ಬೆಂಗಳೂರು: ನಟ, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಿಚ್ಚ ಸುದೀಪ್ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ.
ಜನವರಿ 2ರಂದು ಜೆಪಿ ನಗರದ ಸುದೀಪ್ ಮನೆ ಮೇಲೆ ದಾಳಿ ನಡೆಸಿದ್ದ ಐಟಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿತ್ತು. ಆದರೆ ಬೇರೆ ಬೇರೆ ಕೆಲಸಗಳ ಒತ್ತಡ, ಶೂಟಿಂಗ್ ಶೆಡ್ಯೂಲ್ ನಿಮಿತ್ತ 10 ದಿನಗಳ ಕಾಲ ಸುದೀಪ್ ಕಾಲಾವಕಾಶ ಕೇಳಿದ್ದರು. ಆದ್ದರಿಂದ ಇಂದು ನಟ ಸುದೀಪ್ ವಿಚಾರಣೆಗೆಂದು ಕ್ವೀನ್ಸ್ ರಸ್ತೆ ಆದಾಯ ತೆರಿಗೆ ಇಲಾಖೆ ಕಚೇರಿಗೆ ಹಾಜರಾಗುತ್ತಿದ್ದಾರೆ. ಇದನ್ನೂ ಓದಿ: ಟಾರ್ಗೆಟ್ ಮಾಡಿಲ್ಲ, ಐಟಿ ದಾಳಿಗೆ ಕಾರಣ ಇರುತ್ತೆ: ನಟ ಸುದೀಪ್
ಅಷ್ಟೇ ಅಲ್ಲದೇ ಐಟಿ ವೇಳೆ ಸಿಕ್ಕ ಸ್ತಿರಾಸ್ಥಿ, ಚರಾಸ್ಥಿ, ಹೂಡಿಕೆಗಳು, ವ್ಯಾಪಾರ ವಹಿವಾಟು ಮತ್ತು ಚಿನ್ನಾಭರಣಗಳ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ. ದಾಳಿ ಬಳಿಕ ಐಟಿ ಅಧಿಕಾರಿಗಳು 2 ಬ್ಯಾಗ್‍ಗಳಲ್ಲಿ ಕಾಗದಪತ್ರಗಳು, ದಾಖಲೆಗಳು ಹಾಗೂ ಹೂಡಿಕೆ ಪತ್ರಗಳನ್ನ ನಟ ಸುದೀಪ್ ಮನೆಯಿಂದ ತೆಗೆದುಕೊಂಡು ಹೋಗಿದ್ದರು. ಇವುಗಳೆಲ್ಲದಕ್ಕೂ ಸುದೀಪ್ ಬಳಿ ಸ್ಪಷ್ಟನೆ ಪಡೆದು ಅಧಿಕಾರಿಗಳು ಸಹಿ ಹಾಕಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಸುದೀಪ್ ಮನೆಯಲ್ಲಿ ಐಟಿ ರೇಡ್ ಅಂತ್ಯ- ಬೆಳಗ್ಗೆ ತೆರಳಿದ ಬಳಿಕ ಮತ್ತೆ ಅಧಿಕಾರಿಗಳು ಆಗಮಿಸಿದ್ದು ಯಾಕೆ?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv