ರಾಯಚೂರು: ಕಾಂಗ್ರೆಸ್ ಶಾಸಕರೊಬ್ಬರು ಬೈಕ್ ಓಡಿಸಿಕೊಂಡು ಜನರ ಸಮಸ್ಯೆಗಳನ್ನು ಆಲಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜನರ ಮೆಚ್ಚುಗೆ ಪಡೆದಿದೆ.
ಅಧಿಕಾರದಲ್ಲಿದ್ದವರು ಕಾರಲ್ಲಿಯೇ ಓಡಾಡುವುದು ಹೆಚ್ಚು. ಆದ್ರೆ ಜಿಲ್ಲೆಯ ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್ ಹೂಲಿಗೇರಿ ಅವರು ಪಟ್ಟಣದಲ್ಲಿ ಬೈಕ್ ರೈಡ್ ಮಾಡಿಕೊಂಡೇ ಜನರ ಸಮಸ್ಯೆಗಳನ್ನ ಆಲಿಸಿ ಗಮನ ಸೆಳೆದಿದ್ದಾರೆ. ಲಿಂಗಸುಗೂರಿನ ಗಲ್ಲಿ ಗಲ್ಲಿಗಳಲ್ಲಿ ಬೈಕ್ ರೈಡ್ ಮಾಡಿ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆಗಳನ್ನ ಪರಿಶೀಲಿಸಿದ ಶಾಸಕರು, ಅಲ್ಲಿನ ನಿವಾಸಿಗಳ ಜೊತೆ ಮಾತನಾಡಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸುವಂತೆ ಭರವಸೆ ನೀಡಿದ್ದಾರೆ.
ಕಾರನ್ನು ಬದಿಗಿಟ್ಟು ಶಾಸಕರು ಬೈಕ್ನಲ್ಲಿ ಹೋಗಿದ್ದರಿಂದ ಅಧಿಕಾರಿಗಳು ಸಹ ಬೈಕ್ನಲ್ಲಿಯೇ ಅವರನ್ನು ಹಿಂಬಾಲಿಸಿದರು. ಈ ವೇಳೆ ಸಿಸಿ ರಸ್ತೆಗಳು (ಕಾಂಕ್ರೀಟ್ ರೋಡ್) ಇಲ್ಲದ ಬಡಾವಣೆಗಳನ್ನ ಗುರುತಿಸಿ ಮಾಹಿತಿ ಕೊಡುವಂತೆ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಶಾಸಕ ಹೂಲಿಗೇರಿ ಸೂಚಿಸಿದ್ದಾರೆ. ಕಾಂಗ್ರೆಸ್ ಶಾಸಕ ಡಿ.ಎಸ್ ಹೂಲಿಗೇರಿ ಅವರು ಬೈಕ್ ರೈಡ್ ಮಾಡಿ ಪಟ್ಟಣದಲ್ಲಿ ಓಡಾಡಿರೋ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://www.youtube.com/watch?v=WiT7lberodA
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv