆಮಿ ಫೈನಲ್ ಹಂತ ಪ್ರವೇಶ ಮಾಡಲು 308 ರನ್ ಅಂತರದೊಂದಿಗೆ ಗೆಲುವು ಪಡೆಯಬೇಕಿತ್ತು. ಇದಕ್ಕಾಗಿ ಬಾಂಗ್ಲಾ ತಂಡವನ್ನು 7 ರನ್‍ಗೆ ಆಲೌಟ್ ಮಾಡುವ ಅನಿವಾರ್ಯತೆಯನ್ನು ಎದುರಿಸಿತ್ತು. ಆದರೆ ಪಾಕಿಸ್ತಾನ ಗುರಿ ಬೆನ್ನತ್ತಿದ ಬಾಂಗ್ಲಾ ಆಟಗಾರರು ಉತ್ತಮ ಆಟದೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದಾರೆ.
ವಿಶ್ವಕಪ್ ಆರಂಭದಿಂದಲೂ ಏಳು-ಬೀಳುಗಳ ನಡುವೆ ಸಾಗಿದ್ದ ಪಾಕಿಸ್ತಾನ ತಂಡ ಟೂರ್ನಿಯ 7ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ಪಡೆದು ಸೆಮಿ ಫೈನಲ್ ಕಾಣುವ ಕನಸು ಉಳಿಸಿಕೊಂಡಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡ ಪರಿಣಾಮ ಪಾಕ್ ಲೆಕ್ಕಾಚಾರಗಳು ತಲೆಕೆಳಗಾಗಿತ್ತು. ಲೀಗ್ ಹಂತದ ಅಂತಿಮ ಪಂದ್ಯದಲ್ಲಿಯೂ 315 ರನ್ ಗಳನ್ನಷ್ಟೇ ಪಾಕ್ ಗಳಿಸಲು ಸಾಧ್ಯವಾಗಿತ್ತು. ಒಂದೊಮ್ಮೆ ಪಾಕ್ ಬಾಂಗ್ಲಾ ವಿರುದ್ಧ ಗೆಲುವು ಪಡೆದರೆ ಜಯದೊಂದಿಗೆ ತನ್ನ ಪ್ರಯಾಣವನ್ನು ಅಂತ್ಯಗೊಳಿಸುತ್ತದೆ. ಇನ್ನು ವಿಶ್ವಕಪ್ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ 4ನೇ ತಂಡವಾಗಿ ಸೆಮಿ ಫೈನಲ್‍ಗೆ ಆಯ್ಕೆ ಆಗಿದೆ. ಟೀಂ ಇಂಡಿಯಾಗೂ ಮೊದಲು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿ ಫೈನಲ್‍ಗೆ ಆರ್ಹತೆ ಪಡೆದಿದ್ದವು.
Pakistan end on 315/9
Babar fell for 94 and Imam for 100 before Bangladesh struck back to keep the chase within range.
Who's winning this one?#CWC19 | #PAKvBAN pic.twitter.com/hG2XxwWuwt
— ICC Cricket World Cup (@cricketworldcup) July 5, 2019