ಬೆಂಗಳೂರು: ನಟಿ ವಿಜಯಲಕ್ಷ್ಮಿ ಮಾಡಿದ್ದ ಲೈಂಗಿಕ ಕಿರುಕುಳ ಆರೋಪವನ್ನು ನಟ ರವಿ ಪ್ರಕಾಶ್ ಅವರು ತಳ್ಳಿ ಹಾಕಿದ್ದು, ಅವರು ನನ್ನನ್ನು ನೋಡಿ ನಮ್ಮ ತಂದೆ ನೋಡಿದಂತೆ ಆಯಿತು ಅಂತ ಹೇಳಿದ್ದರು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರವಿ ಪ್ರಕಾಶ್, ನಾನು ಮಾಧ್ಯಮಗಳಲ್ಲಿ, ಯೂಟ್ಯೂಬ್ ಚಾನೆಲ್ ಗಳಲ್ಲಿ ನೋಡಿದಾಗ ಅವರು ಹಣದ ಸಹಾಯ ಕೇಳಿದ್ದರು. ಹೀಗಾಗಿ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಫ್ರೆಬವರಿ 24 ರಂದು ನಾನು ಫೋನ್ ಮಾಡಿ ಮೇಡಂ ನಿಮಗೆ ಹಣ ಬೇಕಿದ್ದರೆ ನನಗೆ ಹೇಳಿ. ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದ್ದೆ. ಅದಕ್ಕೆ ಅವರ ಸಹೋದರಿ ಫೆಬ್ರವರಿ 27 ರಂದು ಫೋನ್ ಮಾಡಿ ಇಂದು ಡಿಸ್ಚಾರ್ಜ್ ಮಾಡುತ್ತಾರೆ. ಸುಮಾರು 40-50 ಸಾವಿರ ಬೇಕಾಗುತ್ತದೆ. ನೀವು ಒಳ್ಳೆಯವರು ಎಂದು ಅನ್ನಿಸಿತು. ಅದಕ್ಕೆ ನಾವು ನಿಮ್ಮ ಸಹಾಯ ಕೇಳುತ್ತಿದ್ದೇವೆ ಎಂದು ಕೇಳಿದ್ದರು. ಅದಕ್ಕೆ ನಾನು ಕೊಡುತ್ತೇನೆ ಎಂದು ಹೇಳಿದ್ದೆ.
ತಕ್ಷಣ ನಾನು ಆಸ್ಪತ್ರೆಗೆ ಹೋಗಿ ವಿಜಯಲಕ್ಷ್ಮಿ ಅವರ ಸಹೋದರಿಯನ್ನು ಭೇಟಿ ಮಾಡಿ 1 ಲಕ್ಷ ಹಣವನ್ನು ಕೊಟ್ಟೆ. ಯಾಕೆಂದರೆ ಅವರು, ಎಲ್ಲರೂ ಸಿನಿಮಾ ಅವಕಾಶ ಕೇಳುತ್ತಿದ್ದೆ ಎಂದು ಎಲ್ಲರೂ ಅವಕಾಶ ಕೊಟ್ಟಿದ್ದಾರೆ. ಆದರೆ ಸಿನಿಮಾ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ನನಗೆ ಇನ್ನು ಒಂದು ತಿಂಗಳು ಬೆಡ್ ರೆಸ್ಟ್ ಬೇಕು. ನಮ್ಮನ್ನು ಯಾರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ಈ ಕಾರಣದಿಂದ ನಾನು ಅವರಿಗೆ 1 ಲಕ್ಷ ಹಣ ಕೊಟ್ಟೆ. ಈ ವೇಳೆ ನನಗೆ ವಿಜಯಲಕ್ಷ್ಮಿ ಸಹೋದರಿ ಅವರು ಕಾಲಿಗೆ ಬಿದ್ದು, ನೀವು ದೇವರು ಎಂದು ನಮಸ್ಕಾರ ಮಾಡಿದ್ದರು. ನಾನು ವಿಜಯಲಕ್ಷ್ಮಿ ಅವರನ್ನು ಕೂಡ ನೋಡಿಲ್ಲ, ಹಣ ಕೊಟ್ಟು ಮನೆಗೆ ಬಂದೆ. ಬಳಿಕ ಅವರು ಫೋನಿನಲ್ಲಿ ಧನ್ಯವಾದ ತಿಳಿಸಿದ್ದರು ಎಂದು ರವಿಪ್ರಕಾಶ್ ತಿಳಿಸಿದ್ದಾರೆ.
ಆದಾದ ಮೂರು ದಿನಗಳ ನಂತರ ಡಿಸ್ಚಾರ್ಜ್ ಆಯಿತು ಎಂದು ಹೇಳಿದ್ದರು. ಬಳಿಕ ಮತ್ತೆ ಫೋನ್ ಮಾಡಿ ಜಯದೇವ ಆಸ್ಪತ್ರೆಗೆ ಬನ್ನಿ ಎಂದಿದ್ದರು. ನಾನು ಹೋದೆ ಆಗ ನಾನು ಮೊದಲ ಬಾರಿಗೆ ಐಸಿಯುನಲ್ಲಿ ವಿಜಯಲಕ್ಷ್ಮಿ ಅವರನ್ನು ನೋಡಿ ಮಾತನಾಡಿಸಿದೆ. ಆಗ ಅವರು ಕಣ್ಣೀರು ಹಾಕಿ, ನಿಮ್ಮನ್ನು ನೋಡಿದರೆ ಗೊತ್ತಾಗುತ್ತದೆ ನೀವು ತುಂಬಾ ಒಳ್ಳೆಯವರು ಎಂದು, ನಮ್ಮ ಕುಟುಂಬದವರ ಜೊತೆ ಇರಿ. ನಿಮ್ಮನ್ನು ನೋಡಿ ನಮ್ಮ ತಂದೆಯನ್ನು ನೋಡಿದಂತೆ ಆಯಿತು ಎಂಬ ಮಾತನ್ನು ಹೇಳಿದ್ದರು ಎಂದರು.
ಅವರು ಕೇಳಿದ ಪ್ರತಿಯೊಂದು ಮನವಿಯ ಮೆಸೇಜ್ ಹಾಗೂ ಕಾಲ್ ರೆಕಾರ್ಡಿಂಗ್ ನನ್ನ ಬಳಿ ಇದೆ. ನಮ್ಮನ್ನು ಅಷ್ಟು ಹುಡುಗಾಟವಾಗಿ ತೆಗೆದುಕೊಳ್ಳಬೇಡಿ. ಗಂಡಸರು ಅಷ್ಟೂ ಚೀಪ್ ಅಲ್ಲ. ನಾನು ಹೆಣ್ಣು ಮಕ್ಕಳಿಗೆ ಗೌರವ ಕೊಡುತ್ತೇವೆ. ನಾನು ಮನಸ್ಸಿನಿಂದ ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡಿದ್ದೇನೆ. ಮನಸ್ಸನ್ನು ಕ್ಲೀನ್ ಮಾಡಿಕೊಳ್ಳಿ, ಚೆನ್ನಾಗಿರುತ್ತೀರಿ ಎಂದು ರವಿ ಪ್ರಕಾಶ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv