ಚಂಡಿಗಢ್: ಸಹೋದರಿಯ ಮದುವೆಗೆ ರಜೆ ನೀಡಲಿಲ್ಲ ಎಂದು ಕರ್ನಾಟಕದ ವೈದ್ಯ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣಾದ ರೋಹ್ಟಕ್‍ನಲ್ಲಿ ನಡೆದಿದೆ.
ಓಂಕಾರ್ (30) ಆತ್ಮಹತ್ಯೆ ಮಾಡಿಕೊಂಡ ವೈದ್ಯ. ಓಂಕಾರ್ ಮೂಲತಃ ಧಾರವಾಡದವರಾಗಿದ್ದು, ಹರಿಯಾಣಾದಲ್ಲಿ ಎಂಡಿ ಕೋರ್ಸ್ ಮಾಡುತ್ತಿದ್ದರು. ಸಹೋದರಿ ಮದುವೆಗೆ ರಜೆ ನೀಡಲಿಲ್ಲ ಎಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರೋಹ್ಟಕ್ ಪೊಲೀಸ್ ಠಾಣೆಯ ಎಸ್‍ಎಚ್‍ಓ ಕೈಲಾಶ್ ಚಂದರ್ ಹೇಳಿದ್ದಾರೆ.
ತಂಡದ ಮುಖ್ಯಸ್ಥೆಯ ಕಿರುಕುಳ ತಾಳಲಾರದೇ ಓಂಕಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಓಂಕಾರ್ ತನ್ನ ಸಾವಿನ ಬಗ್ಗೆ ಯಾವುದೇ ಡೆತ್‍ನೋಟ್ ಬರೆದಿಲ್ಲ. ಆದರೆ ತಂಡದ ಮುಖ್ಯಸ್ಥ ಓಂಕಾರ್ ಗೆ ಕಿರುಕುಳ ನೀಡುತ್ತಿದ್ದರು ಎಂದು ಆತನ ಸಹದ್ಯೋಗಿಗಳು ಹಾಗೂ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಕೆಲವು ದಿನಗಳ ಹಿಂದೆ ಓಂಕಾರ್ ಸಹೋದರಿಯ ಮದುವೆ ಇತ್ತು. ಆದರೆ ಸಹೋದರಿಯ ಮದುವೆಗೆ ಹೋಗಲು ತಂಡದ ಮುಖ್ಯಸ್ಥೆ ಓಂಕಾರ್ ನಿಗೆ ಅನುಮತಿ ನೀಡಲಿಲ್ಲ. ಹಾಗಾಗಿ ಆತ ಆತ್ನಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಸ್‍ಎಚ್‍ಓ ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಈ ಕೇಸ್‍ಗೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿಲ್ಲ. ಈ ಬಗ್ಗೆ ಇನ್ನೂ ವಿಚಾತಣೆ ನಡೆಯುತ್ತಿದೆ ಎಂದು ಕೈಲಾಶ್ ತಿಳಿಸಿದ್ದಾರೆ. ಓಂಕಾರ್ ಸಾವಿಗೆ ಕಾರಣರಾದವರನ್ನು ಶೀಘ್ರದಲ್ಲೇ ಬಂಧಿಸಿ ಎಂದು ಸಹದ್ಯೋಗಿಗಳು ಆಗ್ರಹಿಸಿದ್ದಾರೆ.