ಸಿದ್ದರಾಮಯ್ಯ ಊರಲ್ಲೇ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ..!

Public TV
1 Min Read
MYS BJP JDS

ಮೈಸೂರು: ಮೈಸೂರು ಜಿಲ್ಲಾಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್ ಗೆ ಕೈ ಕೊಡಲು ಜೆಡಿಎಸ್ ನಿರ್ಧರಿಸಿದೆ.

ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸಲು ಜೆಡಿಎಸ್ ಮುಂದಾಗಿದ್ದು, ಈ ಹಿಂದೆ 30 ತಿಂಗಳ ಅವಧಿಗೆ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಳ್ಳಲಾಗಿತ್ತು. ಅಧ್ಯಕ್ಷರಾಗಿ ಜೆಡಿಎಸ್, ಉಪಾಧ್ಯಕ್ಷರಾಗಿ ಬಿಜೆಪಿ ಸದಸ್ಯರನ್ನ ಆಯ್ಕೆ ಮಾಡಲಾಗಿತ್ತು. ಈಗ 30 ತಿಂಗಳ ಅವಧಿ ಮುಗಿದ ಬಳಿಕ ಆ ಸ್ಥಾನಕ್ಕೆ ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್ ಮತ್ತು ಜೆಡಿಎಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಬರುತ್ತಾರೆ ಎಂದು ಕಾಂಗ್ರೆಸ್ ನಾಯಕರು ಆಶಯ ಪಟ್ಟಿದ್ದರು. ಆದರೆ ಇದೀಗ ಮತ್ತೆ ಅದೇ ಮೈತ್ರಿಯನ್ನು ಜೆಡಿಎಸ್ ಮುಂದುವರಿಸಲಿದೆ ಎಂದು ಹೇಳಲಾಗುತ್ತಿದೆ.

vlcsnap 2019 02 22 09h54m22s142

ಜೆಡಿಎಸ್‍ನ ಈ ನಿರ್ಧಾರದಿಂದ ಕಾಂಗ್ರೆಸ್‍ಗೆ ಮುಜುಗರವಾಗಿದ್ದು, ಜಿಲ್ಲಾಪಂಚಾಯ್ತಿಯಲ್ಲಿ ಹಳೆ ಮೈತ್ರಿ ಮುಂದುವರಿಸಲು ಎಲ್ಲ ಜೆಡಿಎಸ್ ಸದಸ್ಯರನ್ನ ಹಾಗೂ ಬಿಜೆಪಿ ಸದಸ್ಯರನ್ನು ರೆಸಾರ್ಟ್ ಗೆ ಕರೆದೊಯ್ಯಲು ನಾಯಕರು ನಿರ್ಧರಿಸಿದ್ದಾರೆ. ಇಂದು ರೆಸಾರ್ಟ್ ನಲ್ಲಿ ಉಳಿಸಿ ನಾಳೆ (ಶನಿವಾರ) ನಡೆಯಲಿರುವ ಜಿಲ್ಲಾಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸದಸ್ಯರನ್ನು ನೇರವಾಗಿ ಕರೆದುಕೊಂಡು ಬರಲಾಗುತ್ತದೆ.

ಈಗಾಗಲೇ ಹಳೆ ದೋಸ್ತಿಯನ್ನೇ ಮುಂದುವರಿಸುತ್ತೇನೆ ಎಂದು ಜೆಡಿಎಸ್ ಸ್ಪಷ್ಟನೆ ಕೊಟ್ಟಿದೆ. ಈ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ವಿಧಾನಸೌಧಕ್ಕಾಗಿ, ಸ್ಥಳೀಯ ಮಟ್ಟದಲ್ಲಿ ಅಲ್ಲ ಎಂಬ ಸಂದೇಶ ರವಾನೆ ಆಗಿದೆ. ನಾವು ಈಗಾಗಲೇ ಬಿಜೆಪಿ ಜೊತೆ 30 ತಿಂಗಳ ಅಧಿಕಾರ ನಡೆಸಿದ್ದೇವೆ. ಅವರ ಜೊತೆಗೆ ಮುಂದುವರಿಸುತ್ತೇವೆ ಎಂಬ ಮಾತು ಕೂಡ ಕೊಟ್ಟಿದ್ದೇವೆ. ಹೀಗಾಗಿ ಬಿಜೆಪಿಗೆ ನಾವು ಈ ಸಂದರ್ಭದಲ್ಲಿ ಮೋಸ ಮಾಡುವುದಿಲ್ಲ ಎಂದು ಜೆಡಿಎಸ್ ಸ್ಪಷ್ಟನೆ ಕೊಟ್ಟಿದೆ.

Suttur Math BSY HDK

ಜಿಲ್ಲಾ ಪಂಚಾಯ್ತಿ ಒಟ್ಟು ಸದಸ್ಯರ ಬಲಾಬಲ 49 ಆಗಿದ್ದು, ಜೆಡಿಎಸ್- 21 ಇದ್ದು, ಕಾಂಗ್ರೆಸ್ – 20 ಮತ್ತು ಬಿಜೆಪಿ – 08 ಸ್ಥಾನವನ್ನು ಹೊಂದಿದೆ. ಒಟ್ಟು ಮ್ಯಾಜಿಕ್ ನಂಬರ್ ಗೆ 25 ಸ್ಥಾನ ಬೇಕಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *