ರಾಯಚೂರು: ಬಿಜೆಪಿ ನಗರ ಯುವ ಘಟಕದ ಅಧ್ಯಕ್ಷ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ ಲಿಂಗಸುಗೂರಿನಲ್ಲಿ ನಡೆದಿದೆ.
ಲಕ್ಷ್ಮಣ ನಾಯಕ್ (20) ಆತ್ಮಹತ್ಯೆ ಮಾಡಿಕೊಂಡಿರುವ ನಗರ ಯುವ ಘಟಕ ಅಧ್ಯಕ್ಷ. ಲಿಂಗಸುಗೂರು ಪಟ್ಟಣದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಕಾಲೇಜಿಗೆ ಹೋಗಿ ಮನೆಗೆ ಬಂದು ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೂ ಮುನ್ನ ವಾಟ್ಸಪ್‍ನಲ್ಲಿ ಸಾರಿ ಫ್ರೆಂಡ್ಸ್ ಎಂದು ಸ್ಟೇಟಸ್ ಹಾಕಿದ್ದಾರೆ. “ಕಾರಣ ಇಲ್ಲದೇ ಕೆಲವರು ಇಷ್ಟ ಆಗುತ್ತಾರೆ. ಕಾರಣ ಹೇಳದೇ ಕೆಲವರು ದೂರ ಆಗುತ್ತಾರೆ. ಪ್ರೀತಿ ಮಾಡುವುದಕ್ಕೆ ಕಾರಣ ಇರಲ್ಲ, ಬಿಟ್ಟು ಹೋಗುವುದಕ್ಕೂ ಕಾರಣ ಇರಲ್ವಾ” ಎಂದು ಮತ್ತೊಂದು ಸ್ಟೇಟಸ್ ಅಪ್‍ಡೇಟ್ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ರೇಮ ವೈಫಲ್ಯದಿಂದ ಲಕ್ಷ್ಮಣ್ ನಾಯಕ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮೃತ ನಾಯಕ್ ತಾಯಿ ಪರೀಕ್ಷೆಯಲ್ಲಿ ತಾನೂ ಪಾಸ್ ಆಗುವುದಿಲ್ಲ ಎಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಲಿಂಗಸಗೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.