ಭಿಕ್ಷೆ ಬೇಡುತ್ತಿದ್ದ ಯೋಧನ ನೆರವಿಗೆ ಧಾವಿಸಿದ ಗಂಭೀರ್

Public TV
1 Min Read
Gautam Gambhir

ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಭಿಕ್ಷೆ ಬೇಡುತ್ತಿದ್ದ ಮಾಜಿ ಯೋಧನ ಸ್ಥಿತಿ ಕಂಡು ನೆರವಿಗೆ ಧವಿಸಿದ್ದು, ಅವರ ಫೋಟೋ ಟ್ವೀಟ್ ಮಾಡಿ ಸೂಕ್ತ ಕ್ರಮಕೈಗೊಳ್ಳುವಂತೆ ರಕ್ಷಣಾ ಇಲಾಖೆಗೆ ಮನವಿ ಮಾಡಿದ್ದಾರೆ.

ಈ ಕುರಿತು ಮಾಜಿ ಯೋಧ ಭಿಕ್ಷೆ ಬೇಡುತ್ತಿರುವ ಫೋಟೋದೊಂದಿಗೆ ಮಾಹಿತಿ ನೀಡಿರುವ ಗಂಭೀರ್, ತಾಂತ್ರಿಕ ಕಾರಣಗಳಿಂದ ಇವರಿಗೆ ಸೇನೆಯ ಸೌಲಭ್ಯಗಳು ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಪೀತಾಂಬರನ್ ಎಂಬವರು 1965 ರಿಂದ 1971ರ ಅವಧಿಯಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು. ಈ ಕುರಿತು ಅವರ ಐಡಿ ಪರಿಶೀಲನೆ ಮಾಡಿದ ವೇಳೆ ಸ್ಪಷ್ಟ ಮಾಹಿತಿ ಲಭಿಸಿದೆ. ಆದರೆ ಕೆಲ ತಾಂತ್ರಿಕ ಸಮಸ್ಯೆಗಳಿಂದ ಅವರಿಗೆ ಇಲಾಖೆಯ ಸೌಲಭ್ಯಗಳು ಲಭ್ಯವಾಗಿಲ್ಲ. ಇವರು ಸದ್ಯ ಜೀವನಕ್ಕಾಗಿ ದೆಹಲಿಯ ಕನಾಟ್ ಪ್ಲೇಸ್ ನಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ರಕ್ಷಣಾ ಸಚಿವಾಲಯ ಹಾಗೂ ರಕ್ಷಣಾ ವಕ್ತಾರರರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಗಂಭೀರ್ ಟ್ವೀಟ್ ಮಾಡಿರುವ ಫೋಟೋದಲ್ಲೂ ಕೂಡ ಮಾಜಿ ಸೈನಿಕರಾದ ಪೀತಾಂಬರನ್ ಅವರು ತಮ್ಮ ವಿವರಗಳನ್ನ ಬರೆದಿರುವ ಬೋರ್ಡ್ ಹಿಡಿದು ಸಹಾಯ ಕೇಳಿದ್ದಾರೆ. ಇತ್ತೀಚೆಗೆ ನನಗೆ ಅಪಘಾತವಾಗಿದ್ದು ಚಿಕಿತ್ಸೆ ಪಡೆಯಲು ನನ್ನ ಬಳಿ ಹಣ ಇಲ್ಲ. ಆದ್ದರಿಂದ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

DyateckXQAEQtBO

ಗೌತಮ್ ಗಂಭೀರ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಇಲಾಖೆ, ನಿಮ್ಮ ಕಾಳಜಿಗೆ ಧನ್ಯವಾದಗಳು ಬಹುಬೇಗ ಈ ಕುರಿತು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತ ಇಲಾಖೆಯ ಶೀಘ್ರ ಪ್ರತಿಕ್ರಿಯೆಗೆ ಗಂಭೀರ್ ಧನ್ಯವಾದ ತಿಳಿಸಿದ್ದಾರೆ. ಗೌತಮ್ ಗಂಭೀರ್ ಅವರ ಈ ಟ್ವೀಟ್ ಗೆ 12 ಸಾವಿರ ಮಂದಿ ಲೈಕ್ ಮಾಡಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿ ರೀ ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *