ದಿನ ಭವಿಷ್ಯ: 01-07-2019

Public TV
1 Min Read
DINA BHAVISHYA 5 5 1 1

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಸೋಮವಾರ, ರೋಹಿಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:39 ರಿಂದ 9:15
ಗುಳಿಕಕಾಲ: ಮಧ್ಯಾಹ್ನ 2:03 ರಿಂದ 3:39
ಯಮಗಂಡಕಾಲ: ಬೆಳಗ್ಗೆ 10:51 ರಿಂದ 12:27

ಮೇಷ: ದೂರ ಪ್ರಯಾಣದಿಂದ ತೊಂದರೆ, ಪಾಪ ಕಾರ್ಯಕ್ಕೆ ಮನಸ್ಸು, ಅನಿರೀಕ್ಷಿತ ಖರ್ಚು, ಗುರುಗಳ ಭೇಟಿ, ತೀರ್ಥಕ್ಷೇತ್ರ ದರ್ಶನ.

ವೃಷಭ: ಇಷ್ಟಾರ್ಥ ಸಿದ್ಧಿಸುವುದು, ಮನೆಯಲ್ಲಿ ಅಶಾಂತಿ, ಪರರಿಂದ ಮೋಸ ಹೋಗುವ ಸಾಧ್ಯತೆ, ಆಲಸ್ಯ ಮನೋಭಾವ.

ಮಿಥುನ: ಅಮೂಲ್ಯ ವಸ್ತುಗಳ ಖರೀದಿ, ಮನಸ್ಸಿನಲ್ಲಿ ದೂರಾಲೋಚನೆ, ಹಣಕಾಸು ನಷ್ಟ, ಉದರ ಬಾಧೆ, ಶತ್ರುಗಳಿಂದ ತೊಂದರೆ.

ಕಟಕ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಭೂ ವಿಚಾರದಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು, ನಂಬಿಕಸ್ಥರಿಂದ ದ್ರೋಹ, ಅಪಘಾತವಾಗುವ ಸಾಧ್ಯತೆ.

ಸಿಂಹ: ವ್ಯಾಪಾರದಲ್ಲಿ ಲಾಭ, ಧನ ಲಾಭ, ಮಾನಸಿಕ ವ್ಯಥೆ, ಆತ್ಮೀಯರೊಂದಿಗೆ ಮನಃಸ್ತಾಪ, ಶತ್ರುಗಳ ಬಾಧೆ, ಅನಾವಶ್ಯಕ ಮಾತಿನಿಂದ ಕಲಹ.

ಕನ್ಯಾ; ಮಿತ್ರರಿಂದ ಮಾಡುವ ಕೆಲಸಕ್ಕೆ ವಿರೋಧ, ಕೆಲಸದಲ್ಲಿ ಅತಿಯಾದ ಒತ್ತಡ, ಮಾನಸಿಕ ಉದ್ವೇಗಕ್ಕೆ ಒಳಗಾಗುವಿರಿ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.

ತುಲಾ: ಕೆಲಸ ಕಾರ್ಯಗಳಲ್ಲಿ ನಿಧಾನವಾದ ಪ್ರಗತಿ, ಮನಸ್ಸಿನಲ್ಲಿ ಗೊಂದಲ, ಜೊತೆಗಿದ್ದವರ ಜೊತೆ ವೈಮನಸ್ಸು, ಈ ದಿನ ಮಿಶ್ರ ಫಲ.

ವೃಶ್ಚಿಕ: ಆದಾಯ ಕಡಿಮೆ, ಅಧಿಕವಾದ ಖರ್ಚು, ವಾಹನದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅಶುಭ ಸುದ್ದಿ ಕೇಳುವಿರಿ, ತಾಳ್ಮೆಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳಿ.

ಧನಸ್ಸು: ಹಿತೈಷಿಗಳಿಂದ ನೆರವು, ವ್ಯಾಪಾರಿಗಳಿಗೆ ಅಲ್ಪ ಲಾಭ, ಆರೋಗ್ಯದಲ್ಲಿ ಸಮಸ್ಯೆ, ಅಕಾಲ ಭೋಜನ.

ಮಕರ: ನೌಕರಿಯಲ್ಲಿ ಕಿರಿಕಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಶತ್ರುಗಳ ನಾಶ, ವ್ಯವಹಾರಿಕ ಒಪ್ಪಂದಗಳಿಂದ ಲಾಭ.

ಕುಂಭ: ಧಾಮಿಕ ಆಚರಣೆಗಳಿಂದ ಚಿಂತೆ, ಸ್ಥಳ ಬದಲಾವಣೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ, ನಂಬಿಕಸ್ಥರಿಂದ ಮೋಸ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ.

ಮೀನ: ಮಧ್ಯಸ್ಥಿಕೆ ವ್ಯವಹಾರದಿಂದ ಲಾಭ, ಸ್ತ್ರೀಯರಿಗೆ ಲಾಭ, ಭಾಗ್ಯ ವೃದ್ಧಿ, ಸ್ವ ಸಾಮಥ್ರ್ಯದಿಂದ ಸಾಧನೆ ಮಾಡುವಿರಿ.

Share This Article
Leave a Comment

Leave a Reply

Your email address will not be published. Required fields are marked *