ತಮ್ಮದೇ ಶೈಲಿಯ ಹಾಸ್ಯ ಪಾತ್ರಗಳಿಂದಲೇ ಫೇಮಸ್ ಆಗಿ, ಬಹು ಬೇಡಿಕೆಯ ಕಲಾವಿದನಾಗಿ ನೆಲೆ ಕಂಡುಕೊಂಡಿರುವವರು ತಬಲಾ ನಾಣಿ. ಎಂಥಾ ಪಾತ್ರಗಳ್ನಾದರೂ ನಿಭಾಯಿಸೋ ಛಾತಿ ಹೊಂದಿರೋ ನಾಣಿ ಫಿವೋಟ್ ಪಾತ್ರಗಳಿಗೆ ಭಲೇ ಫೇಮಸ್ಸು. ಓರ್ವ ಕಲಾವಿದ ಒಂದು ಶೇಡಿನಲ್ಲಿ ಗೆದ್ದರೆ ಮತ್ತೆ ಮತ್ತೆ ಅಂಥಾದ್ದೇ ಪಾತ್ರಗಳಿಗೆ ಕಟ್ಟಿ ನಿಲ್ಲಿಸೋ ಪರಿಪಾಠವಿದೆ. ನಾಣಿ ಕೂಡಾ ಅದನ್ನೇ ಅನುಭವಿಸಿದ್ದರು. ಆದರೆ ಕರಿಯಪ್ಪನ ಅವತಾರದಲ್ಲಿ ಅವರ ಕೆಮಿಸ್ಟ್ರಿಯೇ ಬದಲಾಗಿ ಹೋದಂತಿದೆ!
ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲಿ ತಬಲಾ ನಾಣಿಯವರದ್ದು ಪ್ರಧಾನ ಪಾತ್ರ. ನಿರ್ದೇಶಕ ಕುಮಾರ್ ಒಂದಿಡೀ ಕಥೆಯನ್ನು ಹೊಸಾ ಜಾಡಿನಲ್ಲಿ ಹೊಸೆದಿರೋದಲ್ಲದೇ ಪ್ರತೀ ಪಾತ್ರಗಳನ್ನೂ ಕೂಡಾ ಅಷ್ಟೇ ಹೊಸತನದೊಂದಿಗೆ ರೂಪಿಸಿದ್ದಾರಂತೆ. ಈ ಕಾರಣದಿಂದಲೇ ತಬಲಾ ನಾಣಿಯವರಿಗೂ ಇಮೇಜಿನಾಚೆಯ ಪಾತ್ರವೇ ಸಿಕ್ಕಿದೆ.
ಈ ಚಿತ್ರದಲ್ಲಿ ತಬಲಾ ನಾಣಿ ಕರಿಯಪ್ಪನ ಪಾತ್ರ ಮಾಡಿದ್ದಾರೆ. ಇದು ಮಗನ ಬದುಕಲ್ಲಿ ಮೂಡಿಕೊಳ್ಳೋ ಸಿಕ್ಕುಗಳನ್ನು ಬಿಡಿಸುತ್ತಲೇ ಅತೀವ ಜೀವನ ಪ್ರೇಮ ಹೊಂದಿರೋ ಪಾತ್ರ. ನಗುವಿನ ಮೂಲಕವೇ ಎಲ್ಲ ಭಾವಗಳನ್ನೂ ಹೊಮ್ಮಿಸೋ ಸವಾಲು ಕೂಡಾ ಇದಕ್ಕಿತ್ತು. ಅದನ್ನು ನಾಣಿ ಲೀಲಾಜಾಲವಾಗಿ ನಿಭಾಯಿಸಿದ್ದಾರೆಂಬುದಕ್ಕೆ ಟ್ರೈಲರ್ ಸಾಕ್ಷಿ ಹೇಳಿದೆ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv