ಬೆಂಗಳೂರು: ನಟ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ರಾಧಾಕೃಷ್ಣನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪೀತಿಯಿಂದ ಶುಭಾಶಯವನ್ನು ತಿಳಿಸಿದ್ದಾರೆ.
ಜನವರಿ 6 ಅಂದರೆ ಭಾನುವಾರ ಸುದೀಪ್ ಅವರ ಪತ್ನಿ ಪ್ರಿಯಾ ಅವರ ಹುಟ್ಟುಹಬ್ಬವಿತ್ತು. ಆದ್ದರಿಂದ ಪ್ರೀತಿಯ ಪತ್ನಿಗೆ ಸುದೀಪ್ ಅವರು ಟ್ವೀಟ್ ಮಾಡುವ ಮೂಲಕ ಬರ್ತ್ ಡೇ ಶುಭಾಶಯವನ್ನು ಕೋರಿದ್ದಾರೆ.
Can’t thank u enuf for everything ???? … 26 years since I have known u n u’ve been the same from then.
Happy returns priii… wshn u happiness n smiles always.
Yappy yappy bday ????????
Luv n hugs.@iampriya06 pic.twitter.com/Y5ZRUwKMVE
— Kichcha Sudeepa (@KicchaSudeep) January 6, 2019
“ಎಲ್ಲದ್ದಕ್ಕೂ ಕೃತಜ್ಞತೆ ಸಲ್ಲಿಸಲು ಸಾಧ್ಯವಿಲ್ಲ. 26 ವರ್ಷಗಳಿಂದ ಇಬ್ಬರು ಒಟ್ಟಿಗೆ ಇದ್ದು, ಒಬ್ಬೊರನ್ನೊಬ್ಬರು ಅರ್ಥಮಾಡಿಕೊಂಡಿದ್ದೇವೆ. ಜೀವನದಲ್ಲಿ ಯಾವಾಗಲೂ ಸಂತೋಷದಿಂದ ಇರು ಹುಟ್ಟು ಹಬ್ಬದ ಶುಭಾಶಯಗಳು ಪ್ರೀ…” ಎಂದು ಬರೆದು ನಗುವ ಮತ್ತು ಚಿಯರ್ಸ್ ಗ್ಲಾಸ್ ನ ಎಮೋಜಿ ಹಾಕಿ ವಿಶ್ ಮಾಡಿದ್ದಾರೆ. ಜೊತೆಗೆ ಪತ್ನಿ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಪತಿಯ ಶುಭಾಶಯಕ್ಕೆ ಪ್ರಿಯಾ ಅವರು, “ನಿಮ್ಮ ಜೊತೆಗಿನ ಸಮಯದಲ್ಲಿ ನನ್ನ ಪ್ರೀತಿ ಮತ್ತು ಗೌರವದಲ್ಲಿ ಖಂಡಿತವಾಗಿಯೂ ಬದಲಾವಣೆಯಾಗಿದೆ. ಎಲ್ಲದಕ್ಕೂ ಧನ್ಯವಾದಗಳು ಎಂದು ಬರೆದು ನಗುವ ಮತ್ತು ಹಾರ್ಟ್ ಎಮೋಜಿಯನ್ನು ಹಾಕಿ ರೀಟ್ವೀಟ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv